ಚೇನಂಡ ಕಪ್ ಹಾಕಿ: ಮಚ್ಚಾರಂಡ, ಪುಲ್ಲಂಗಡ, ಇಟ್ಟೀರ, ಚಿಯಕಪೂವಂಡ ತಂಡಕ್ಕೆ ಜಯ

KannadaprabhaNewsNetwork |  
Published : Apr 17, 2026, 02:45 AM IST
 | Kannada Prabha

ಸಾರಾಂಶ

ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಗುರುವಾರ ಮಚ್ಚಾರಂಡ, ಪಳಂಗಿಯಂಡ ವಿರುದ್ಧ 5-1ರಿಂದ, ಪುಲ್ಲಂಗಡ, ಕರಿನೆರವಂಡ ವಿರುದ್ಧ 5-2ರಿಂದ, ಇಟ್ಟೀರ, ಪೊನ್ನೋಲ್ತಂಡ ವಿರುದ್ದ 5-0ರಿಂದ, ಚಿಯಕಪೂವಂಡ- ನೆರ್ಪಂಡ ವಿರುದ್ದ 4-0 ರಿಂದ ಜಯಭೇರಿ ಬಾರಿಸಿದವು.

ದುಗ್ಗಳ ಸದಾನಂದಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಗುರುವಾರ ಮಚ್ಚಾರಂಡ, ಪಳಂಗಿಯಂಡ ವಿರುದ್ಧ 5-1ರಿಂದ, ಪುಲ್ಲಂಗಡ, ಕರಿನೆರವಂಡ ವಿರುದ್ಧ 5-2ರಿಂದ, ಇಟ್ಟೀರ, ಪೊನ್ನೋಲ್ತಂಡ ವಿರುದ್ದ 5-0ರಿಂದ, ಚಿಯಕಪೂವಂಡ- ನೆರ್ಪಂಡ ವಿರುದ್ದ 4-0 ರಿಂದ ಜಯಭೇರಿ ಬಾರಿಸಿದವು. ಉದಿಯಂಡ ಮತ್ತು ಕೇಚೆಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು 1-1 ಅಂತರದ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ ನಲ್ಲಿ ಉದಿಯಂಡ 4-3 ಅಂತರದಿಂದ ಗೆಲುವು ಸಾಧಿಸಿತು. ಚೋಳಂಡ ಮತ್ತು ಕಾಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಗೋಲು ಗಳಿಸಲಿಲ್ಲ. ನಂತರ ಟೈ ಬ್ರೇಕರ್ ನಲ್ಲಿ ಕಾಯಪಂಡ 3-1ರಿಂದ ಗೆಲುವು ಪಡೆಯಿತು. ಚೆಂಬಾಂಡ ಮತ್ತು ನಂದೇಟಿರ ತಂಡಗಳ ನಡುವೆಯೂ ಸಮಬಲದ ಹೋರಾಟ ನಡೆದು ಎರಡೂ ತಂಡಗಳು ಗೋಲು ಗಳಿಸಲಿಲ್ಲ. ನಂತರ ಟೈ ಬ್ರೇಕರ್ ನಲ್ಲಿ ನಂದೇಟಿರ 3-2 ಗೋಲುಗಳಿಂದ ಗೆಲುವು ಸಾಧಿಸಿತು. ಕಳ್ಳಿಚಂಡ ಮತ್ತು ಅಲ್ತಂಡ ತಂಡಗಳ ನಡುವೆಯೂ ಬಿರುಸಿನ ಆಟ ನಡೆಯಿತು. ಎರಡೂ ತಂಡಗಳು ಗೋಲು ಗಳಿಸಲಿಲ್ಲ. ನಂತರ ಟೈ ಬ್ರೇಕರ್ ನಲ್ಲಿ ಅಲ್ತಂಡ ಕಳ್ಳಿಚಂಡ ವಿರುದ್ಧ 4-3 ಅಂತರದ ಗೆಲುವು ಸಾಧಿಸಿತು.

ಉಳಿದಂತೆ ನಾಗಂಡ ಕಬ್ಬಚ್ಚೀರ ವಿರುದ್ಧ 2-0ರಿಂದ, ತೀತರಮಾಡ ಬಲ್ಯಾಟಂಡ ವಿರುದ್ದ 3-0ರಿಂದ, ಚೀಯಕ್ಪೂವಂಡ ನೆರ್ಪಂಡ ವಿರುದ್ದ 4-0ರಿಂದ, ಮೇರಿಯಂಡ ಅಪ್ಪಾರಂಡ ವಿರುದ್ಧ 2-1ರಿಂದ, ಅರೆಯಡ ಬೊಳಕಾರಂಡ ವಿರುದ್ಧ 4-2ರಿಂದ, ತೇಲಪಂಡ ನಾಳಿಯಂಡ ವಿರುದ್ದ 3-0ರಿಂದ, ಪರದಂಡ ಮುದ್ದಂಡ ವಿರುದ್ದ 3-0ರಿಂದ, ಕಾಂಡಂಡ ಚಾಮೇರ ವಿರುದ್ಧ 4-0ರಿಂದ, ಮಂದೇಯಂಡ ಅವರೆಮಾದಂಡ ವಿರುದ್ದ 2-0ರಿಂದ, ಪಾಲೆಕಂಡ ಕಾಳೆಯಂಡ ವಿರುದ್ದ 2-1ರಿಂದ, ಮುಕ್ಕಾಟಿರ (ಮೂವತ್ತೋಕ್ಲು) ಪೊರ್ಕೊಂಡ ವಿರುದ್ಧ 2-1ರಿಂದ ಜಯ ಗಳಿಸಿದವು. ಐಚಂಡ ವಾಂಚಿರ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿತು.

ಲಖ್ನೌನಲ್ಲಿ ನೆಲೆಸಿರುವ ವಿಂಗ್ ಕಮಾಂಡರ್ ಕಳ್ಳಿಚಂಡ ಬೋಪಣ್ಣ ಚೇನಂಡ ಹಾಕಿ ಕಪ್‌ನಲ್ಲಿ ತಮ್ಮ ಕುಟುಂಬದ ತಂಡದ ಪರವಾಗಿ ಆಟವಾಡಿರುವುದು ವಿಶೇಷ. ಇಂದಿನ ಪಂದ್ಯಗಳುಮೈದಾನ 19. ಕ್ಕೆ ಬೊಳ್ಳಚಂಡ v/s ಮಲ್ಲಮಾಡ

11ಕ್ಕೆ ಬಾಚಿನಾಡಂಡ v/s ಕಾರೇರ

12ಕ್ಕೆ ಪಂದ್ಯಂಡ v/s ಆದೆಂಗಡ

1ಕ್ಕೆ ಪಾಲೆಂಗಡ v/s ಕುಮ್ಮಂಡ

2ಕ್ಕೆ ಸನ್ನುವಂಡ v/s ಮಲ್ಲೆಂಗಡ

3 ಕ್ಕೆ ಕುಂದೀರ v/s ನಾಪನೆರವಂಡ

3.30- ಕ್ಕೆ ಚೀರಂಡ v/s ಮೂಕಚಂಡ

ಮೈದಾನ 2.

9ಕ್ಕೆ ನಂಬಿಯಪಂಡ v/s ಅಂಜಪರವಂಡ

10 ಕ್ಕೆ ಬೊಟ್ಟೋಳಂಡ v/s ಕೊಣಿಯಂಡ

11ಕ್ಕೆ ಕೋದೆಂಗಡ v/s ಕಂಬೇಯಂಡ

12ಕ್ಕೆ ಬೊಳ್ಳೇಪಂಡ v/s ಚೊಟ್ಟೇರ

1ಕ್ಕೆ ಕೊಂಡೀರ v/s ಶಾಂತೆಯಂಡ

2ಕ್ಕೆ ಪಾಡೆಯಂಡ v/s ಮತ್ರಂಡ

3 ಕ್ಕೆ ಪುಲ್ಲೇರ v/s ಮುಕ್ಕಾಟಿರ (ಹರಿಹರ) ಮೈದಾನ 39ಕ್ಕೆ ಕೈಬುಲಿರ v/s ಮುಕ್ಕಾಟಿರ (ಬೇತ್ರಿ)

10 ಕ್ಕೆ ಕಡೇಮಾಡ v/s ಕಾಳಿಮಡ

11ಕ್ಕೆ ಬೊಟ್ಟಂಗಡ v/s ಚೇಂದಂಡ

12ಕ್ಕೆ ಮುಕ್ಕಾಟಿರ(ಕಡಗದಾಳು) v/s ಮಾಳೇಟಿರ (ಕೆದಮಳ್ಳೂರ್

1. ಕ್ಕೆ ಪಟ್ಟಚೆರುವಾಳಂಡ v/s ಮೂಡೇರ

2. ಕ್ಕೆ ಅಮ್ಮಂಡ v/s ಮೇಕೇರಿರ

3. ಕ್ಕೆ ಮುಕ್ಕಾಟಿರ(ಬೋಂದ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಯ ಆಡಳಿತದಲ್ಲಿ ರಾಜ್ಯ ಸುಭಿಕ್ಷವಾಗಲಿ
ಐದು ವರ್ಷ ತಂದೆಯೇ ರಾಜ್ಯ ಮುುನ್ನಡೆಸಲಿ