ಸಾಧನೆಗೆ ಮಿತಿ ಇಲ್ಲ. ಸಾಧಿಸುವವನಿಗೆ ಆಕಾಶವೇ ಪರಿಮಿತಿ. ಹಾಗಾಗಿ ಬರುವ ಅವಕಾಶವನ್ನು ಬಳಸಿಕೊಂಡು ಸಾಧಿಸುವ ಚಾಕಚಕ್ಯತೆ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಇರಬೇಕು ಎಂದು ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.
ಪುತ್ತೂರು : ಸಾಧನೆಗೆ ಮಿತಿ ಇಲ್ಲ. ಸಾಧಿಸುವವನಿಗೆ ಆಕಾಶವೇ ಪರಿಮಿತಿ. ಹಾಗಾಗಿ ಬರುವ ಅವಕಾಶವನ್ನು ಬಳಸಿಕೊಂಡು ಸಾಧಿಸುವ ಚಾಕಚಕ್ಯತೆ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಇರಬೇಕು ಎಂದು ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗ, ಐಇಇಇ ವಿದ್ಯಾರ್ಥಿ ವಿಭಾಗ, ಸೆಂಟರ್ ಆಫ್ ರೀಸರ್ಚ್ ಎಕ್ಸಲೆನ್ಸ್ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ 24 ಗಂಟೆಗಳ ಹ್ಯಾಕಥಾನ್ ಸ್ಪರ್ಧೆ ರೆಸರೆಕ್ಟ್-26ರ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಬುದ್ಧಾಸ್ ಸ್ಕಿಲ್ ಅಕಾಡೆಮಿ ಇದರ ಮುಖ್ಯ ಕಾರ್ಯನಿರ್ವಣಾಧಿಕಾರಿ ಮತ್ತು ಎತ್ನೋಟೆಕ್ ಅಕಾಡೆಮಿ ಇದರ ಕಾರ್ಪೊರೇಟ್ ವ್ಯವಹಾರಗಳ ಉಪಾಧ್ಯಕ್ಷರು ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಧಾನ್ ನಾಚಪ್ಪ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಸಿಗುವ ಆಪ್ತ ಸಲಹೆಗಳು ಜೀವನದಲ್ಲಿ ಅತಿದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಬೆ ಮಾತನಾಡಿದರು.ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ ಕಡಬ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರವೀಂದ್ರ ರೈ ಪಿ, ಕಾಲೇಜಿನ ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗ ಮುಖ್ಯಸ್ಥೆ ಡಾ.ರಾಧಿಕಾ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಪ್ರೊ.ಅಜಯ್ ಶಾಸ್ತ್ರಿ, ಸೆಂಟರ್ ಆಫ್ ರೀಸರ್ಚ್ ಎಕ್ಸಲೆನ್ಸ್ನ ಸಂಯೋಜಕ ಪ್ರೊ.ಶ್ರೀನಿಧಿ.ಎ ಉಪಸ್ಥಿತರಿದ್ದರು.ನ. 27 ರಂದು ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರಿನ ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್.ಕೆ ಸ್ಪರ್ಧೆಗೆ ಚಾಲನೆ ನೀಡಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಅಧ್ಯಕ್ಷತೆ ವಹಿಸಿದ್ದರು.ಬೆಂಗಳೂರಿನ ಎನಲಾಗ್ ಡಿವೈಸಸ್ನಲ್ಲಿ ಡಾಟಾ ಇಂಜಿನಿಯರ್ ಆಕರ್ಷ್ ರೈ, ಎತ್ನೋಟೆಕ್ ಅಕಾಡೆಮಿಯ ಸಹಾಯಕ ಉಪಾಧ್ಯಕ್ಷ ವಿನಯ್ ಕುಮಾರ್, ಬೆಂಗಳೂರಿನ ಮೆಲೆಂಟೋ ಸಂಸ್ಥೆಯ ಅಸೋಸಿಯೇಟ್ ಎಐ ಡೆವೆಲಪರ್ ರವಿನಾರಾಯಣ್.ಕೆ.ಎಸ್, ಮಂಗಳೂರಿನ ಎಬಿಲಿಟಿಸ್ಟ್ಯಾಕ್ ಇನ್ಕಾರ್ಪೊರೇಟೆಡ್ನ ಡೈರೆಕ್ಟರ್ ಆಫ್ ಟೆಕ್ನಾಲಜಿ ಕಾಶೀನಾಥ್ ಪೈ, ಅಮೆರಿಕಾದ ಟಾರ್ಗೆಟ್ ಕಾರ್ಪೋರೇಶನ್ನ ಲೀಡ್ ಇಂಜಿನಿಯರ್ ವೆಂಕಟಕೃಷ್ಣ.ಎ, ಬೆಂಗಳೂರಿನ ಐಬಿಎಂ ಲ್ಯಾಬ್ನ ಸಿಸ್ಟಮ್ ಆರ್ಕಿಟೆಕ್ಟ್ ಹಾಗೂ ಲೀಡ್ ಎಐ ರೀಸರ್ಚ್ ಇಂಜಿನಿಯರ್ ದೀರಜ್ ವಿಜಯ್ ಅತ್ತಾವರ್ ಮತ್ತು ಎತ್ನೋಟೆಕ್ ಅಕಾಡೆಮಿಯ ಕ್ವಾಲಿಟಿ ಅಶ್ಯೂರೆನ್ಸ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್.ಜಿ ಅವರನ್ನೊಳಗೊಂಡ ತೀರ್ಪುಗಾರರ ತಂಡವು ವಿದ್ಯಾರ್ಥಿಗಳ ಯೋಜನೆಗಳನ್ನು ಮೌಲ್ಯಮಾಪನ ಮಾಡಿದರು. ಮನಸಿಜ ಎಐನ ಸಾಫ್ಟ್ವೇರ್ ಇಂಜಿನಿಯರ್ ಜ್ನಾನೇಶ್ ಮತ್ತು ಕೋಡ್ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಫುಲ್ ಸ್ಟಾಕ್ ಡೆವೆಲಪರ್ ಹಿಮಾಂಶು ಆಪ್ತ ಸಮಾಲೋಚನಕಾರರಾಗಿ ಕಾರ್ಯನಿರ್ವಹಿಸಿದರು.ಪ್ರಶಸ್ತಿ ವಿಜೇತರು:ಬೆಂಗಳೂರಿನ ಆಕ್ಸ್ಫರ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್ನ ವಿದ್ಯಾರ್ಥಿಗಳಾದ ಯಾದವ ಎಚ್.ಸಿ, ಪವನ್ ಕುಮಾರ್.ಎಚ್ ಮತ್ತು ಗೋಪಾಲ್ ಕುಲಕರ್ಣಿ ಅವರ ತಂಡವು ಪ್ರಥಮ ಸ್ಥಾನವನ್ನು ಗಳಿಸುವುದರ ಜತೆಯಲ್ಲಿ 30 ಸಾವಿರ ರು. ನಗದು ಬಹುಮಾನ ಪಡೆದು ಕೊಂಡರು. ಬೆಂಗಳೂರಿನ ದಯಾನಂದ ಸಾಗರ್ ಅಕಾಡಮಿ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್ಮೆಂಟಿನ ವಾಣಿ ಭಟ್, ವೈ.ನಯನ, ಸ್ಕಂದ.ಎಂ.ಪಿ ಮತ್ತು ಕವನ ವೈ.ಎಂ ಅವರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ರು. 20 ಸಾವಿರ ನಗದು ಬಹುಮಾನ ಪಡೆದು ಕೊಂಡರು.