ಸುಳ್ಳಿನ ಸಾರಥಿ ಸಿದ್ದರಾಮಯ್ಯ: ಸಿ.ಟಿ. ರವಿ

KannadaprabhaNewsNetwork |  
Published : Feb 09, 2024, 01:48 AM IST
ಕುಣಿಗಲ್ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಸಂಚಾರಿ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮ ಉದ್ಘಾಟನೆ | Kannada Prabha

ಸಾರಾಂಶ

ದೇಶದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದ ಅಧಿಕಾರ ಇದ್ದಾಗ ಅವರು ಹತ್ತು ವರ್ಷ ನೀಡಿದ ತೆರಿಗೆ ಪಾಲಿಗಿಂತ ಬಿಜೆಪಿ ಸರ್ಕಾರ ನೀಡಿರುವ ಹಣ ಬಹುದೊಡ್ಡದಿದೆ. ಅದನ್ನು ಮುಚ್ಚಿಟ್ಟು ಸಿದ್ದರಾಮಯ್ಯ ಕೇಂದ್ರಕ್ಕೆ ಸುಳ್ಳನ್ನು ನಂಬಿಸುವ ಉದ್ದೇಶದಿಂದ ನಮ್ಮ ತೆರಿಗೆ ಹಣದಲ್ಲಿ ಹೋಗಿದ್ದಾರೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ದೇಶದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದ ಅಧಿಕಾರ ಇದ್ದಾಗ ಅವರು ಹತ್ತು ವರ್ಷ ನೀಡಿದ ತೆರಿಗೆ ಪಾಲಿಗಿಂತ ಬಿಜೆಪಿ ಸರ್ಕಾರ ನೀಡಿರುವ ಹಣ ಬಹುದೊಡ್ಡದಿದೆ. ಅದನ್ನು ಮುಚ್ಚಿಟ್ಟು ಸಿದ್ದರಾಮಯ್ಯ ಕೇಂದ್ರಕ್ಕೆ ಸುಳ್ಳನ್ನು ನಂಬಿಸುವ ಉದ್ದೇಶದಿಂದ ನಮ್ಮ ತೆರಿಗೆ ಹಣದಲ್ಲಿ ಹೋಗಿದ್ದಾರೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಟೀಕಿಸಿದ್ದಾರೆ.

ಕುಣಿಗಲ್ ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಬಿಜೆಪಿ ಸಂಚಾರಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಸುಳ್ಳಿನ ಅಸ್ತ್ರಗಳು ಸಿದ್ದರಾಮಯ್ಯನ ಬಳಿ ಇವೆ ಎಂದು ಕಿಡಿ ಕಾರಿದರು, ಪ್ರತಿಯೊಂದು ಜಾತಿಗಳನ್ನು ವಿಂಗಡಿಸುವ ಗುಣ ಸಿದ್ದರಾಮಯ್ಯನ ಬಳಿ ತುಂಬಾ ಚೆನ್ನಾಗಿದೆ. ಈ ಹಿಂದೆ ಹಲವಾರು ಅಂತಹ ಕೆಲಸಗಳನ್ನು ಮಾಡಿದ್ದಾರೆ. ಇನ್ನು ಹಲವಾರು ಸುಳ್ಳುಗಳು ಅವರ ಬತ್ತಳಿಕೆಯಲ್ಲಿವೆ, ಚುನಾವಣೆ ನಂತರ ಕಾಂತರಾಜು ವರದಿ ಮುಖಾಂತರ ಕೆಲವೇ ದಿನಗಳಲ್ಲಿ ಮತ್ತೊಂದು ಸುಳ್ಳನ್ನು ಚೆಲ್ಲುತ್ತಾರೆ ಎಂದರು.

ಅಂಬೇಡ್ಕರ್‌ನ ಪಂಚಧಾಮಗಳನ್ನು ಅಭಿವೃದ್ಧಿ ಗೊಳಿಸಿದ್ದು ಬಿಜೆಪಿ, ಆದರೆ ಕೇಂದ್ರ ಸ್ಥಾನವಾದ ದೆಹಲಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಶವಸಂಸ್ಕಾರಕ್ಕೂ ಅವಕಾಶ ನೀಡಲಿಲ್ಲ ಎಂದರು. ಗಂಡನ ಜೋಬಿಗೆ ಕತ್ತರಿ ಹಾಕಿ ಹೆಂಡತಿಗೆ ಸೌಲಭ್ಯ ನೀಡುವುದು ಕಾಂಗ್ರೆಸ್ ಗುಣ. ಮುಂದಿನ ದಿನಗಳಲ್ಲಿ ಇನ್ನಷ್ಟು ಅವಾಂತರವನ್ನು ಕಾಂಗ್ರೆಸ್ ಮಾಡುತ್ತದೆ ಪ್ರತಿಯೊಬ್ಬರೂ ಜಾಗರೂಕತರಾಗಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕೆಂದರು,

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್‌, ರಾಜ್ಯದಲ್ಲಿ ಒಂದಾದ ರೀತಿ ಜೆಡಿಎಸ್ ಹಾಗೂ ಬಿಜೆಪಿ ಕುಣಿಗಲ್‌ನಲ್ಲೂ ಒಂದಾಗಿದೆ. ಇದರಲ್ಲಿ ಯಾವುದೇ ಭೇದಭಾವ ಇಲ್ಲ ಕೆಲವು ಸಂದರ್ಭಗಳಲ್ಲಿ ಉಂಟಾಗಿರುವ ಸ್ಥಳೀಯ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಎಲ್ಲರೂ ಕೂಡ ಒಟ್ಟಾಗಿ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಸಂಸದರ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದರು,

ಮುಖಂಡ ರುದ್ರೇಶ್ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಫೋಟೋ

ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಸಂಚಾರಿ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಸಿ.ಟಿ. ರವಿ ಉದ್ಘಾಟಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ