ಹಾವೇರಿ: ವಿನೋಬಾ ಭಾವೆ ಅವರ ಭೂದಾನ ಚಳವಳಿಯನ್ನು ಜಿಲ್ಲೆಯಲ್ಲಿ ಪ್ರಸಾರ ಮಾಡಿ, ಅದರ ಯಶಸ್ವಿಗೆ ಕಾರಣರಾದವರು, ಸ್ವಾತಂತ್ರ್ಯ ಯೋಧರಾದ ಚನ್ನಮ್ಮ ಹಳ್ಳಿಕೇರಿ ಅವರಿಗೆ ಸಲ್ಲುತ್ತದೆ ಎಂದು ಕವಯತ್ರಿ ಶಕುಂತಲಾ ಮನ್ನಂಗಿ ತಿಳಿಸಿದರು.ನಗರದ ರಾಚೋಟೇಶ್ವರ ಪಪೂ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸಿ.ಜಿ. ತೋಟಣ್ಣನವರ, ಅಜ್ಜಪ್ಪ ಹೂಗಾರ, ಜೆ.ಬಿ. ಸಾವಿರಮಠ, ರಮಾನಂದ ಮನ್ನಂಗಿ ಮತ್ತು ಚಿದಂಬರ ಮೂರ್ತಿ ಇವರ ದತ್ತಿನಿಧಿ ಉಪನ್ಯಾಸ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಮಹಿಳೆಯರು ಹೊರಬರಲು ಸಾಧ್ಯವಾಗದೇ ಇದ್ದ ಸಮಾಜದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಹಾಗೂ ತಮ್ಮ ಜೀವನವನ್ನೇ ಸಮಾಜದ ಋಣ ತೀರಿಸಲು ಎಂದು ಭಾವಿಸಿ ಅದರಂತೆ ಬದುಕಿದರು ಚನ್ನಮ್ಮ ಹಳ್ಳಿಕೇರಿ ಮತ್ತು ದೇವಕ್ಕ ರಮಾನಂದ ಮನ್ನಂಗಿ ಅವರಿಗೆ ಸಲ್ಲುತ್ತದೆ ಎಂದರು.ದತ್ತಿ ಉಪನ್ಯಾಸ ನೀಡಿದ ಡಾ. ಪುಷ್ಪಾ ಶಲವಡಿಮಠ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ಅಪಾರವಾದದು. ಪ್ರಾಚೀನ, ಮಧ್ಯಯುಗ ಮತ್ತು ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಹಾವೇರಿಯ ಕೊಡುಗೆ ಅನನ್ಯವಾದದು. ಅಜಿತ ಜೀನಚಾರ್ಯ, ಅಂಬಿಗರ ಚೌಡಯ್ಯ, ತ್ರಿಪದಿ ಕವಿ ಸರ್ವಜ್ಞ, ಕನಕದಾಸ, ಶಿಶುನಾಳ ಶರೀಫ, ಹೆಳವನಕಟ್ಟಿ ಗಿರಿಯಮ್ಮ, ಗಳಗನಾಥ, ಸು.ರಂ. ಯಕ್ಕುಂಡಿ, ಹಿರೇಮಲ್ಲೂರ ಈಶ್ವರನ್, ವಿ.ಕೃ. ಗೋಕಾಕ, ಪಾಪು, ಚಂಪಾ, ಸತೀಶ ಕುಲಕರ್ಣಿ, ಮಹದೇವ ಬಣಕಾರ ಹಲವಾರು ಜಿಲ್ಲೆಯ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ದತ್ತಿನಿಧಿ ಕಾರ್ಯಕ್ರಮಗಳು ಹೊಸ ವಿಚಾರಗಳನ್ನು ಪ್ರಸ್ತುತ ಪಡಿಸುತ್ತವೆ. ಗೃಹಣಿಯರು ಕೇವಲ ಗೃಹಕಾರ್ಯ ಮತ್ತು ಧಾರಾವಾಹಿಗಳಿಗೆ ಸೀಮಿತವಾಗದೇ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ, ಏಕತಾನತೆ ಹೋಗಿ, ಜೀವನೋತ್ಸಾಹ ಹೆಚ್ಚುತ್ತದೆ ಎಂದರು.ಸಮಾರಂಭದಲ್ಲಿ ದತ್ತಿದಾನಿಗಳಾದ ಜಯಣ್ಣ ಸಾವಿರಮಠ, ಸಿ.ಜಿ. ತೋಟಣ್ಣನವರ, ಶಣಕರ ಸುತಾರ, ಎಸ್.ಎನ್. ಕಾಳೆ, ರೇಣುಕಾ ಗುಡಿಮನಿ, ಜುಬೇದಾ ನಾಯಕ, ಜಗದೀಶ ಹುಡೇದ, ಜೆ.ಎಂ. ಓಂಕಾರಣ್ಣನವರ, ಸಿ.ಎಸ್. ಮರಳಿಹಳ್ಳಿ, ವಿಜಯಕುಮಾರ ಕೂಡ್ಲಪ್ಪನವರ, ಅಕ್ಕಮಹಾದೇವಿ ಹಾನಗಲ್ಲ, ಜಯಣ್ಣ ಸಾತೇನಹಳ್ಳಿ, ಎಸ್.ಆರ್. ಹಿರೇಮಠ ಇತರರಿದ್ದರು.ಕೆ.ಬಿ. ಭಿಕ್ಷಾವರ್ತಿಮಠ ದತ್ತಿದಾನಿಗಳ ಪರಿಚಯ ಮಾಡಿದರು. ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಬೆಳವಡಿ ಸ್ವಾಗತಿಸಿದರು. ಪೃಥ್ವಿರಾಜ ಬೇಟಗೇರಿ ನಿರೂಪಿಸಿದರು. ಎಸ್.ಸಿ. ಮರಳಿಹಳ್ಳಿ ವಂದಿಸಿದರು.