ತಹಸೀಲ್ದಾರ್‌ ಸಮ್ಮುಖ ಅಡಕೆ ಗುಣಮಟ್ಟ ಪರಿಶೀಲನೆ

KannadaprabhaNewsNetwork |  
Published : Dec 21, 2024, 01:16 AM IST
ಅಡಿಕೆಯನ್ನು ಮರು ಪರಿಶೀಲನೆ ನಡೆಸುತ್ತೀರುವ ಸಿಬ್ಬಂದ್ದಿಗಳು) | Kannada Prabha

ಸಾರಾಂಶ

ಚನ್ನಗಿರಿ: ಪಟ್ಟಣದ ತುಮ್ಕೋಸ್‌ ಸಂಸ್ಥೆಯಲ್ಲಿ ಕಳಪೆ ಗುಣಮಟ್ಟದ ಅಡಕೆಯನ್ನು ಖರೀದಿಗೆ ಪಾಸು ಮಾಡಿ, ಗುಣಮಟ್ಟದ ಅಡಕೆಯನ್ನು ತಿರಸ್ಕರಿಸಿರುವ ಕ್ರಮ ಪ್ರಶ್ನಿಸಿ, ಸಂಘದ ಸದಸ್ಯರು ಮತ್ತು ರೈತರು ಧಿಡೀರನೆ ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಗುರುವಾರ ಅಡಕೆಯ ಗುಣಮಟ್ಟವನ್ನು ತಹಸೀಲ್ದಾರ್ ಶಂಕರಪ್ಪ ನೇತೃತ್ವದಲ್ಲಿ ಮರುಪರಿಶೀಲನೆ ನಡೆಸಲಾಯಿತು.

ಚನ್ನಗಿರಿ: ಪಟ್ಟಣದ ತುಮ್ಕೋಸ್‌ ಸಂಸ್ಥೆಯಲ್ಲಿ ಕಳಪೆ ಗುಣಮಟ್ಟದ ಅಡಕೆಯನ್ನು ಖರೀದಿಗೆ ಪಾಸು ಮಾಡಿ, ಗುಣಮಟ್ಟದ ಅಡಕೆಯನ್ನು ತಿರಸ್ಕರಿಸಿರುವ ಕ್ರಮ ಪ್ರಶ್ನಿಸಿ, ಸಂಘದ ಸದಸ್ಯರು ಮತ್ತು ರೈತರು ಧಿಡೀರನೆ ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಗುರುವಾರ ಅಡಕೆಯ ಗುಣಮಟ್ಟವನ್ನು ತಹಸೀಲ್ದಾರ್ ಶಂಕರಪ್ಪ ನೇತೃತ್ವದಲ್ಲಿ ಮರುಪರಿಶೀಲನೆ ನಡೆಸಲಾಯಿತು.

ಅಡಕೆ ಬೆಳೆಗಾರರು ಹಾಗೂ ಸಂಘದ ಸದಸ್ಯರಾದ ಚಂದ್ರಪ್ಪ, ಭಾರತಿ, ಮಂಜಪ್ಪ ಎಂಬವರು ಡಿ.17ರಂದು ಮಾರಾಟಕ್ಕೆ ತಂದ ಅಡಕೆ ಕಳಪೆ ಗುಣಮಟ್ಟದ್ದಾಗಿದ್ದರೂ, ಈ ಅಡಕೆಯನ್ನು ಉತ್ತಮ ಗುಣಮಟ್ಟದ್ದು ಎಂದು ಸ್ವೀಕರಿಸಲಾಗಿತ್ತು. ಸಂಘದ ಇನ್ನೊಬ್ಬ ಸದಸ್ಯರು ಮಾರಾಟಕ್ಕೆ ತಂದಿದ್ದ ಗುಣಮಟ್ಟದ ಅಡಕೆಯನ್ನು ಅಡಕೆ ಗುಣಮಟ್ಟ ಸರಿಯಿಲ್ಲ ಎಂದು ತಿರಸ್ಕರಿಸಿದ್ದನ್ನು ಪ್ರಶ್ನಿಸಿದ್ದ ಸಂಘದ ಸದಸ್ಯರು ಪ್ರತಿಭಟನೆ, ವಾಗ್ವಾದ ನಡೆಸಿದ್ದರು.

ತಹಸೀಲ್ದಾರರು ಈ ಕುರಿತು ಮಾತನಾಡಿ, ಸದರಿ ವಿಚಾರವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು ಎಂದು ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಹೋಗಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲಾಯಿತು. ಮೂವರು ರೈತರು ಮಾರಾಟಕ್ಕೆ ತಂದಿದ್ದ 71 ಚೀಲ ಅಡಕೆಯನ್ನು ಪೊಲೀಸ್ ಅಧಿಕಾರಿಗಳ ಸಮಕ್ಷಮ ತುಮ್ಕೋಸ್‌ ಗೋದಾಮಿನಲ್ಲಿರಿಸಿ, ಸೀಲ್ ಮಾಡಲಾಯಿತು ಎಂದರು.

ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಮೂರನೇ ತಂಡದಿಂದ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ಮನವಿ ಮಾಡಲಾಗಿತ್ತು. ಅಂತೆಯೇ, ಇಲ್ಲಿನ ಎಪಿಎಂಸಿ ಸಿಬ್ಬಂದಿ ಸಹಯೋಗದಲ್ಲಿ 71 ಚೀಲದ ಅಡಕೆಯ ಗುಣಮಟ್ಟವನ್ನು ಮರುಪರಿಶೀಲನೆ ಮಾಡಲಾಗಿದೆ. ಒಟ್ಟು 3,224 ಕೆ.ಜಿ. ತೂಕದ ಅಡಕೆಯಲ್ಲಿ 100 ಕೆ.ಜಿ.ಗೆ ಶೇ.7.59ರಷ್ಟು ಗೊರಬಲು ಬಂದಿದ್ದು, ಉಳಿದಂತೆ ಎಲ್ಲವೂ ರಾಶಿ ಅಡಕೆಯಾಗಿದೆ ಎಂದು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪಪ್ರಚಾರ ಕಾಂಗ್ರೆಸ್ ದಿವಾಳಿತನಕ್ಕೆ ಸಾಕ್ಷಿ: ಮಠಂದೂರು
ಕುಶಾಲನಗರ: ಮೂರನೇ ವರ್ಷದ ಕಾವೇರಿ ನದಿ ಸ್ವಚ್ಛತಾ ಅಭಿಯಾನ