ಬ್ರಿಟಿಷರ ವಿರುದ್ಧ ರಣಚಂಡಿಯಾಗಿ ಹೋರಾಡಿದ ಧೀರ ಮಹಿಳೆ ಚನ್ನಮ್ಮ: ಬಸಪ್ಪ ಕೊಪ್ಪದ

KannadaprabhaNewsNetwork |  
Published : Oct 24, 2024, 12:34 AM ISTUpdated : Oct 24, 2024, 12:35 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ಸ್ವಾತಂತ್ರ್ಯ ಸಂಗ್ರಾಮ ಬೆಳ್ಳಿಚುಕ್ಕೆಯಾಗಿ ಐತಿಹಾಸಿಕ ಪುಟಗಳಲ್ಲಿ ರಾರಾಜಿಸುತ್ತಿರುವ ವೀರ ವನಿತೆ ಚನ್ನಮ್ಮ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬ್ರಿಟಿಷರ ವಿರುದ್ಧ ಪ್ರಾಣ ಲೆಕ್ಕಿಸದೆ, ಸೈನಿಕರಿಗೆ ಹುರಿದುಂಬಿಸುತ್ತಾ ರಣಚಂಡಿಯಾಗಿ ಹೋರಾಡಿದ ಧೀರ ಮಹಿಳೆ ವೀರರಾಣಿ ಕಿತ್ತೂರ ಚನ್ನಮ್ಮ ಎಂದು ಎಂದು ನಗರದ ಪಂಚಮಸಾಲಿ ಸಮಾಜ ಅಧ್ಯಕ್ಷ ಬಸಪ್ಪ ಕೊಪ್ಪದ ಹೇಳಿದರು.

ಚನ್ನಮ್ಮ ವೃತ್ತದಲ್ಲಿ ಆಯೋಜಿಸಿದ್ದ ಜಯಂತಿ ಹಾಗೂ ವಿಜಯೋತ್ಸವ ಕಾರ್ಯಕ್ರಮವನ್ನು ಚನ್ನಮ್ಮಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಣಿ ಚನ್ನಮ್ಮಳು 1824ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕತ್ತಿಹಿಡಿದು ಕುದುರೆ ಏರಿ ಯುದ್ಧ ಭೂಮಿಯಲ್ಲಿ ಸೈನಿಕರನ್ನು ಹುರುದುಂಬಿಸುತ್ತಾ ರಣಚಂಡಿಯಾಗಿ ಕಾಳಗ ಮಾಡುತ್ತಿದ್ದಳು. ಪುಣ್ಯ ಭೂಮಿಗಾಗಿ ಸತ್ತರೆ ಸ್ವರ್ಗ, ಗೆದ್ದರೆ ರಾಜ್ಯ ಎಂಬುದು ಚನ್ನಮ್ಮಳ ದಿಟ್ಟ ನಿರ್ಧಾರವಾಗಿತ್ತು ಎಂದರು.

ಖ್ಯಾತ ವ್ಯೆದ್ಯ ಡಾ.ಅಶೋಕ ದಿನ್ನಿಮನಿ ಮಾತನಾಡಿ, ಕಿತ್ತೂರಿನ ಸಮಾರಂಗಣದಲ್ಲಿ ದಿಟ್ಟತನದಿಂದ ಹೋರಾಡಿದ ಅಮಟೂರ್ ಬಾಳಪ್ಪ, ಸರದಾರ ಗುರುಸಿದ್ದಪ್ಪ, ಬಿಚ್ಚುಗತ್ತಿ ಚನ್ನಬಸಪ್ಪ, ಗಜವೀರ ಸಂಗೊಳ್ಳಿರಾಯಣ್ಣ ಸೇರಿ ಇನ್ನು ಹಲವಾರು ಕಿತ್ತೂರಿನ ಕಲಿಗಳ ತ್ಯಾಗ ಬಲಿದಾನ ದೇಶಭಕ್ತಿ ಇಂದಿನ ಯುವ ಸಮೂಹಕ್ಕೆ ದಾರಿದೀಪವಿದ್ದಂತೆ ಎಂದರು.

ಪುರಸಭೆ ಸದಸ್ಯ ಚನಬಸು ಯರಗಟ್ಟಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ ಬೆಳ್ಳಿಚುಕ್ಕೆಯಾಗಿ ಐತಿಹಾಸಿಕ ಪುಟಗಳಲ್ಲಿ ರಾರಾಜಿಸುತ್ತಿರುವ ವೀರ ವನಿತೆ ಚನ್ನಮ್ಮ, ಕಿತ್ತೂರು ಸಂಸ್ಥಾನದಲ್ಲಿ ಧನಧಾನ್ಯ ಮುಲಸೌಕರ್ಯ ಹೊಂದಿದ್ದಳು. ಯೋಧರನ್ನು ತನ್ನ ಸ್ವಂತ ಮಕ್ಕಳಂತೆ ಕಾಣುತ್ತಿದ್ದ ರಾಣಿ ಚನ್ನಮ್ಮ, ವೈರಿಗಳ ಮಕ್ಕಳು ವೈರಿಗಳಲ್ಲ ಎಂದು ಹೇಳುವ ಮೂಲಕ ವೈರಿ ಬ್ರಿಟಿಷ್ ಅಧಿಕಾರಿ ಥ್ಯಾಕರೆ ಮಕ್ಕಳನ್ನು ಸಾಕಿ ಸಲುಹುವ ಮೂಲಕ ರಾಷ್ಟ್ರ ಮಾತೇ ಎಂದೇ ಪ್ರಸಿದ್ಧಿಯಾದಳು ಎಂದರು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಸದಸ್ಯ ರಾಜು ಗೌಡಪ್ಪಗೋಳ, ಮುಖಂಡ ರಾಜೇಶ ಭಾವಿಕಟ್ಟಿ, ಈರಪ್ಪ ದಿನ್ನಿಮನಿ, ಚನ್ನಪ್ಪ ಪಟ್ಟಣಶೆಟ್ಟಿ, ರಾಮಣ್ಣ ಹಟ್ಟಿ, ಕಲ್ಲಪ್ಪ ಪಟ್ಟಣಶೆಟ್ಟಿ, ಬಸವರಾಜ ವಜ್ಜರಮಟ್ಟಿ ಕುಮಾರ ಕುಳಲಿ, ಬಸವರಾಜ ದಲಾಲ, ಸಂತೋಷ್ ಹುದ್ದಾರ, ಲಕ್ಷ್ಮಣ ಮಾಂಗ, ಕೋತ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!