ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಒಂದು ದಿನದ ಕಾರ್ಯಕ್ರಮಕ್ಕೇ ಎಷ್ಟೋ ದಿನದ ತಯಾರಿ ಬೇಕಾಗುತ್ತದೆ. ಅಂತಹದರಲ್ಲಿ ನಿರಂತರ ಹತ್ತು ದಿನದ ಕಾರ್ಯಕ್ರಮಕ್ಕೆ ಅದೆಷ್ಟು ಶ್ರಮ ವಹಿಸಿರಬಹುದೆಂದು ಊಹಿಸಲೂ ಸಾಧ್ಯವಿಲ್ಲ. ಈ ಕಾರ್ಯಕ್ರಮದಿಂದ ಕೊಡವ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು. ಅದೆಷ್ಟೋ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ಎಲ್ಲಾರೂ ಒಂದಾಗಿ ಸೇರಲು ಸಿಕ್ಕಿರುವ ಈ ಅವಕಾಶ ಬಳಸಿಕೊಂಡು ಕಲಾವಿದರು ಇನ್ನಷ್ಟು ಬೆಳೆಯಬೇಕೆಂದು ಕಿವಿಮಾತು ಹೇಳಿದರು.ಅಂತಾರಾಷ್ಟ್ರೀಯ ಪರ್ವತಾರೋಹಿ ಜಮ್ಮಡ ಪ್ರೀತ್ ಅಯ್ಯಣ್ಣ ಮಾತನಾಡಿ, ಮಹಿಳೆಯರೆಲ್ಲರೂ ಕೇವಲ ಅಡುಗೆ ಮನೆಗೆ ಸೀಮಿತವಾಗದೆ ತಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಿ. ಕೊಡವ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಎಲ್ಲರೂ ಕೊಡವ ಭಾಷೆಯಲ್ಲೇ ಮಾತನಾಡಿ ಎಂದು ಸಲಹೆ ನೀಡಿದರು.ಪ್ರಾಸ್ತಾವಿಕ ಮಾತನಾಡಿದ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯರವರು ಕೊಡವ ಸಮಾಜ ಆರಂಭವಾದ ಹಿನ್ನೆಲೆಯನ್ನು ಸಭೆಗೆ ತಿಳಿಸುವುದರೊಂದಿಗೆ ಕೊಡವರ ಜನಸಂಖ್ಯೆ ವ್ರದ್ಧಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಸಮಾಜದಿಂದ ತಾವಳಗೇರಿ ಮೂಂದ್ ನಾಡ್ ವ್ಯಾಪ್ತಿಯ ಕೊಡವ ಕುಟುಂಬಕ್ಕೆ ಜನಿಸುವ 3ನೆ ಮಗುವಿನ ಹೆಸರಿನಲ್ಲಿ ಐವತ್ತು ಸಾವಿರ ರೂ. ಹಾಗೂ 4ನೆ ಮಗುವಿನ ಹೆಸರಿನಲ್ಲಿ ಒಂದು ಲಕ್ಷ ರೂ.ಗಳನ್ನು ಠೇವಣಿ ಇಡುವ ಯೋಜನೆಯ ಮಾಹಿತಿ ನೀಡಿದರು.ಸಮಾಜದ ಮಾಜಿ ಉಪಾಧ್ಯಕ್ಷ ಮಾಣೀರ ವಿಜಯ ನಂಜಪ್ಪ, ಚೆಟ್ಟಂಗಡ ವಿಜಯ ಕಾರ್ಯಪ್ಪ ಮಾತನಾಡಿದರು.
ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪೆಮ್ಮಂಡ ಸಭಿತ ಕುಶಾಲಪ್ಪ ಹಾಗೂ ಸಂಭ್ರಮ ಪೊಮ್ಮಕ್ಕಡ ಕೂಟದ ಸದಸ್ಯೆ ಅಜ್ಜಮಡ ಸ್ಮಿತ ರಂಜಿ ಶುಭ ಹಾರೈಸಿದರು. ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆ ಚಟ್ಟಂಡ ಲತ ಚರ್ಮಣ ಪ್ರಾರ್ಥಿಸಿ, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಖಜಾಂಚಿ ಚಂಗುಲಂಡ ಸತೀಶ್ ಸ್ವಾಗತಿಸಿ, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ ವಂದಿಸಿದರು. ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ, ಕ್ರೀಡಾ ಕಾರ್ಯದರ್ಶಿ ತಡಿಯಂಗಡ ಶಮ್ಮಿ ಸುಬ್ಬಯ್ಯ ನಿರ್ದೇಶಕರಾದ ಚಂಗುಲಂಡ ಅಶ್ವಿನಿ ಸತೀಶ್, ತೀತೀರ ಅನಿತ ಸುಬ್ಬಯ್ಯ,ಮಾಣೀರ ದೀಪಕ್, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಡ ರೇಶ್ಮ ಕಾರ್ಯಪ್ಪ, ಕಾರ್ಯದರ್ಶಿ ಕಳ್ಳಿಚಂಡ ದೀನ ಉತ್ತಪ್ಪ , ಸಂಭ್ರಮ ಪೊಮ್ಮಕ್ಕಡ ಕೂಟದ ಸದಸ್ಯೆ ಅಜ್ಜಮಡ ಸಾವಿತ್ರಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ‘ಕೊಡವಾಮೆಲ್ ಪಳೆಯಾಮೆರ ನಡ್ಪು’ ಪ್ರದರ್ಶನಗೊಂಡಿತು.