
ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಪಟ್ಟಣದ ತಿಮ್ಮಪ್ಪನಕಟ್ಟೆ ಮೈದಾನದಲ್ಲಿ ವೇದಿಕೆ ನಿರ್ಮಾಣದ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರ ಬಹುದಿನಗಳ ಆಶಯದಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪೀಠ ಸೇರಿ 25 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಿ ಅನಾವರಣಗೊಳಿಸಲಾಗುತ್ತಿದೆ. ಪಟ್ಟಣದ ಹೃದಯಭಾಗದಲ್ಲಿರುವ ತಿಮ್ಮಪ್ಪನಕಟ್ಟೆಯ ಜಾಗ ತುಂಬಾ ಕಲುಷಿತವಾಗಿತ್ತು. ಸದರಿ ಜಾಗವನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ನೀಡಲಾಗಿತ್ತು. ಅದನ್ನ ಪುರಸಭೆಗೆ ಹಸ್ತಾಂತರ ಮಾಡಿಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ನಿರ್ವಹಣೆಯಿಲ್ಲದೆ ಅನೈರ್ಮಲ್ಯದಿಂದ ಕೂಡಿದ್ದ ಕಾರಣ ಪೂರ್ಣ ಶುದ್ಧೀಕರಿಸಿ ಈ ಸ್ಥಳದಲ್ಲಿ ಐದು ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಪಾರ್ಕ್ ಜತೆಗೆ ಮಕ್ಕಳು ಆಟವಾಡಲು ಚಿಲ್ಡ್ರನ್ ಪಾರ್ಕ್ ಹಾಗೂ ಫುಡ್ ಕೋರ್ಟ್ ಕೂಡ ಸ್ಥಾಪಿಸಲಾಗುತ್ತಿದೆ. ದಿನಪೂರ್ತಿ ಫುಡ್‌ಕೋರ್ಟ್ ನಿರ್ವಹಣೆಗೆ ಅವಕಾಶವಿರುವುದಿಲ್ಲ. ಸಂಜೆ 4 ಗಂಟೆಯಿಂದ ರಾತ್ರಿ 10.30 ಗಂಟೆವರೆಗೆ ಮಾತ್ರ ಚಾಲನೆಯಲ್ಲಿರುತ್ತದೆ. ನಾಗರಿಕರು ಸಂಜೆ ಸಮಯದಲ್ಲಿ ಮಕ್ಕಳೊಂದಿಗೆ ಕಾಲ ಕಳೆಯಲು ಒಂದು ಉತ್ತಮ ಪಾರ್ಕ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.ಬಿಡದಿ ಪುರಸಭೆಗೆ ಆದಾಯದ ಮೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣದ ಸಿಲ್ಕ್ ಫಾರಂ ಬಳಿ 2.24 ಎಕರೆ ಪ್ರದೇಶದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ (ಮಾಲ್)ನಿರ್ಮಿಸಲಾಗುತ್ತಿದೆ. ಬೆಂಗಳೂರಿನಲ್ಲಿರುವ ಮಾದರಿಯಲ್ಲಿ ಎರಡು ಸಿನಿಮಾ ಥಿಯೇಟರ್‌ಗಳುಳ್ಳ ಅತ್ಯಾಧುನಿಕ ರೀತಿಯಲ್ಲಿ ಮಾಲ್ ನಿರ್ಮಿಸಲು ಉದ್ದೇಶಿಸಲಾಗಿದೆ. ರೇಷ್ಮೆ ಇಲಾಖೆಗೆ ಬೇರೆ ಕಡೆ ಜಾಗವನ್ನು ಕೊಟ್ಟು ಪಟ್ಟಣದಲ್ಲಿರುವ ಜಾಗವನ್ನು ಪೌರಾಡಳಿತ ಇಲಾಖೆಗೆ ಬಿಡಿಸಿಕೊಳ್ಳಲಾಗಿದೆ.
ಎಲ್ಲಾ ಸಮುದಾಯದ ಜನರ ಬೇಡಿಕೆಯಂತೆ ಬಿಡದಿಯಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ನಾಡಪ್ರಭು ಕಂಪೇಗೌಡರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು ಮತ್ತು ಪಟ್ಟಣ ಪ್ರದೇಶವನ್ನು ರಸ್ತೆ, ಚರಂಡಿ, ಯುಜಿಡಿ ಮೂಲಭೂತ ಸೌಕರ್ಯಗಳ ಸಹಿತ ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು
ಭಾನುವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಹಾಗೂ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಮೆ ಅನಾವರಣ ಮಾಡುವರು. ಸಚಿವ ಯತೀಂದ್ರ ಸಿದ್ಧರಾಮಯ್ಯ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ರಾಜ್ಯ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ ಸೇರಿದಂತೆ ಮುಂತಾದ ಗಣ್ಯರು ಭಾಗವಹಿಸುವರು ಎಂದು ಸಚಿವ ಬಾಲಕೃಷ್ಣ ಮಾಹಿತಿ ನೀಡಿದರು.
25 ಅಡಿ ಎತ್ತರದ ಪ್ರತಿಮೆ: