ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ । ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ । ಹಲವು ಗ್ರಾಮಗಳಲ್ಲಿ ರಾಮ ಮಂದಿರ ಶಿಲಾನ್ಯಾಸ । ಬೀದಿಗಳಲ್ಲಿ ರಾಮೋತ್ಸವಕನ್ನಡಪ್ರಭ ವಾರ್ತೆ ಅರಕಲಗೂಡು
ವಿವಿಧ ದೇಗುಲಗಳಲ್ಲಿ ಪೂಜೆ ನೆರವೇರಿಸಿ, ಪಾನಕ, ಮಜ್ಜಿಗೆ, ಪ್ರಸಾದ ವಿತರಣೆ ವಿತರಿಸಲಾಯಿತು. ಅಯೋಧ್ಯೆ ರಾಮನ ಭಿತ್ತಿಚಿತ್ರಗಳು ದೇಗುಲಗಳ ಬಳಿ ರಾರಾಜಿಸಿದವು. ಕೇವಲ ನಗರ ಪ್ರದೇಶಗಳಷ್ಟೇಯಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಭ್ರಮಿಸಲಾಯಿತು.
ಕೋಟೆ ಕೋದಂಡ ರಾಮ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಬೆಳಿಗ್ಗೆ ಪಂಚಾಮೃತ ಅಭಿಷೇಕ. ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಸಾಮೂಹಿಕ ಭಜನೆ ನಡೆಸಿದರು. ಬಳಿಕ ಶ್ರೀರಾಮ, ಸೀತಾ, ಲಕ್ಷಣ, ಹನುಮಂತರ ಉತ್ಸವ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ಶ್ರೀರಾಮ ರಥೋತ್ಸವ ನಡೆಸಲಾಯಿತು. ಬಳಿಕ ಆಯೋದ್ಯೆಯಲ್ಲಿ ನಡೆದ ಪ್ರತಿಷ್ಠಾಪನಾ ಕಾರ್ಯದ ನೇರಪ್ರಸಾರವನ್ನು ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಬಳಿಕ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ ದೀಪೋತ್ಸವ ಹಾಗೂ ಭಜನೆ ನಡೆಯಿತು. ಪಾಳ್ಯಂ ಕೊಂಡಯ್ಯ ಶ್ರೇಷ್ಠಿ ಛತ್ರ ಮತ್ತು ದೇವಾಲಯದಲ್ಲಿ ರಾಮ ಪರಿವಾರಕ್ಕೆ ದೀಪಾರಾಧನೆ, ಪಂಚಾಮೃತ ಅಭೀಷೇಕ, ಕುಂಕುಮಾರ್ಚನೆ, ಪುಣ್ಯಾಹ, ಗಣಪತಿ ಪೂಜೆ, ನಾಂದಿ, ಭಜನೆ, ರಾಮತಾರಕ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಪ್ರಸಾದ ವಿನಿಯೋಗಗಳನ್ನು ನಡೆಸಲಾಯಿತು.ದೇವಾಲಯಗಳಲ್ಲಿ ವಿವಿಧ ಸೇವೆ:
ಪಟ್ಟಣದ ರಾಜ್ ಕಮಲ್ ಜ್ಯುಯೆಲರ್ಸ ವತಿಯಿಂದ ಆಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯದ ನೇರಪ್ರಸಾರ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು. ಸಾಲಗೇರಿ ಬಡಾವಣೆಯ ಆಂಜನೇಯ ದೇವಾಲಯದಲ್ಲಿ ರಾಮ ತಾರಕ ಹೋಮ ನಡೆಸಲಾಯಿತು. ಬಳಿಕ ಶ್ರೀರಾಮನ ಭಾವ ಚಿತ್ರದ ಮೆರವಣಿಗೆ ನಡೆಲಾಯಿತು. ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಮುಖ್ಯರಸ್ತೆಗೆ ಬಂದಾಗ ಪೊಲೀಸರು ತಡೆದು ಮೆರವಣಿಗೆ ನಡೆಸಲು ಅವಕಾಶವಿಲ್ಲವೆಂದು ವಾಪಸ್ ಕಳುಹಿಸಿದರು. ಕೆಇಬಿ ರಸ್ತೆ ಶಕ್ತಿಗಣಪತಿ ದೇವಾಲಯ, ಗ್ರಾಮ ದೇವತೆ ದೊಡ್ಡಮ್ಮ ದೇವಾಲಯ, ಶನಿದೇವರ ದೇವಾಲಯ, ಸೇರಿದಂತೆ ಪಟ್ಟಣದ ವಿವಿಧ ದೇವಾಲಯಗಳು ಹಾಗೂ ಬಡಾವಣೆಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಪಾನಕ ಪನಿವಾರಗಳನ್ನು ವಿತರಿಸಲಾಯಿತು.
ರಾರಾಜಿಸಿದ ಭಿತ್ತಿಪಟ್ರಗಳು: