ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ತಮ್ಮ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಭಾನುವಾರ ನಡೆಯುವ ಬಾಳೆ ಮುಹೂರ್ತವನ್ನು ಅರ್ಥಪೂರ್ಣ ಮತ್ತು ಸಮಾಜಮುಖಿ - ಕೃಷಿಮುಖಿಯನ್ನಾಗಿ ಮಾಡಲು 3 ದಿನಗಳ ರಾಷ್ರ್ರಮಟ್ಟದ ಬಾಳೆ ಮೇಳ - ಕದಳೀ ವಿಶ್ವದರ್ಶನವನ್ನು ಆಯೋಜಿಸಿದ್ದಾರೆ.
ಉಡುಪಿ: ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ತಮ್ಮ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಭಾನುವಾರ ನಡೆಯುವ ಬಾಳೆ ಮುಹೂರ್ತವನ್ನು ಅರ್ಥಪೂರ್ಣ ಮತ್ತು ಸಮಾಜಮುಖಿ - ಕೃಷಿಮುಖಿಯನ್ನಾಗಿ ಮಾಡಲು 3 ದಿನಗಳ ರಾಷ್ರ್ರಮಟ್ಟದ ಬಾಳೆ ಮೇಳ - ಕದಳೀ ವಿಶ್ವದರ್ಶನವನ್ನು ಆಯೋಜಿಸಿದ್ದಾರೆ.
ಇದರಲ್ಲಿ ದೇಶವಿದೇಶಗಳ 100 - 150ಕ್ಕೂ ಹೆಚ್ಚು ಬಾಳೆ ಗೊನೆ - ತಳಿಗಳ ಪ್ರದರ್ಶನ, ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ, ಜೊತೆಗೆ ತಮಿಳುನಾಡು, ಕೇರಳ, ಮಹಾರಾಷ್ಟ್ರ ಮುಂತಾದ ರಾಜ್ಯಗಳ ಬಾಳೆ ಕೃಷಿಕರು ಆಗಮಿಸಲಿದ್ದು ಪರಸ್ಪರ ತಳಿ ವಿನಿಮಯ - ಜ್ಞಾನ ವಿನಮಯವೂ ನಡೆಯಲಿದೆ.ಕದಳೀ ಮೇಳವನ್ನು ನಿಜವಾದ ಅರ್ಥದಲ್ಲಿ ಜನರ ಬಳಿ ಕೊಂಡೊಯ್ಯಬೇಕು, ಆ ಮೂಲಕ ಬಾಳೆಯನ್ನು ಕೃಷಿ, ವಾಣಿಜ್ಯ, ವ್ಯವಹಾರವಾಗಿ ಮಾಡಬೇಕು ಎಂಬ ಮಹದುದ್ದೇಶದಿಂದ ಶ್ರೀಗಳು ಈ ಮೇಳವನ್ನು ಸಂಕಲ್ಪಿಸಿದ್ದಾರೆ
ಇಂದು ಬೆಳಿಗ್ಗೆ 9.30ಕ್ಕೆ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಈ ಮೇಳದ ಉದ್ಘಾಟನೆ ನಡೆಯಲಿದ್ದು, ಸೋದೆ ಶ್ರೀಗಳು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಮತ್ತು ವಿದ್ಯಾರಾಜೇಶ್ವರ ತೀರ್ಥರು ಸಾನಿಧ್ಯ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ಭಾರತದಲ್ಲಿ ಇಸ್ರೆಲ್ ದೇಶದ ಉಪರಾಯಭಾರಿ ಮ್ಯಾಕ್ಸಿಂ ಶ್ಮಗಿನ್ ಭಾಗವಹಿಸಲಿದ್ದಾರೆ. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಯಶ್ಪಾಲ್ ಸುವರ್ಣ, ಸುನಿಲ್ ಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅದಮಾರು ಮಠದ ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥರು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಡಾ. ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ಕಿಶೋರ್ ಕುಮಾರ್ ಪುತ್ತೂರು, ಡಾ. ಧನಂಜಯ ಸರ್ಜಿ ಭಾಗವಹಿಸಲಿದ್ದಾರೆ. ಒಂದು ಬಾಳೆ ತಳಿಗೆ ನಾಮಕರಣ !ದೇಶದಲ್ಲಿರುವ 500ಕ್ಕೂ ಹೆಚ್ಚು ಬಾಳೆ ತಳಿಗಳಲ್ಲಿ ಎಷ್ಟೋ ತಳಿಗಳಿಗೆ ಹೆಸರೇ ಇಲ್ಲ, ಆದ್ದರಿಂದ ಉಡುಪಿಯಲ್ಲಿ ನಡೆಯುವ ಅಪರೂಪದ ಮತ್ತು ವೈಶಿಷ್ಟ್ಯಪೂರ್ಣ ಬಾಳೆ ಮೇಳದ ಸ್ಮರಣಾರ್ಥ ಆಯ್ದ ಒಂದು ತಳಿಗೆ ಶ್ರೀಗಳು ಅರ್ಥಪೂರ್ಣ ಹೆಸರು (ಬ್ರ್ಯಾಂಡ್ ನೇಮ್) ಘೋಷಣೆ ಮಾಡಲಿದ್ದಾರೆ.ಸುಕೇಳಿಯ ಪ್ರಸಾದ ವಿತರಣೆ !
ಉತ್ತರಕನ್ನಡ ಜಿಲ್ಲೆಯ ಕುಟುಂಬವೊಂದು ಬಾಳೆ ಹಣ್ಣನ್ನು ಒಣಗಿಸಿ, ಸಂಸ್ಕರಿಸಿ ಸುಕೇಳಿ ಎಂಬ ಸಿಹಿ ಖಾದ್ಯವೊಂದನ್ನು ತಯಾರಿಸುತ್ತಿದೆ. ಇದು ಈ ಕುಟುಂಬದಲ್ಲಿ 3 ತಲೆಮಾರುಗಳಿಂದ ನಡೆಯುತ್ತಿದೆ. ಈ ಮೇಳದಲ್ಲಿ ಭಾಗವಹಿಸಿದವರಿಗೆ ಈ ಸುಕೇಳಿಯನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.ಕಲ್ಯಾಣ ಕದಳೀ ಪ್ರಿಯ ಕೃಷ್ಣ !
ಈ ಬಾಳೆಮೇಳವನ್ನು ಜನಾಕರ್ಷಣೀಯವನ್ನಾಗಿ ಮಾಡಲು ಕದಳೀ ಎಂಬ ವಿಷಯದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು ಸಂಜೆ ಪವನ್ ಕಿರಣಕೆರೆ ರಚಿತ ಕಲ್ಯಾಣ ಕದಳೀ ನೃತ್ಯರೂಪಕ, ನಾಳೆ ಸಂಜೆ ಕಾತ್ಯಾಯಿನಿ ಕುಂಜಿಬೆಟ್ಟು ರಚಿತ ಕದಳೀಪ್ರಿಯ ಕೃಷ್ಣ ನಾಟಕ ಪ್ರದರ್ಶನವಿರುತ್ತದೆ.