ಕನ್ನಡಪ್ರಭ ವಾರ್ತೆ ಪಾಂಡವಪುರ
ಚನ್ನಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಅನ್ನಸಂತರ್ಪಣೆ ನಡೆಸಿದರು. ಈ ವೇಳೆ ಪಿ.ಚಲುವರಾಜು ಮಾತನಾಡಿ, ಮಾಜಿ ಪ್ರಧಾನಿಗಳ ಪತ್ನಿ ಚನ್ನಮ್ಮರ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ದೇವೇಗೌಡರ ರಾಜಕೀಯ ಬೆಳವಣಿಗೆಯ ಹಿಂದೆ ಶಕ್ತಿಯಾಗಿ ಚನ್ನಮ್ಮ ನಿಂತಿದ್ದರು. ಕುಟುಂಬದ ಜತೆಗೆ ಎಲ್ಲಾ ವರ್ಗದ ಜನರನ್ನು ಮಕ್ಕಳಂತೆ ಪಾಲನೆ ಮಾಡಿ ಅವರ ಬೆಳವಣಿಗೆಗೆ ಸಹಕಾರಿಯಾಗಿದ್ದರು. ಅವರ ನಿಧನದ ಹೊಂದಿದ ದಿನ ನಾಡಿನಾದ್ಯಂತ ಜನರು ಕಂಬನಿಮಿಡಿದು ತಾಯಿ ಆತ್ಮಕ್ಕೆ ಶಾಂತಿಕೋರಿದ್ದರು. ನಾವೆಲ್ಲರು ಸೇರಿ ಶ್ರದ್ದಾಂಜಲಿ ಕಾರ್ಯಕ್ರಮದ ಮೂಲಕ ಮಹಾತಾಯಿ ಚನ್ನಮ್ಮರ ಆತ್ಮಕ್ಕೆ ಶಾಂತಿಕೋರಿ ಅಗಲಿಕೆ ನೋವುವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸಿದರು.ಗವಿಗೌಡ ಪ್ರವೀಣ್ ಮಾತನಾಡಿ, ಚನ್ನಮ್ಮರ ಅಗಲಿಕೆಯಿಂದ ನಾಡಿನ ಜನರಿಗೆ ತಾಯಿ ಕಳೆದುಕೊಂಡ ಭಾವನೆ ಮೂಡಿದೆ. ಅಪಾರ ಧೈವಭಕ್ತೆಯಾಗಿದ್ದ ಚನ್ನಮ್ಮ ಅವರು ನಮ್ಮ ರಾಷ್ಟ್ರೀಯ ನಾಯಕರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಬೆಳವಣಿಗೆಗೆ ಶಕ್ತಿಯಾಗಿದ್ದರು. ಅವರ ಕುಟುಂಬಕ್ಕೆ ನಿಧನದ ನೋವು ಭರಿಸುವ ಶಕ್ತಿ ನೀಡಲೆಂದು ಹಾರೈಸಿದರು.ಇದೇ ವೇಳೆ ಆಗಮಿಸಿದ ಎಲ್ಲಾ ಅಭಿಮಾನಿಗಳು, ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಈ ಉದ್ಯಮಿ ಅಕ್ಷಯ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗುರುಸ್ವಾಮಿ, ಜೆಡಿಎಸ್ ರಾಜ್ಯ ರೈತ ವಿಭಾಗದ ಮಾಜಿ ಉಪಾಧ್ಯಕ್ಷ ಗವೀಗೌಡಪ್ರವೀಣ್, ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ವಿ.ಎಸ್.ನಿಂಗೇಗೌಡ, ಅರಳಕುಪ್ಪೆ ಪ್ರಕಾಶ್, ಗುರುಮೂರ್ತಿ, ಪ್ರಶಾಂತ್, ಎಲೆಕೆರೆ ಚಂದ್ರಣ್ಣ, ಜಗದೀಶ್, ಕೇಬಲ್ ಪ್ರಕಾಶ್, ಗೋವಿಂದರಾಜು ಸೇರಿದಂತೆ ಅಕ್ಷಯ್ ಗ್ರೂಪ್‌ನ ಸದಸ್ಯರು ಇದ್ದರು.