ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆ ವೇಳೆ ಗದ್ದಲ, ಓರ್ವನ ಮೇಲೆ ಹಲ್ಲೆ

KannadaprabhaNewsNetwork |  
Published : Nov 10, 2023, 01:01 AM IST
ಪೋಟೊ-೯ ಎಸ್.ಎಸ್.ಟಿ.೪ಕೆ- ಹಲ್ಲೆಗೊಳಗಾದ ವ್ಯಕ್ತಿ ರವಿಕುಮಾರ ಚನಬಸಯ್ಯ ಹಿರೇಮಠ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು | Kannada Prabha

ಸಾರಾಂಶ

ಶಿರಹಟ್ಟಿ ತಾಲೂಕಿನ ತಂಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುವ ವೇಳೆ ಶಾಲೆಯ ಕಾಂಪೌಂಡ್‌ ಹೊರಗಡೆ ಇದ್ದ ಒಂದು ಗುಂಪಿನ ಜನರ ಮಧ್ಯೆ ಮಾತಿನ ಚಕಮಕಿ ಬೆಳೆದು ಕೈಕೈ ಮಿಲಾಯಿಸಿ ಓರ್ವನ ಮೇಲೆ ಹಲ್ಲೆ ಮಾಡಿದ್ದು, ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರಹಟ್ಟಿ ತಾಲೂಕಿನ ತಂಗೋಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಘಟನೆಶಿರಹಟ್ಟಿ: ತಾಲೂಕಿನ ತಂಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುವ ವೇಳೆ ಶಾಲೆಯ ಕಾಂಪೌಂಡ್‌ ಹೊರಗಡೆ ಇದ್ದ ಒಂದು ಗುಂಪಿನ ಜನರ ಮಧ್ಯೆ ಮಾತಿನ ಚಕಮಕಿ ಬೆಳೆದು ಕೈಕೈ ಮಿಲಾಯಿಸಿ ಓರ್ವನ ಮೇಲೆ ಹಲ್ಲೆ ಮಾಡಿದ್ದು, ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಹಿನ್ನೆಲೆ: ಒಟ್ಟು ೧೮ ಜನ ಎಸ್‌ಡಿಎಂಸಿ ಸದಸ್ಯರನ್ನು ಹೊಂದಿರುವ ಈ ಶಾಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಕುಮಾರಸ್ವಾಮಿ ಬಸವಣ್ಣಯ್ಯ ಹಿರೇಮಠ ಹಾಗೂ ಮಲ್ಲೇಶ ಬಸಪ್ಪ ತಳವಾರ ಅವರು ಸ್ಪರ್ಧಿಸಿದ್ದು, ಶಾಲೆ ಒಳಗೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದಂತೆ ಹೊರಗಡೆ ಒಂದು ಗುಂಪಿನ ಜನ ರವಿಕುಮಾರ ಚನಬಸಯ್ಯ ಹಿರೇಮಠ ಎಂಬುವವನ ಮೇಲೆ ಹಲ್ಲೆ ಮಾಡಿದ್ದು, ಕೈ ಮತ್ತು ಎದೆಗೆ ಪೆಟ್ಟು ಬಿದ್ದಿದ್ದು, ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆಗೊಳಗಾದ ವ್ಯಕ್ತಿ ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕುಮಾರಸ್ವಾಮಿ ಅಣ್ಣನ ಮಗನಾಗಿದ್ದು, ಇದಕ್ಕೆ ಹಳೆ ದ್ವೇಷವೇ ಕಾರಣ ಎಂದು ಹೇಳಿದ್ದಾನೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ