ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ೨೦೨೬–೨೭ನೇ ಸಾಲಿನ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಬಲಹೀನ ವರ್ಗಗಳಿಗೆ ಶೈಕ್ಷಣಿಕವಾಗಿ ಬಲ ತುಂಬುವ ಉದ್ದೇಶದಿಂದ ಸಾಧನ ಅಕಾಡೆಮಿ ಸ್ಥಾಪಿಸಲಾಗಿದೆ.ಇಂದಿನ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಾವು ಸಿಂಹದಂತೆ ಭಾವಿಸಿಕೊಂಡು, ಆತ್ಮವಿಶ್ವಾಸ ಮತ್ತು ಛಲದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎದುರಾಗುವ ಅಡೆತಡೆಗಳಿಗೆ ಹೆದರದೆ ಗುರಿಯೆಡೆಗೆ ಮುನ್ನುಗ್ಗಬೇಕು ಎಂದು ಕರೆ ನೀಡಿದರು.ಈ ವೇಳೆ ಟಿವಿಕೆ ಪಕ್ಷದ ರಾಜಕೀಯ ಯಶಸ್ಸು, ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈಭವ್ ಸೂರ‍್ಯವಂಶಿ, ವಿಶ್ವವಿಖ್ಯಾತ ಓಟಗಾರ ಉಸೇನ್ ಬೋಲ್ಟ್, ಟೆನಿಸ್ ದಿಗ್ಗಜ ರಫೆಲ್ ನಡಾಲ್ ಮೊದಲಾದವರ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯರ‍್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಮನಸ್ಸಿನ ನಿಯಂತ್ರಣ ಮತ್ತು ಸಕಾರಾತ್ಮಕ ಚಿಂತನೆಯ ಮಹತ್ವವನ್ನು ವಿವರಿಸಿದ ಅವರು, ನಮ್ಮ ನಡವಳಿಕೆಯನ್ನು ಡೋಪಮಿನ್ ನಿಯಂತ್ರಿಸುವುದಕ್ಕಿಂತ, ಅದರ ಬಿಡುಗಡೆಯ ಮೇಲೆ ನಮ್ಮ ಜೀವನಶೈಲಿ ಮತ್ತು ಚಟುವಟಿಕೆಗಳ ಮೂಲಕ ನಿಯಂತ್ರಣ ಸಾಧಿಸುವುದು ಮುಖ್ಯ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಸಂತೋಷ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಬದುಕನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳುವುದರಿಂದ ಗುರಿಗಳನ್ನು ಯಶಸ್ವಿಯಾಗಿ ನಿರ್ವಹಿಸಬಹುದು. ಜಪಾನಿನ ‘ಕೈಜೆನ್’ ತತ್ವದ ಮೂಲಕ ನಿರಂತರವಾದ ಸಣ್ಣ ಸಣ್ಣ ಸುಧಾರಣೆಗಳು ಹೇಗೆ ದೊಡ್ಡ ಸಾಧನೆಗೆ ದಾರಿಯಾಗುತ್ತವೆ ಎಂಬುದನ್ನು ವಿವರಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪೈಪೋಟಿಯ ಕುರಿತು ಅನಗತ್ಯ ಭಯ ಬೇಡ. ಕೋಟ್ಯಂತರ ವಿರ್ಯಾಣುಗಳ ನೈಸರ್ಗಿಕ ಸ್ಪರ್ಧೆಯಲ್ಲಿ ಗೆದ್ದು ಈ ಜಗತ್ತಿಗೆ ಬಂದಿರುವ ನೀವು, ಐಎಎಸ್, ಕೆಎಎಸ್, ನೀಟ್‌ನಂತಹ ಪರೀಕ್ಷೆಗಳಲ್ಲಿ ೧:೧೦೦೦ ಪ್ರಮಾಣದ ಸ್ಪರ್ಧೆಗೆ ಏಕೆ ಹೆದರಬೇಕು?. ಸ್ಪರ್ಧೆಯನ್ನು ಭಯವಾಗಿ ಕಾಣದಿರುವಂತೆ ತಿಳಿಸಿದರು.ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ.ಬಿರಾದಾರ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಕುಮಾರ್ ಕರ‍್ನಾಳ ಅತಿಥಿಗಳ ಪರಿಚಯ ಮಾಡಿದರು. ಡಾ. ಸದಾಶಿವ ದೊಡಮನಿ ೨೦೨೬–೨೭ನೇ ಸಾಲಿನ ಕಾಲೇಜು ವಿದ್ಯಾರ್ಥಿ ಒಕ್ಕೂಟದ ರಚನೆ, ಉದ್ದೇಶ ಮತ್ತು ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಆಗಸ್ಟ್ ೧ರ ವ್ಯಸನಮುಕ್ತ ದಿನಾಚರಣೆ ಅಂಗವಾಗಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆ ಹಾಗೂ ಇತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಡಾ.ಪ್ರಶಾಂತ್ ಅದರಕಟ್ಟಿ ನಿರ್ವಹಿಸಿಸದರು. ಅಧ್ಯಕ್ಷತೆಯನ್ನು ರತ್ನಾಕರ್ ಎಸ್.ಹೂಲಿ, ಕಾನೂನು ಮಹಾವಿದ್ಯಾಲಯದ ಚೇರಮನ್ ಎಂ.ವಿ.ಪಾಟೀಲ್, ಮಹಾವಿದ್ಯಾಲಯದ ಐಕ್ಯೂಎಸಿ ಸಂಚಾಲಕರಾದ ಡಾ.ರಮೇಶ್ ಮಾಳಗಿ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಫಯಾಜ್ ಕುಷ್ಟಗಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಡಾ.ಎಂ.ಬಿ.ಒಂಟಿ ನಿರೂಪಿಸಿದರು. ಐಶ್ವರ್ಯ ಕೊಪ್ಪರದ ಪ್ರಾರ್ಥಿಸಿದರು. ಡಾ.ಎಂ.ಎಸ್. ಮರ‍್ಜೇಕರ್ ವಂದಿಸಿದರು. ಮಹಾವಿದ್ಯಾಲಯದ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.