ಅಂಧರಿಗೆ ಆಶಾಕಿರಣವಾದ ಚನ್ನವೀರಸ್ವಾಮಿ ಹಿಡ್ಕಿಮಠ

KannadaprabhaNewsNetwork |  
Published : May 15, 2024, 01:39 AM ISTUpdated : May 15, 2024, 01:40 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ಕೀರ್ತನಕಾರ ಪಂ.ಎಂ.ಕಲ್ಲಿನಾಥಶಾಸ್ತ್ರಿ ಅಡ್ನೂರ ಮಾತನಾಡಿದರು. | Kannada Prabha

ಸಾರಾಂಶ

ಶಿಕ್ಷಕ ವೃತ್ತಿಯಲ್ಲಿ ಭವಿಷ್ಯ ಕಟ್ಟಿಕೊಳ್ಳುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಸಾಧಕರ ಪರಿಚಯ ಗೊತ್ತಿರಬೇಕು

ಗದಗ: ಅಕ್ಷರ- ಅರಿವು-ಅನ್ನ ದಾನ ನೀಡಿ ಅಂಧರ ಬಾಳಿಗೆ ಆಶಾಕಿರಣವಾಗಿ ನೊಂದ ತಂದೆ-ತಾಯಿಗಳ ಮನಕ್ಕೆ ಮುದ ನೀಡುವ ಆಶ್ರಮ ಹುಟ್ಟು ಹಾಕಿ ತಮ್ಮ ಜೋಳಿಗೆಗೆ ಮಕ್ಕಳನ್ನು ತಂದು ಹಾಕುವಂತೆ ಬೇಡಿಕೊಂಡ ಕರುಣೆಯೇ ಮೂರ್ತಿವೆತ್ತಂತೆ ಎಲ್ಲರನ್ನು ಸಲುಹಿದ ಆಶ್ರಮವೇ ಗದುಗಿನ ವೀರೇಶ್ವರ ಪುಣ್ಯಾಶ್ರಮವಾಗಿದೆ ಎಂದು ಕೀರ್ತನಕಾರ ಪಂ.ಎಂ. ಕಲ್ಲಿನಾಥಶಾಸ್ತ್ರಿ ಅಡ್ನೂರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪಿ.ಪಿ.ಜಿ ಬಿ. ಈಡಿ ಮಹಾವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಿದ ದಿ. ಚನ್ನವೀರಶಾಸ್ತ್ರಿ ವೀರಯ್ಯ ಹಿಡ್ಕಿಮಠ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಚನ್ನವೀರಸ್ವಾಮಿಗಳು ಹಿಡ್ಕಿಮಠ ಜೀವನ ಸಾಧನೆ ಕುರಿತು ಮಾತನಾಡಿದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮ ಕಳೆದ ಆರೂವರೆ ದಶಕದಿಂದ ಅಂಧ-ಅನಾಥರಿಗೆ ಅಭಯ ನೀಡುತ್ತ ಸಾಗಿರುವ ದಾರಿಯಲ್ಲಿ ಸ್ಮರಿಸಬೇಕಾದ ಪ್ರಾಥಸ್ಮರಣೀಯರೆಂದರೆ ದಿ. ಚನ್ನವೀರಶಾಸ್ತ್ರಿ ಹಿಡ್ಕಿಮಠರವರಾಗಿದ್ದಾರೆ.

ಇವರ ಇಚ್ಚಾಶಕ್ತಿಯ ಬಲದಿಂದಲೇ ಪಂ. ಪಂಚಾಕ್ಷರಿ ಗವಾಯಿ, ಪಂ.ಪುಟ್ಟರಾಜ ಗವಾಯಿ ನೆಲೆ ನಿಲ್ಲುವಂತಾಯಿತು. ಅಗಾಧವಾದ ಜೋತಿಷ್ಯ ಶಾಸ್ತ್ರ ಪಂಡಿತ ಚನ್ನವೀರಶಾಸ್ತ್ರಿಗಳು ತಮ್ಮ ನಾಮದ ಬಲದಿಂದ ಆಶ್ರಮಕ್ಕೆ ಬಸರಿಗಿಡದ ವೀರಪ್ಪವರಂಥವರ ದಾನದಿಂದ ಕಾಯಕಲ್ಪ ಒದಗಿಸಿದ್ದರು. ಅಲ್ಲಿಂದ ಉತ್ತರೋತ್ತರ ಪ್ರಗತಿ ಹೊಂದುತ್ತ ಬಂದ ಆಶ್ರಮಕ್ಕೆ ಧರ್ಮಾರ್ಥರ ದಾನ ಹರಿದು ಬಂದಿತು. ಇದರಿಂದ ಉತ್ತಮ ಸೂರು ದೊರೆತು ಮಕ್ಕಳಿಗೆ ವಿದ್ಯೆ-ಅನ್ನ-ಆಚಾರದ ದೀಕ್ಷೆ ಫಲಿಸಿತು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಭವಿಷ್ಯ ಕಟ್ಟಿಕೊಳ್ಳುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಸಾಧಕರ ಪರಿಚಯ ಗೊತ್ತಿರಬೇಕು. ಹೀಗಾಗಿ ವೀರೇಶ್ವರ ಪುಣ್ಯಾಶ್ರಮದ ಪದಾಧಿಕಾರಿಗಳಲ್ಲಿ ನಿವೇದನೆ ಎಂದರೆ ಪ್ರತಿವರ್ಷ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪಂ.ಪುಟ್ಟರಾಜ ಗವಾಯಿಗಳವರ ಸ್ಮರಣೋತ್ಸವದಂದು ಇವರ ಹೆಸರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ರಾಜ್ಯ ಪರಿಷತ್ತಿನಲ್ಲಿ ಕನಿಷ್ಟ ಮೂರರಿಂದ ಐದು ಲಕ್ಷ ಹಣ ಠೇವಣಿ ಇರಿಸಿ ಇದರಿಂದ ಬರುವ ಬಡ್ಡಿ ಹಣದಲ್ಲಿ ಸಾಧಕರನ್ನು ಗೌರವಿಸುವ ಕಾರ್ಯವಾಗಬೇಕು. ಈಗಾಗಲೇ ಅನೇಕ ಶಿಕ್ಷಣ ಸಂಸ್ಥೆಗಳು ಠೇವಣಿ ಇರಿಸಲು ಮುಂದೆ ಬಂದಿವೆ. ಇದರಿಂದ ಕಲಾವಿದರು, ಸಂಗೀತಗಾರರು, ಕೀರ್ತನಕಾರರಿಗೆ ಪ್ರೋತ್ಸಾಹಿಸಿದಂತಾಗುತ್ತದೆಂದರು.

ವೇದಿಕೆ ಮೇಲೆ ಕಲ್ಲಿನಾಥಶಾಸ್ತ್ರಿಗಳು ಅಡ್ನೂರ ಪಂಚಾಕ್ಷರಯ್ಯ ಹಿಡ್ಕಿಮಠ, ಪ್ರಾಚಾರ್ಯ ಡಾ. ವೀರೇಶ ಹಿತ್ತಲಮನಿ, ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಶ್ರೀಕಾಂತ ಬಡ್ಡೂರ, ಡಿ.ಎಸ್. ಬಾಪುರಿ ಉಪಸ್ಥಿತರಿದ್ದರು.

ಪ್ರಾಚಾರ್ಯ ಡಾ. ವೀರೇಶ ಹಿತ್ತಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎ.ಎಸ್.ಜಂಬಣ್ಣವರ ಡಾ.ಪಿ.ಎಚ್. ಜೋಗಿ, ಡಾ. ಶುಭಾ ಎಸ್ ಜೆ. ಎಸ್.ಎನ್. ಹೊಸಮನಿ, ಜಿ.ಬಿ.ಹೂಗಾರ, ಗೀತಾ ಕಬಾಡಿ, ಸಿ.ಎಂ. ಮಾರನಬಸರಿ, ಆರ್.ಡಿ. ಕಪ್ಪಲಿ ಉಪಸ್ಥಿತರಿದ್ದರು.

ಮೇಘಾ ಮನ್ವಾಚಾರ್ಯ ಪ್ರಾರ್ಥನೆ ಮಾಡಿದರು. ಸವಿತಾ, ಉಮಾ ಹುಲ್ಲಣ್ಣವರ ಪರಿಚಯಿಸಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಮೈಗೂರ ವಂದಿಸಿದರು. ರಮೇಶ ಡಮ್ಮೂರ ನಿರೂಪಿಸಿದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ