ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೀರರಾಣಿ ಕಿತ್ತೂರು ಚನ್ನಮ್ಮರ ಜೀವನ ಸಾಧನೆಗಳು ಹಾಗೂ ಹೋರಾಟದ ಬದುಕನ್ನು ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದು ತಿಳಿಸಿದರು.ಕಿತ್ತೂರು ರಾಣಿ ಚನ್ನಮ್ಮರು ತಮ್ಮ ನಾಡಿನ ನೆಲ, ಜಲ ಹಾಗೂ ಸ್ವಾಭಿಮಾನಕ್ಕಾಗಿ ದಿಟ್ಟತನದಿಂದ ಹೋರಾಡಿದ ವೀರ ಮಹಿಳೆ. ಅಂದಿನ ಕಾಲದಲ್ಲಿಯೇ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಮ್ಮ ನಾಯಕತ್ವದ ಗುಣವನ್ನು ಮೆರೆದಿದ್ದರು. ಅವರ ಧೈರ್ಯ, ಶೌರ್ಯ, ದೇಶಪ್ರೇಮ ಹಾಗೂ ಆಡಳಿತದ ಕೌಶಲ್ಯಗಳು ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಿವೆ. ಅವರ ಜೀವನಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಪ್ರೇಮ ಮತ್ತು ಸ್ವಾಭಿಮಾನದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ತಲುಪಿತು. ಮಹಾನಗರ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಸಮಾಜದ ಮುಖಂಡ ಬಿ.ಎಂ.ಪಾಟೀಲ ಮಾತನಾಡಿದರು. ಶರಣಗೌಡ ಪಾಟೀಲ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಭಾರತಿ ಕಣಮುಚನಾಳ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣನವರ, ಅಧಿಕಾರಿಗಳಾದ ಸಿ.ಬಿ.ಕುಂಬಾರ, ಸಂತೋಷ ಭೋವಿ, ರಾಜಶೇಖರ ದೈವಾಡಿ, ಡಾ.ವಿದ್ಯಾವತಿ ಅಥಣಿ, ಮುಖಂಡರಾದ ಗಿರೀಶ ಕುಲಕರ್ಣಿ, ವಿ.ಸಿ.ನಾಗಠಾಣ, ಬಿ.ಎಂ.ಬಿರಾದಾರ, ದಾನೇಶ ಅವಟಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.