ದೋರನಹಳ್ಳಿ: ಡಿ.4 ರಿಂದ ಜ್ಞಾನ ದಾಸೋಹ ಸಮಾರಂಭ

KannadaprabhaNewsNetwork |  
Published : Nov 29, 2026, 01:15 AM IST
ದೋರನಹಳ್ಳಿ ಪಟ್ಟಣದ ಸಿದ್ದಾಶ್ರಮ ಶ್ರೀ ಸಿದ್ದಾರೂಢ ಮಠದ ೩೧ನೇ ವರ್ಷದ ಜ್ಞಾನ ದಾಸೋಹ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಮಠದ ಪೀಠಾಧಿಪತಿಗಳಾದ ಭೀಮಾಶಂಕರಾನಂದ ಅವಧೂತರು ಬಿಡುಗಡೆಗೊಳಿಸಿದರು. ಮಠದ ಭಕ್ತರುಗಳಾದ ಶಿವಪ್ಪ ದಿಗ್ಗಿ, ನಾಗಪ್ಪ ಚಪಾಟಿ, ಶರಣಪ್ಪ ದಿಗ್ಗಿ, ಮರಲಿಂಗ ಕೌದಿ, ಶರಣಪ್ಪ, ಅಯ್ಯಪ್ಪ ದೊರೆ, ಮಹಾಂತೇಶ ದಿಗ್ಗಿ ಇತರರು ಇದ್ದರು. | Kannada Prabha

ಸಾರಾಂಶ

ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ವಿಶ್ವ ಶಾಂತಿಗಾಗಿ 31ನೇ ವರ್ಷದ ಜ್ಞಾನ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಡಿ.4 ರಿಂದ ಕಾರ್ಯಕ್ರಮಗಳು ಜರುಗಲಿವೆ ಎಂದು ಸಮೀಪದ ದೋರನಹಳ್ಳಿನ ಸಿದ್ದಾಶ್ರಮ ಶ್ರೀ ಸಿದ್ದಾರೂಢ ಮಠದ ಪೀಠಾಧಿಪತಿಗಳಾದ ಭೀಮಾಶಂಕರಾನಂದ ಅವಧೂತರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ವಿಶ್ವ ಶಾಂತಿಗಾಗಿ 31ನೇ ವರ್ಷದ ಜ್ಞಾನ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಡಿ.4 ರಿಂದ ಕಾರ್ಯಕ್ರಮಗಳು ಜರುಗಲಿವೆ ಎಂದು ಸಮೀಪದ ದೋರನಹಳ್ಳಿನ ಸಿದ್ದಾಶ್ರಮ ಶ್ರೀ ಸಿದ್ದಾರೂಢ ಮಠದ ಪೀಠಾಧಿಪತಿಗಳಾದ ಭೀಮಾಶಂಕರಾನಂದ ಅವಧೂತರು ಹೇಳಿದ್ದಾರೆ.

ಪಟ್ಟಣದ ಸಿದ್ಧಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಜರುಗಲಿರುವ 31ನೇ ವರ್ಷದ ಜ್ಞಾನ ದಾಸೋಹದ ಭಿತ್ತಿಪತ್ರಗಳನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬ್ರಹ್ಮಲೀನ ರಾಮಾನಂದ ಅವಧೂತರ ಸಂಕಲ್ಪದಂತೆ ಕಳೆದ ಮೂವತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದ ಈ ಜ್ಞಾನದಾಸೋಹ ಕಾರ್ಯಕ್ರಮವನ್ನು ಈ ವರ್ಷವೂ ಹಮ್ಮಿಕೊಳ್ಳಲಾಗಿದೆ ಎಂದರು.

* ಕಾರ್ಯಕ್ರಮದ ಪೂರ್ವ ತಯಾರಿ: ಡಿ.4 ರಿಂದ ಡಿ.8 ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಡಿ.4 ರಂದು ಬೆಳಗ್ಗೆ ಪ್ರಣವ ಧ್ವಜಾರೋಹಣ ಹಾಗೂ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಪ್ರಣವಾನಂದ ಮಹಾಸ್ವಾಮಿಗಳು ಅಧ್ಯಕ್ಷತೆ, ಶಿವಾಚಾರ್ಯ ರತ್ನ ಡಾ.ಗಂಗಾಧರ ಶಿವಾಚಾರ್ಯರು ಮತ್ತು ಶಿವಶೇಖರ ಶ್ರೀ ವಿಶ್ವರಾಧ್ಯ ಶಿವಾಚಾರ್ಯರು ಸಾನಿಧ್ಯ, ಶಿವಲಿಂಗರಾಜೇಂದ್ರ ಶಿವಾಚಾರ್ಯರು, ಅಭಿನವ ಮಹಾಂತ ಶಿವಾಚಾರ್ಯರು ನೇತೃತ್ವ, ಭೀಮಾಶಂಕರಾನಂದ ಅವಧೂತರು ಸಮ್ಮುಖ ವಹಿಸಲಿದ್ದಾರೆ.

ಸತತ ಐದುಗಳ ಕಾಲ ಪರ್ಯಂತರ ನಡೆಯುವ ಈ ಜ್ಞಾನ ದಾಸೋಹ ಕಾರ್ಯಕ್ರಮದಲ್ಲಿ ಗುರುಲಿಂಗ ಮಹಾಸ್ವಾಮಿಗಳು, ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಮಾತೋಶ್ರೀ ಜ್ಞಾನೇಶ್ವರಿ ದೇವಿ, ಸೋಮೇಶ್ವರಾನಂದ ಮಹಾಸ್ವಾಮಿಗಳು, ಬಸವಯ್ಯ ತಾತನವರು, ಅನಂತಾನಂದ ಶರಣರು, ಪರಮಾನಂದ ಶಾಸ್ತ್ರಿ ಇವರುಗಳು ಜ್ಞಾನ ದಾಸೋಹ ನೀಡಲಿದ್ದಾರೆ.

ಡಿ.8 ರ ಬೆಳಗ್ಗೆ ಶ್ರೀ ಸಿದ್ಧಾರೂಢರ ವಿಗ್ರಹಕ್ಕೆ ಪೂಜೆ ಸಲ್ಲಿಸಿ ನಂತರ ಕುಂಭ, ಕಳಸ, ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ದಾರೂಢರ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಮಧ್ಯಾಹ್ನ ಒಂದು ಗಂಟೆಗೆ ಮಹಾಮಂಗಲ ಹಾಗೂ ಮಹಾಪ್ರಸಾದ, ತುಲಾಭಾರ, ಭಜನೆ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ಮಠದ ಭಕ್ತರುಗಳಾದ ಶಿವಪ್ಪ ದಿಗ್ಗಿ, ನಾಗಪ್ಪ ಚಪಾಟಿ, ಶರಣಪ್ಪ ದಿಗ್ಗಿ, ಮರಲಿಂಗ ಕೌದಿ, ಶರಣಪ್ಪ, ಅಯ್ಯಪ್ಪ ದೊರೆ, ಮಹಾಂತೇಶ ದಿಗ್ಗಿ ಇತರರು ಇದ್ದರು.

---ಫೋಟೊ-----

28ವೈಡಿಆರ್1

ದೋರನಹಳ್ಳಿ ಪಟ್ಟಣದ ಸಿದ್ದಾಶ್ರಮ ಶ್ರೀ ಸಿದ್ದಾರೂಢ ಮಠದ ೩೧ನೇ ವರ್ಷದ ಜ್ಞಾನ ದಾಸೋಹ ಕಾರ್ಯಕ್ರಮದ ಭಿತ್ತಿ ಪತ್ರಗಳನ್ನು ಮಠದ ಪೀಠಾಧಿಪತಿಗಳಾದ ಭೀಮಾಶಂಕರಾನಂದ ಅವಧೂತರು ಬಿಡುಗಡೆಗೊಳಿಸಿದರು. ಶಿವಪ್ಪ ದಿಗ್ಗಿ, ನಾಗಪ್ಪ ಚಪಾಟಿ, ಶರಣಪ್ಪ ದಿಗ್ಗಿ, ಮರಲಿಂಗ ಕೌದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅವಕಾಶವನ್ನು ಬಳಸಿಕೊಳ್ಳುವ ಚಾಕಚಕ್ಯತೆ ವಿದ್ಯಾರ್ಥಿಗಳಲ್ಲಿರಬೇಕು: ಕ್ಯಾ. ಚೌಟ
ಆನೆ ದಾಳಿ ಸಮಸ್ಯೆ: ರಾಮಲಿಂಗ ರೆಡ್ಡಿ ಜೊತೆ ಕೋಟ ಚರ್ಚೆ