ರಸ್ತೆ ಅಭಿವೃದ್ಧಿಗೆ ₹೫ ಕೋಟಿ ಮಂಜೂರು

KannadaprabhaNewsNetwork |  
Published : Oct 10, 2024, 02:21 AM IST
ಸುನಗ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ದೈತಪ್ಪನ ಕೆರೆಗೆ ಶಾಸಕ ಜೆ.ಟಿ.ಪಾಟೀಲ ಬಾಗಿನ ಅರ್ಪಿಸಿದರು. | Kannada Prabha

ಸಾರಾಂಶ

ಬೀಳಗಿ ತಾಲೂಕಿನ ಸುನಗ ಕ್ರಾಸ್‌ದಿಂದ ಅರಕೇರಿ ಗ್ರಾಮದವರೆಗೆ ಮತ್ತು ಸುನಗ ತಾಂಡಾದಿಂದ ಬೀಳಗಿ ಕ್ರಾಸ್‌ವರೆಗೆ ರಸ್ತೆ ಅಭಿವೃದ್ಧಿಗಾಗಿ ₹೫ ಕೋಟಿ ಮಂಜೂರ ಮಾಡಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ತಾಲೂಕಿನ ಸುನಗ ಕ್ರಾಸ್‌ದಿಂದ ಅರಕೇರಿ ಗ್ರಾಮದವರೆಗೆ ಮತ್ತು ಸುನಗ ತಾಂಡಾದಿಂದ ಬೀಳಗಿ ಕ್ರಾಸ್‌ವರೆಗೆ ರಸ್ತೆ ಅಭಿವೃದ್ಧಿಗಾಗಿ ₹೫ ಕೋಟಿ ಮಂಜೂರ ಮಾಡಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ತಾಲೂಕಿನ ಸುನಗ ಗ್ರಾಮದಲ್ಲಿ ಬುಧವಾರ ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ಉಪವಿಭಾಗ ಬೀಳಗಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸನ್ ೨೦೨೨-೨೩ನೇ ಸಾಲಿನ ವಿವೇಕ ಶಾಲಾ ಯೋಜನೆ ಅನುದಾನದಡಿ ಅಂದಾಜು ₹೧೩.೯೦ ಲಕ್ಷಗಳ ವೆಚ್ಚದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ನೂತನ ಕೊಠಡಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟ ಹಾಗೂ ಉತ್ತಮವಾಗಿರಬೇಕು. ಇದರಲ್ಲಿ ಯಾವುದೇ ಮುಲಾಜು ಸಲ್ಲದು. ಗ್ರಾಮಸ್ಥರು ಕೂಡಾ ಕಾಮಗಾರಿಗಳ ಬಗ್ಗೆ ನಿಗಾವಹಿಸಬೇಕು ಎಂದು ಸೂಚಿಸಿದರು.ಸುನಗ ಕ್ರಾಸ್‌ದಿಂದ ಅರಕೇರಿ ಹಾಗೂ ಬೀಳಗಿ ಕ್ರಾಸ್‌ ದರ್ಗಾದಿಂದ ಸುನಗಕ್ಕೆ ಹೋಗವ ಒಳರಸ್ತೆ ಅಭಿವೃದ್ಧಿ ಕಾಮಗಾರಿಗೆ ₹೫ ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭವಾಗಿದೆ. ಹಟ್ಟಿ ಚಿನ್ನದ ಗಣಿ ನಿಗಮದಿಂದ ಶಾಲಾ ಅಭಿವೃದ್ಧಿಗೆ ₹೨ ಲಕ್ಷಗಳ ಅನುದಾನ ನೀಡಲಾಗುವುದು. ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ತಹಸೀಲ್ದಾರ್‌ ವಿನೋದ ಹತ್ತಳ್ಳಿ, ತಾಪಂ ಇಒ ಅಭಯಕುಮಾರ ಮೊರಬ, ಬಿಇಒ ಆರ್.ಎಸ್.ಆದಾಪೂರ, ಜಿಪಂ ಎಇಇ ಗೊವಿಂದಪ್ಪ ಅಳ್ಳಿಕಟ್ಟಿ, ಸುನಗ ಗ್ರಾಪಂ ಅಧ್ಯಕ್ಷೆ ಪವಿತ್ರ ದಳವಾಯಿ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಡಾ.ಸಾಗರ ತೆಕ್ಕನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ, ತಾಪ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಯುವ ಮುಖಂಡ ಬಸವರಾಜ ಮೇಟಿ, ಜಿಪಂ ಮಾಜಿ ಸದಸ್ಯ ಯಮನಪ್ಪ ರೊಳ್ಳಿ, ನ್ಯಾಯವಾದಿ ಎ.ವೈ.ಮಾಚಕನೂರ, ಚಂದ್ರಶೇಖರ್ ಪಂಢರಿ, ವಿಠ್ಠಲ್ ಲಗಮನಿ, ರವಿ ಲಿಂಗನ್ನವರ, ರವಿ ಮೇಟಿ, ಮಲ್ಲಿಕಾರ್ಜುನ ದೊಡ್ಮೇಟಿ ಇತರರು ಇದ್ದರು.

ದೈತ್ಯಪ್ಪನ ಕೆರೆಗೆ ಬಾಗಿನ: ಸ್ವಚ್ಛತೆಗೆ ಶಾಸಕರ ಮನವಿ

ದೈತಪ್ಪನ ಕೆರೆಗೆ ಶಾಸಕರು ಬಾಗಿನ ಅರ್ಪಿಸಿ ಮಾತನಾಡಿ, ಸುನಗ ಗ್ರಾಮದ ಬೃಹತ್‌ ಆಕಾರದ ದೈತಪ್ಪನ ಕೆರೆಯು ಸಂಪೂರ್ಣವಾಗಿ ತುಂಬಿದೆ. ಇದರಿಂದ ಈ ಭಾಗದ ಕೃಷಿಕರಿಗೆ ಹಾಗೂ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಅಲ್ಲದೇ ಸುತ್ತಲಿನ ಎಲ್ಲ ಕೊಳವೆಬಾವಿಯಲ್ಲಿ ಉತ್ತಮ ನೀರು ಬರುತ್ತಿದ್ದು, ಕೆರೆ ಸಂರಕ್ಷಣೆ ಜತೆಗೆ ಕೆರೆಯ ಸುತ್ತ-ಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ರಾಜ್ಯದ ೧೩೫ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಇದ್ದೇವೆ. ಮುಖ್ಯಮಂತ್ರಿಯ ಬದಲಾವಣೆಯ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದವರು ಟೀಕಿಸುವಲ್ಲಿ ಯಾವುದೇ ಹುರುಳಿಲ್ಲ. ಜಾತಿ ಜನಗಣತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಟ್ಟ ವಿಚಾರ. ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆದಿಲ್ಲ.

-ಜೆ.ಟಿ.ಪಾಟೀಲ,
ಶಾಸಕ ಬೀಳಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ