ಕನ್ನಡಪ್ರಭ ವಾರ್ತೆ ಮೈಸೂರು
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರ ಹೊರ ವಲಯ ಉತ್ತನಹಳ್ಳಿ ಆವರಣದಲ್ಲಿ ಆಯೋಜಿಸಿದ್ದ ಯುವ ದಸರಾದ 4 ನೇ ದಿನದ ಕಾರ್ಯಕ್ರಮವು ಅದ್ದೂರಿಯಾಗಿ ಯಶ ಕಂಡಿತು. ಖ್ಯಾತ ಸುಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಸಂಯೋಜಕ ಎ.ಆರ್. ರೆಹಮಾನ್ ಕಂಠ ಸಿರಿಯೂ ಯುವ ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ತುಂಬಿತು.ಜೈ ಹೊ ಜೈ ಹೂ ಗೀತೆಯ ಮೂಲಕ ಆಗಮಿಸಿ ನೋಡುಗರ ಎದ್ದೆ ಜಲ್ಲೆನಿಸುವಂತೆ ಮಾಡಿದರು. ದೇಶ ಭಕ್ತಿ ಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಿ ರೋಮಾಂಚನಗೊಳಿಸಿದರು.
ಫನ ಫಾನ ಗೀತೆಗೆ ಬೀಟ್ಸ್ ಗಳಿಗೆ ಯುವ ಸಮೂಹವು ಕುಣಿದು ಕುಪ್ಪಳಿಸಿದರು.ಎ .ಆರ್ ರೆಹಮಾನ್ ಅವರ ಕಂಠದಿಂದ ಮೂಡಿಬಂದ ಧಮ್ ದಾರ ಧಮ್ ದಾರ ಮಾಸ್ತು ಧಮ್ ದಾರ ಗೀತೆಗೆ ಪ್ರೇಕ್ಷಕರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ ಯುವ ಸಂಭ್ರಮವನ್ನು ಸಂಭ್ರಮಿಸಿದರು.
ಡ್ಯಾನ್ಸಿಂಗ್ ಸ್ಟಾರ್ ಪ್ರಭು ದೇವ ಅವರ ಚಿತ್ರದ ಮುಕಲ ಮುಕ ಬುಲ ಗೀತೆಯ ಜೊತೆಗೆ ಯುವ ಮನಸ್ಸುಗಳು ಹೆಜ್ಜೆಗೆ ತಾಳ ಹಾಕಿದರು. ವಿರಪಂಡಿಯನ್ ಚಿತ್ರದ ಗೀತೆಗೆ ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಧ್ವನಿ ಗೂಡಿಸಿ ಕೇಳುಗರ ಮನಗಳಿಗೆ ಮುದ ನೀಡಿದರು. ಘರ್ ಅಜಾ ಘರ್ ಆಜಾ ಗೀತೆಯ ಜೊತೆಗೆ ರ್ಯಾಪ್ ಬೀಟ್ಸ್ ಆರಂಭಿಸಿ ಸ್ಪೀಕರ್ ಬೀಟ್ಸ್ ಜೊತೆಗೆ ಎದೆಯು ಜಲ್ ಎನ್ನುವಂತೆ ಮಾಡಿದರು.ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಅವರ ಮಧುರ ಕಂಠ ಸಿರಿಯಾ ಮೂಲಕ, ರಾಧೆ ಕೆ ಮೇ ಕೇಸೇ ಚಲೇ, ರಾಧಾ ಕೆ ಮೇ ಚಲೇ, ಜಿಯಾ ಚಲೇ ಚಾ ಚಲೇ ಗೀತೆಯನ್ನು ನಾಟ್ಯದ ಜೊತೆಗೆ ಪ್ರಸ್ತುತ ಪಡಿಸಿದರು. ಅವರ ಧ್ವನಿ ಮತ್ತು ಹೆಜ್ಜೆಯೂ ಯುವ ಮನಸ್ಸಿಗೆ ಮುಟ್ಟಿ ಕುಣಿದು ಕುಪ್ಪಳಿಸಿದರು.
ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಪಲ್.ಪಲ್ ಹೆ ಬಾರಿ ಗೀತೆಯ ಹಾಡಿ ಅದೇ ಗೀತೆಯನ್ನು ಕನ್ನಡಕ್ಕೆ. ತರ್ಜುಮೆ ಮಾಡಿ ರಾಮ ನಿನ್ನ ಮನದಲ್ಲಿ ರಾಮ ನನ್ನ ಮನದಲ್ಲಿ ಎನುವ ಮೂಲಕ ತಮ್ಮ ಸುಮಧುರ ಕಂಠದಿಂದ ಮೈಸೂರು ಜನರ ಮನ ಸೆಳೆದರು. ರೋಜಾ ಜಾನೆ ಮನ್ ಗೀತೆಯ ಆಲಪದೊಂದಿಗೆ ಕನ್ನಡ ಹಿಂದಿ ತಮಿಳು ಮೂರು ಭಾಷೆಯಲ್ಲೂ ಕೂಡ ಗಾಯಕಿ ಶ್ವೇತಾ ಮೋಹನ್ ಅವರ ಧ್ವನಿ ಗುಡಿಸಿ ಹಾಡಿ ಪ್ರೇಕ್ಷಕರ ಮನ ಸೆಳೆದರು.ಎನ್ನ ಸೋಣ ರಭಾನೆ ಭಾನಯ, ಮಾಟಕ್ ಕಲಿ ಮಾತಾತ್ ಕಲಿ, ಧಮ್ ದಾರ ಧನ್ ದಾರ, ಕನ್ನಡದ ಕಿರುನಗೆ ಕಿರುನಗೆ ಹೃದಯದಲ್ಲಿ ಗೀತೆ, ಹೀಗೆ ಸುಮಾರು 20 ಕ್ಕಿಂತ ಹೆಚ್ಚಿನ ವಿವಿಧ ತಮಿಳು ಹಿಂದಿ ಕನ್ನಡ ಗೀತೆಗಳ ಮೂಲಕ ಎ ಅರ್ ರೆಹಮಾನ್ ಮತ್ತು ತಂಡದ ಗಾಯಕರು ಯುವ ಜನತೆಯ ಮನ ಸೆಳೆದರು
ತಂಡದ ಪ್ರಖ್ಯಾತ ಡ್ರಾಂ ಬಿಟ್ಟರ್ ಶಿವಮಣಿ ಅವರು ತಮ್ಮ ಬ್ಯಾಂಡ್ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ಸತತ 20 ನಿಮಿಷಗಳು ಯುವಕರಿಗೆ ಕೊರತೆಯಾಗದಂತೆ ಬ್ಯಾಂಡ್ ಬಾರಿಸುತ್ತಾ ಕೇಳುಗರ ಕಿವಿ ದಿಂ ಏನುವಂತೆ ಮಾಡಿದರು. ಪ್ರತಿಯೊಂದು ಬಿಟ್ಟ್ ಗಳಿಗೂ ಯುವ ಸಮೂಹ ಕುಣಿಯಲಾರಂಭಿಸಿತು. ಬಿಟ್ಸ್ ಗೆ ತಕ್ಕಂತೆ ಹೆಜ್ಜೆ ಜೊತೆಗೆ ಚಪ್ಪಾಳೆ ಶಿಳ್ಳೆ ಕೇಕೆ ಹಾಕುತ್ತಾ ರಿದಂ ಎಂಜಾಯ್ ಮಾಡಿದರು.ಸಾಗರೋಪದಿಯಲ್ಲಿ ಹಾರಿದು ಬಂದ ಜನ ಸಾಗರ
ಯುವ ದಸರಾ ಕಾರ್ಯಕ್ರಮ ಆರಂಭವಾಗಿ 3 ದಿನ ಕಳೆದಿದೆ ಆದರೆ ಯುವ ದಸರಾದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಕಂಡಂತಹ ಜನಸಾಗರ ಇಂದೆಂದು ನೋಡಿರದ ರೀತಿಯಲ್ಲಿ ಜನಸ್ತೋಮ ಹರಿದು ಬಂದಿದ್ದು ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಗೆ ಕಷ್ಟ ಸಾಧ್ಯವಾಗಿದೆ. ಸಂಜೆ 5 ಗಂಟೆಯಿಂದಲ್ಲೇ ಹೊರವಲಯ ರಸ್ತೆಯ ತುಂಬಾ ಜನ ಸಾಗರ ತುಂಬಿ ತುಳುಕುತ್ತಿತ್ತು ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೂ ಕೂಡ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.