ಕನ್ನಡಪ್ರಭ ವಾರ್ತೆ ಕಲಬುರಗಿ
ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಚೆನ್ನಣ್ಣ ವಾಲೀಕಾರ ಅವರ ‘ಚಿಗರೆ ಆಕ್ರಂದನ’ ಕಾವ್ಯ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನೊಂದ ಜನರ ಸಂಕಷ್ಟ, ಬದುಕಿನ ತೊಳಲಾಟ, ಹಸಿವಿನ ಆಕ್ರಂದನ, ಜಾತಿ ಮತ್ತು ವರ್ಗ ತಾರತಮ್ಯ, ಸಾಮಾಜಿಕ ಅಸಮಾನತೆಗಳ ವಿರುದ್ಧ ರಾಜ್ಯದಾದ್ಯಂತ ಸಂಘಟನೆ ಕಟ್ಟಿ ಬೆಳೆಸಿ ಅಕ್ಷರ ಹೋರಾಟ ನಡೆಸಿದವರು ಚೆನ್ನಣ್ಣ ವಾಲೀಕಾರ ಎಂದು ಪೋತೆ ಬಣ್ಣಿಸಿದರು.ಕೇಂದ್ರೀಯ ವಿವಿ ಭಾಷಾ ನಿಕಾಯದ ಡೀನ್ ವಿಕ್ರಮ ವಿಸಾಜಿ ಕಾವ್ಯ ಸಂಕಲನ ಕುರಿತು ಮಾತನಾಡಿ ಎಪ್ಪತ್ತರ ದಶಕದಲ್ಲಿ ಕನ್ನಡ ಚಳುವಳಿ ಮುನ್ನಡೆಸಿದ ವಾಲೀಕಾರ ಅವರು ಸಹಜ ಮತ್ತು ಸರಳ ಭಾವನೆಯ ಕವಿ. ಅಧಿಕಾರ ವ್ಯಾಮೋಹವಿಲ್ಲದೆ ಓದು, ಬರಹ, ಹಾಡುವುದೇ ಅವರ ಶಕ್ತಿಯಾಗಿತ್ತು ಎಂದರು.
ಪ್ರಭಾಕರ ಜೋಷಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಿದ್ದಮ್ಮ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು.ಸಂದರ್ಶಕ ಪ್ರಾಧ್ಯಾಪಕ ಡಾ.ಶ್ರೀಶೈಲ ನಾಗರಾಳ, ಡಾ.ಸೂರ್ಯಕಾಂತ ಸುಜ್ಯಾತ, ಡಾ.ವಿ.ಆರ್. ಬಡಿಗೇರ, ಡಾ.ನಿಂಗಣ್ಣ ಟಿ., ಡಾ.ಎಂ.ಬಿ. ಕಟ್ಟಿ, ಡಾ.ಹನುಮಂತ ಮೇಲಕೇರಿ, ಡಾ.ಸಂತೋಷ ಕಂಬಾರ, ಡಾ.ಸುನಿಲ್ ಜಾಬಾದಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ.ಕೆ.ಎಂ.ಕುಮಾರಸ್ವಾಮಿ ಇದ್ದರು.ಸಂಗೀತ ವಿಭಾಗದ ಉಪನ್ಯಾಸಕ ಸಿದ್ಧಾರ್ಥ್ ಚಿಮ್ಮಾ ಇದ್ಲಾಯಿ ಸಂಗಡಿಗರು ಚೆನ್ನಣ್ಣ ವಾಲೀಕರ ರಚಿಸಿದ ಗೀತೆಗಳನ್ನಾಡಿದರು. ಉಪನ್ಯಾಸಕ ಡಾ.ಚಾಂದಸಾಬ್ ಸ್ವಾಗತಿಸಿದರು. ಡಾ.ಶಿವಗಂಗಾ ಬಿಲಗುಂದಿ ವಂದಿಸಿದರು. ಡಾ. ಪ್ರೇಮ ಅಪಚಂದ ನಿರೂಪಿಸಿದರು.