ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಸಾವು

KannadaprabhaNewsNetwork | Published : Nov 10, 2023 1:01 AM

ಸಾರಾಂಶ

ದಾಬಸ್‌ಪೇಟೆ: ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ದಾಬಸ್‌ಪೇಟೆ: ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸೋಂಪುರ ಹೋಬಳಿಯ ಅವ್ವೇರಹಳ್ಳಿ ಗ್ರಾಮದ ಕುಶಾಲ್ ಅಲಿಯಾಸ್ ಆದಿತ್ಯ (14) ಮೃತಪಟ್ಟ ವಿದ್ಯಾರ್ಥಿ, ಶಿವಗಂಗೆಯ ಶ್ರೀ ಶಿವಗಂಗಾ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ನ.7ರಂದು ಸಂಜೆ 4.45ರ ಸಮಯದಲ್ಲಿ ಮೃತ ಕುಶಾಲ್ ಹಾಗೂ ಸ್ನೇಹಿತರಾದ ಧನುಷ್, ನಿತಿನ್ ಮೂವರು ಶಾಲೆ ಮುಗಿಸಿಕೊಂಡು ಬೈಕಿನಲ್ಲಿ ಗೊಟ್ಟಿಗೆರೆಪಾಳ್ಯದ ಬಳಿ ಹೋಗುತ್ತಿದ್ದಾಗ ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶದ ಕಡೆಯಿಂದ ಜೀಪೊಂದು ಅಡ್ಡ ಬಂದಿದ್ದು, ಬೈಕ್ ನಿಯಂತ್ರಿಸಲಾಗದೆ ಜೀಪ್‌ಗೆ ಡಿಕ್ಕಿ ಹೊಡೆದಿದ್ದಾರೆ. ಕುಶಾಲ್ ನೆಲಕ್ಕೆ ಬಿದ್ದು ತಲೆಗೆ ತೀವ್ರ ಗಾಯ ಉಳಿದಿಬ್ಬರಿಗೆ ಕೈಕಾಲುಗಳಿಗೆ ಗಾಯಗಳಾಗಿತ್ತು. ಗಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ನಿತಿನ್ ಹಾಗೂ ಧನುಷ್ ಚೇತರಿಸಿಕೊಳ್ಳುತ್ತಿದ್ದು, ಕುಶಾಲ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತರ ಆತ್ಮಕ್ಕೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article