ಕಲಬುರ್ಗಿ ಮಠಕ್ಕೆ ಚರಲಿಂಗ ಸ್ವಾಮೀಜಿ

KannadaprabhaNewsNetwork |  
Published : Jun 25, 2025, 12:33 AM IST
ಸನ್ಮಾನ | Kannada Prabha

ಸಾರಾಂಶ

ಹಿಂದಿನ ರೇವಣಸಿದ್ದೇಶ್ವರ ಸ್ವಾಮೀಜಿ 5 ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದರು. ಅನಿವಾರ್ಯ ಕಾರಣಗಳಿಂದ ಆಗ ಸ್ವಾಮೀಜಿಗಳ ನೇಮಕವಾಗಿರಲಿಲ್ಲ. ಇದೀಗ ಕಲಬುರಗಿಯಲ್ಲಿನ ಮಠಕ್ಕೆ ಇತ್ತೀಚಿಗೆ ಚರಲಿಂಗ ಸ್ವಾಮೀಜಿ ಅವರನ್ನು ಮೂರುಸಾವಿರ ಮಠದ ಜ. ಗುರುಸಿದ್ಧರಾಜ ಯೋಗೀಂದ್ರ ಶ್ರೀಗಳು ನೇಮಕ ಮಾಡಿ ಪಟ್ಟಾಭಿಷೇಕ ಮಾಡಿದ್ದರು.

ಹುಬ್ಬಳ್ಳಿ: ಇಲ್ಲಿನ ಮಂಟೂರು ರಸ್ತೆಯಲ್ಲಿನ ಕಲಬುರ್ಗಿ ಮಠದ ನೂತನ ಪೀಠಾಧಿಪತಿ ಚರಲಿಂಗ ಸ್ವಾಮೀಜಿ ಇದೇ ಮೊದಲ ಬಾರಿಗೆ ಪುರ ಪ್ರವೇಶ ಮಾಡಿದರು.

ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮೀಜಿಗಳ 53ನೆಯ ಪುಣ್ಯಸ್ಮರಣೆ ಹಾಗೂ ಚರಲಿಂಗ ಸ್ವಾಮೀಜಿ ಪುರಪ್ರವೇಶ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಕಲಬುರಗಿಯಲ್ಲಿರುವ ಗದ್ದಿಗೆ ಮಠದ ಶಾಖಾ ಮಠ ಇದು. ಅಲ್ಲಿನ ಸ್ವಾಮೀಜಿಯೇ ಈ ಮಠವನ್ನೂ ನೋಡಿಕೊಂಡು ಹೋಗುವುದು ವಾಡಿಕೆ. ಹಿಂದಿನ ರೇವಣಸಿದ್ದೇಶ್ವರ ಸ್ವಾಮೀಜಿ 5 ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದರು. ಅನಿವಾರ್ಯ ಕಾರಣಗಳಿಂದ ಆಗ ಸ್ವಾಮೀಜಿಗಳ ನೇಮಕವಾಗಿರಲಿಲ್ಲ. ಇದೀಗ ಕಲಬುರಗಿಯಲ್ಲಿನ ಮಠಕ್ಕೆ ಇತ್ತೀಚಿಗೆ ಚರಲಿಂಗ ಸ್ವಾಮೀಜಿ ಅವರನ್ನು ಮೂರುಸಾವಿರ ಮಠದ ಜ. ಗುರುಸಿದ್ಧರಾಜ ಯೋಗೀಂದ್ರ ಶ್ರೀಗಳು ನೇಮಕ ಮಾಡಿ ಪಟ್ಟಾಭಿಷೇಕ ಮಾಡಿದ್ದರು.

ಇಲ್ಲಿನ ಭಕ್ತರು, ಹುಬ್ಬಳ್ಳಿಯಲ್ಲಿನ ಮಠವನ್ನು ನೀವೇ ನೋಡಿಕೊಂಡು ಹೋಗಬೇಕು ಎಂದು ಹೇಳಿದ್ದರು. ಅದರಂತೆ ಒಪ್ಪಿಕೊಂಡ ಚರಲಿಂಗ ಸ್ವಾಮೀಜಿ ಹುಬ್ಬಳ್ಳಿಗೆ ಪ್ರಥಮ ಬಾರಿಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರು ಶ್ರೀಗಳನ್ನು ಅದ್ಧೂರಿಯಾಗಿ ಮಠಕ್ಕೆ ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಶ್ರೀಗಳು, ಚರಲಿಂಗ ಶ್ರೀಗಳ ನೇತೃತ್ವದಲ್ಲಿ ಮಠದ ಅಭಿವೃದ್ಧಿ ಕಾರ್ಯಗಳು ನಡೆಯಲಿ. ಮಠದ ವೈಭವ ಮೊದಲಿನಂತೆ ಬೆಳೆಗಲಿ. ಈಗಿರುವ ಸ್ವಾಮೀಜಿ ಇಲ್ಲಿನ ಮಠದಲ್ಲಿ ಹೆಚ್ಚಿಗೆ ಇದ್ದು, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೂಜಾ ಕಾರ್ಯಗಳನ್ನು ಮಾಡುತ್ತಾ ಮಠವನ್ನು ಬೆಳೆಸಬೇಕು ಎಂದರು.

ಇಳಕಲ್ ಚಿತ್ತರಗಿ ಮಠದ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ಮಠದ ಪರಂಪರೆ ಹಾಗೂ ನಡೆದ ಬಂದ ದಾರಿ ತಿಳಿಸಿದರಲ್ಲದೇ, ಮಠಗಳಿಗೆ ಭಕ್ತರ ಸಹಕಾರ ಅಗತ್ಯ ಎಂದು ತಿಳಿಸಿದರು.

ನೂತನ ಶ್ರೀಗಳಾದ ಚರಲಿಂಗ ಸ್ವಾಮಿಗಳನ್ನು ಮಠಕ್ಕೆ ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು. ಅಲ್ಲದೇ, ಮಠದ ಸದ್ಭಕ್ತರಿಂದ ಗುರುವಂದನ ಕಾರ್ಯಕ್ರಮ ನೆರವೇರಿತು. ಗುರುವಂದನೆ ಸ್ವೀಕರಿಸಿದ ಚರಲಿಂಗ ಶ್ರೀಗಳು, ನಾನು ಮಠದಲ್ಲಿ ಇದ್ದು ಮಠವನ್ನು ಬೆಳೆಸುತ್ತೇನೆ ಎಂದರು.

ಮಲ್ಲಿಕಾರ್ಜುನ ಸಾವಕಾರ್ ಅಧ್ಯಕ್ಷತೆ ವಹಿಸಿದ್ದರು. ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು, ಎರಡತ್ತಿನ ಮಠದ ಸಿದ್ದಲಿಂಗ ಶ್ರೀಗಳು, ಬಿಜ್ಜಗಲ್ಲ ಶ್ರೀಗಳು ಮತ್ತಿತರರು ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಶರಣಪ್ಪ ಕೊಟಗಿ, ರಮೇಶ್ ಮಹದೇವಪ್ಪನವರ, ಕಲಬುರ್ಗಿಯ ಶಿವಶರಣ ಹೊಸಗೌಡ ಹಾಗೂ ಡಾ. ಶಂಭು ಹೆಗಡಾಳ್, ಶ್ರೀಶೈಲ ಶಿವಮಠ, ಮಹಾಂತೇಶ ಗಿರಿಮಠ, ಅಶೋಕ ಸುಳ್ಳದ, ಸ.ವಿ. ಬಳ್ಳಾರಿ, ಶಂಭು ಲಕ್ಷ್ಮೇಶ್ವರ, ಕೃಷ್ಣಪ್ಪ ಹಲಗೂರು, ಗುರುಸಿದ್ದಪ್ಪ ಹಳವುರ ಮುಂತಾದವರು ಭಾಗವಹಿಸಿದ್ದರು.

ಧೋಟಿಯಾಳದ ಚಂದ್ರಶೇಖರ ದೇವರು ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗರಾಜ್ ಅಂಗಡಿ ಸ್ವಾಗತಿಸಿದರು. ಡಾ. ಜ್ಯೋತಿ ಲಕ್ಷ್ಮಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಂತೋಷ ಲೂತಿಮಠ್ ವಂದಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್