ಕನ್ನಡಪ್ರಭ ವಾರ್ತೆ ಯಾದಗಿರಿ
ಶಹಾಪುರದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನದ ಬಗ್ಗೆ ಶಾಲಾ ಹಂತದಲ್ಲಿ ನಡೆಸಿದ ರಸಪ್ರಶ್ನೆ, ಪ್ರಬಂಧದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಬಳಿಕ ಮಾತನಾಡಿ, ಡಾ.ಅಂಬೇಡ್ಕರ ಅವರು ಜ್ಞಾನದ ಬೆಳಕಿನ ಸೂರ್ಯ ಆಗಿದ್ದಾರೆ. ಅವರು ರಚಿಸಿದ ಸಂವಿಧಾನ ಕೋಟ್ಯಂತರ ಜೀವ ಬೆಳಗಿಸಿದೆ. ನಮ್ಮ ಸಂವಿಧಾನ ಎಲ್ಲ ಕಾನೂನುಗಳಿಗೆ ತಾಯಿಬೇರು ಇದ್ದಂತೆ ಎಂದರು.
ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಸುಪ್ರಿಯಾ ನವಲಿ ಮಾತನಾಡಿ, ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದರಿಂದಲೇ ನಾವು ನ್ಯಾಯಾಧೀಶರಾಗಿ ಬಂದು ನಿಮ್ಮ ಮುಂದೆ ನಿಂತಿದ್ದೇವೆ. ಡಾ. ಅಂಬೇಡ್ಕರರ್‌ಅವರು ಪರಿಶಿಷ್ಟರಿಗೆ ನೀಡಿದ ಸಂವಿಧಾನವಲ್ಲ, ಮನುಕುಲದ ಶೋಷಿತ ಸಮುದಾಯಕ್ಕೆ ಪ್ರಶ್ನಿಸುವ ಹಾಗೂ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ದಯಪಾಲಿಸಿದ ಬಹುದೊಡ್ಡ ಕೊಡುಗೆಯಾಗಿದೆ ಎಂದರು.ಶಾಂತಗೌಡ ಪಾಟೀಲ ಹಾಲಬಾವಿ, ಆರ್.ಎಂ.ಹೊನ್ನಾರಡ್ಡಿ, ಸಾಲೋಮನ್ ಆಲ್ಫ್ರೆಡ್, ಪ್ರಭಾರಿ ಬಿಇಓ ಹನುಮಂತಪ್ಪ ಕುಳಗೇರಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಕೊಲ್ಲೂರ, ಉಪಾಧ್ಯಕ್ಷೆ ಜಯಲಕ್ಷ್ಮಿ, ಬಸರಡ್ಡಿ, ಮಲ್ಲಪ್ಪ ಕುರಿ, ಎಪಿಪಿಗಳಾದ ದಿವ್ಯಾರಾಣಿ ನಾಯಕ, ಮರೆಪ್ಪ ಹೊಸಮನಿ, ಹಯ್ಯಾಳಪ್ಪ ಹೊಸಮನಿ, ರಾಜೇಂದ್ರಕುಮಾರ ಸಾಗರ, ಶರಣಪ್ಪ ಹೊಸಮನಿ ಹಾಗೂ ನ್ಯಾಯಾಂಗ ಇಲಾಖೆಯ ಶಿರಸ್ತೇದಾರರಾದ ಮಲ್ಲಣ್ಣ ಮಡಿವಾಳಕರ್, ಅಯ್ಯಪ್ಪ ಮಕಾಶಿ ನಾಗನಟಗಿ, ಮೊಹ್ಮದ್ ರಿಜ್ವಾನ್ ಅರಿಕೇರಿ ಸೇರಿದಂತೆ ಹಿರಿಯ ಕಿರಿಯ ವಕೀಲರು ಮತ್ತು ನ್ಯಾಯಾಂಗ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
28ವೈಡಿಆರ್5