ಗಜೇಂದ್ರಗಡ: ವಿಶ್ವ ನವಕಾರ ಮಹಾಮಂತ್ರ ದಿನದ ಅಂಗವಾಗಿ ಪಟ್ಟಣದ ಜೈನ ಸಮಾಜದವರು ವಿಶ್ವಶಾಂತಿಗಾಗಿ ನವಕಾರ ಮಹಾಮಂತ್ರ ಜಪವನ್ನು ಭಕ್ತಿಪೂರ್ವಕವಾಗಿ ನೆರವೇರಿಸಿದರು.
ಗದಗ: ನಗರದ ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿ ಪಪೂ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ 2025- 26ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.ವಿಜ್ಞಾನ ವಿಭಾಗದ ಒಟ್ಟು ಫಲಿತಾಂಶ ಶೇ. 93ರಷ್ಟಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಒಟ್ಟು ಫಲಿತಾಂಶ ಶೇ. 87ರಷ್ಟಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ. 98.3ರಷ್ಟು ಅಂಕ ಪಡೆದು ಕಿರಣ ಹಿರೇಮಠ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಶೇ. 97.16 ಅಂಕ ಗಳಿಸಿ ಶಿವರಾಮ ಚೈತನ್ಯ ಕುಲಕರ್ಣಿ ದ್ವಿತೀಯ ಹಾಗೂ ಶೇ. 93.17ರಷ್ಟು ಅಂಕ ಪಡೆದು ಸವಿತಾ ಹಳ್ಳಿ ಹಾಗೂ ಶೃತಿ ಅಂಗಡಿ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶೇ. 96.17ರಷ್ಟು ಅಂಕ ಪಡೆದ ಪ್ರಾಚಿ ಕಬಾಡಿ ಪ್ರಥಮ, ಶೇ. 95.17 ಅಂಕ ಗಳಿಸಿ ದಿವ್ಯಾಶ್ರೀ ಬಂಡಿವಾಡಮಠ ದ್ವಿತೀಯ ಹಾಗೂ ಶೇ. 95 ಅಂಕ ಗಳಿಸಿದ ಸಾನ್ವಿ ಹಬೀಬ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 50 ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. 97 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ 14 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 44 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಮಹಾವಿದ್ಯಾಲಯದ ಇಂತಹ ಗಮನಾರ್ಹ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳನ್ನು, ಸಮಸ್ತ ಬೋದಕ ಸಿಬ್ಬಂದಿಯನ್ನು ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಪ್ರಾ. ಪ್ರೊ. ಪುನೀತ್ ದೇಶಪಾಂಡೆ, ಆಡಳಿತಾಧಿಕಾರಿ ಎಂ.ಸಿ.ಹಿರೇಮಠ, ಪದಾಧಿಕಾರಿಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ್‌ಮತೀನ್ ಮುಲ್ಲಾ ಅಭಿನಂದನೆ ತಿಳಿಸಿದ್ದಾರೆ.