- 22 ಸಾವಿರ ಹೆಕ್ಟೇರಲ್ಲಿ ಮೆಕ್ಕೆಜೋಳ ಬೆಳೆಯಲು ಸಿದ್ಧತೆ
- - -ಚನ್ನಗಿರಿ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಭಾನುವಾರ ಸಂಜೆ ಗುಡುಗು-ಮಿಂಚು, ಆಲಿಕಲ್ಲಿನ ಸಹಿತವಾಗಿ ಪೂರ್ವ ಮುಂಗಾರು ಮಳೆಯಾಗಿದೆ. ತಾಲೂಕಿನ ಮಳೆ ಮಾಪನ ಕೇಂದ್ರಗಳಾದ ಕತ್ತಲಗೆರೆ, ಬಸವಾಪಟ್ಟಣ, ಸಂತೆಬೆನ್ನೂರು ವ್ಯಾಪ್ತಿಯಲ್ಲಿ ಮಳೆಯಾದ ಹಿನ್ನೆಲೆ ಇಲ್ಲಿಯ ಮಳೆ ಮಾಪನಗಳಲ್ಲಿ ದಾಖಲಾಗಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಇನ್ನುಳಿದಂತೆ ಚನ್ನಗಿರಿಯ ಮಳೆ ಮಾಪನ ಕೇಂದ್ರದಲ್ಲಿ 60.3 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಅಂತೆಯೇ, ದೇವರಹಳ್ಳಿಯಲ್ಲಿ 10.20, ತ್ಯಾವಣಿಗೆ 5.0, ಜೋಳದಾಳ್ 47.8, ಉಬ್ರಾಣಿ 11.6, ಕೆರೆಬಿಳಚಿ 8.2 ಮಿ.ಮೀ. ಮಳೆಯಾಗಿದೆ.ಮುಂಗಾರು ಹಂಗಾಮಿನ ಕೃಷಿ ಬೆಳೆಗೆ ನಿಗದಿತ ಸಮಯಕ್ಕೆ ಸರಿಯಾಗಿ ವಾಡಿಕೆಯ ಮಳೆಗಿಂತ ಹೆಚ್ಚಿನ ಮಳೆ ಬರುವ ಬಗ್ಗೆ ಹವಮಾನ ಇಲಾಖೆಯವರು ಈಗಾಗಲೇ ಮಾಹಿತಿ ನೀಡಿದ್ದಾರೆ. ತಾಲೂಕಿನಲ್ಲಿ 38 ಸಾವಿರ ಹೆಕ್ಟೇರ್ ಕೃಷಿ ಯೋಗ್ಯವಾದ ಭೂಮಿ ಇದೆ. ತಾಲೂಕಿನ ಕೆಲವು ಭಾಗಗಳಲ್ಲಿ ರೈತರು ತಮ್ಮ ಜಮೀನುಗಳನ್ನು ಹಸನು ಮಾಡುವಲ್ಲಿ ನಿರತರಾಗಿದ್ದಾರೆ.
ತಾಲೂಕಿನಲ್ಲಿನ ಹೆಚ್ಚಿನ ಭಾಗದ ರೈತರು 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲು ಸಿದ್ಧತೆ ನಡೆಸಿದ್ದಾರೆ. ಮೆಕ್ಕೆಜೋಳ ಬೆಳೆಯಲ್ಲಿ ಹೆಚ್ಚು ಕಳೆ ಬೆಳೆಯುತ್ತದೆ. ಆದ್ದರಿಂದ ಮೆಕ್ಕೆಜೋಳದ ಬದಲು ಸೋಯಾಬಿನ್ಸ್ ಬೆಳೆ ಬೆಳೆಯಲು ರೈತರಿಗೆ ಶಿಫಾರಸು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.ರೈತರು ಬಿತ್ತನೆ ಮಾಡಲು ಬಯಸುವಂತಹ ಬಿತ್ತನೆ ಬೀಜಗಳಾದ ಮೆಕ್ಕೆಜೋಳ, ಸೋಯಾಬೀನ್, ಹೆಸರು, ತೊಗರಿ ಈ ಬಿತ್ತನೆ ಬೀಜಗಳ ಸಂಗ್ರಹವಿದೆ. ತಾಲೂಕಿನಲ್ಲಿರುವ ಆರು ರೈತ ಸಂಪರ್ಕ ಕೇಂದ್ರಗಳಿದ್ದು, ಈ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳನ್ನು ಪಡೆಯಬಹುದು. ಬಸವಾಪಟ್ಟಣ ಹೋಬಳಿಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆಯಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ.
- - --21ಕೆಸಿಎನ್ಜಿ2: ಚನ್ನಗಿರಿ ತಾಲೂಕಿನ ಕೆಲವೆಡೆ ಉತ್ತಮ ಮಳೆಯಾದ ಹಿನ್ನೆಲೆ ಭೂಮಿ ಹಸನು ಮಾಡುತ್ತಿರುವ ರೈತ.