ವೀರ ಬಂಟ-ಮಾನಸ ಪುತ್ರ ಸಂಗೊಳ್ಳಿ ರಾಯಣ್ಣನೊಂದಿಗೆ ಯುದ್ದದಲ್ಲಿ ಹೋರಾಡಿ ಶೌರ್ಯ ಮೆರೆದಿದ್ದಾಳೆ
ಗದಗ: ವೀರರಾಣಿ ಕಿತ್ತೂರು ಚೆನ್ನಮ್ಮ ಶೌರ್ಯ-ಧೈರ್ಯದ ಪ್ರತೀಕವಾಗಿದ್ದಾಳೆ. ಇತಿಹಾಸದ ಪುಟಗಳಲ್ಲಿ ಅಜರಾಮರ ಸ್ಥಾನ ಪಡೆದ ಬೆಳ್ಳಿಚುಕ್ಕಿ ಚೆನ್ನಮ್ಮ ಆದರ್ಶ ಮಹಿಳೆಯಾಗಿದ್ದು ಪಂಚಮಸಾಲಿ ಕುಲದ ಹೆಮ್ಮೆ ಎಂದು ಮಹಿಳಾ ಮುಖಂಡೆ ಜಯಶ್ರೀ ಉಗಲಾಟದ ಹೇಳಿದರು.
ಅವರು ಗದಗ ಜಿಲ್ಲಾ ಪಂಚಮಸಾಲಿ ಸಮಾಜದಿಂದ ಜರುಗಿದ ವೀರರಾಣಿ ಕಿತ್ತೂರು ಚೆನ್ನಮ್ಮನ ಜಯಂತಿಯಂದು ಜರುಗಿದ ಕುಂಭಮೇಳದಲ್ಲಿ ಪಾಲ್ಗೊಂಡು ಮಾತನಾಡಿದರು.
ಬ್ರಿಟೀಷರ ಪಾರುಪತ್ಯಕ್ಕೆ ಪ್ರತಿರೋಧ ಒಡ್ಡಿದ ಚೆನ್ನಮ್ಮ ಧೈರ್ಯ-ಶೌರ್ಯದ ಧೂತಕವಾಗಿದ್ದಾಳೆ. ವೀರ ಬಂಟ-ಮಾನಸ ಪುತ್ರ ಸಂಗೊಳ್ಳಿ ರಾಯಣ್ಣನೊಂದಿಗೆ ಯುದ್ದದಲ್ಲಿ ಹೋರಾಡಿ ಶೌರ್ಯ ಮೆರೆದಿದ್ದಾಳೆ ಎಂದಳು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಮಹಿಳೆಯರು ಕುಂಭಮೇಳದಲ್ಲಿ ಭಾಗವಹಿಸಿದ್ದರು. ಗದುಗಿನ ರಾಯಚೂಟೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಗೊಂಡು ಗದುಗಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚೆನ್ನಮ್ಮನ ಪುತ್ಥಳಿ ಎದುರಿಗೆ ಸಮಾವೇಶಗೊಂಡಿತು.
ಅಲಂಕೃತ ವಾಹನದಲ್ಲಿ ಅಳವಡಿಸಲಾಗಿದ್ದ ಬೃಹದಾಕಾರದ ವೀರರಾಣಿ ಕಿತ್ತೂರ ಚೆನ್ನಮ್ಮಳ ಮೂರ್ತಿಯು ಕುಂಭಮೇಳದ ಮುಂದೆ ನೂರಾರು ಮಹಿಳೆಯರು ಜಯಘೋಷದೊಂದಿಗೆ ಮೆರವಣಿಗೆಯಲ್ಲಿ ಡೊಳ್ಳು ಸೇರಿದಂತೆ ಸಕಲ ವಾದ್ಯವೈಭವದೊಂದಿಗೆ ಮೆರವಣಿಗೆ ಜರುಗಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.