ಚೆನ್ನಮ್ಮನ ಹೋರಾಟ ಭಾರತೀಯರ ಹೆಮ್ಮೆಯ ಸಂಕೇತ: ಬಸವರಾಜ ಕಡೇಕೊಪ್ಪ

KannadaprabhaNewsNetwork |  
Published : Oct 24, 2025, 01:00 AM IST
ಮ | Kannada Prabha

ಸಾರಾಂಶ

ಬ್ಯಾಡಗಿ ಪಟ್ಟಣದ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ 247ನೇ ಜಯಂತಿ ಹಾಗೂ 201ನೇ ವಿಜಯೋತ್ಸವ ಕಾರ್ಯಕ್ರಮ ನಡೆಯಿತು.

ಬ್ಯಾಡಗಿ: ಬ್ರಿಟಿಷರ ವಸಹಾತುಶಾಹಿ ನೀತಿಯ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ತೋರಿದ ಧೈರ್ಯ ಮತ್ತು ಪ್ರತಿರೋಧದಿಂದ ಅವರಲ್ಲಿರುವ ನಾಯಕತ್ವದ ಗುಣಗಳು ಭಾರತೀಯ ಇತಿಹಾಸದಲ್ಲಿ ಹೆಮ್ಮೆಯ ಸಂಕೇತವೆಂದೇ ಪರಿಭಾವಿಸಲಾಗುತ್ತಿದೆ ಎಂದು ಪಂಚಮಸಾಲಿ ಸಮಾಜದ ಶಹರ ಘಟಕ ಅಧ್ಯಕ್ಷ ಬಸವರಾಜ ಕಡೇಕೊಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಜರುಗಿದ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ 247ನೇ ಜಯಂತಿ ಹಾಗೂ 201ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತನ್ನ ಪತಿ ಮತ್ತು ತನ್ನ ಏಕೈಕ ಪುತ್ರನ ಅಕಾಲಿಕ ಮರಣದ ಬಳಿಕ, ರಾಣಿ ಚೆನ್ನಮ್ಮ ಶಿವಲಿಂಗಪ್ಪ ಎಂಬ ಹುಡುಗನನ್ನು ತನ್ನ ಉತ್ತರಾಧಿಕಾರಿಯಾಗಿ ದತ್ತು ಪಡೆದರು. ಆದರೆ ಲಾರ್ಡ್ ಡಾಲ್‌ ಹೌಸಿ ಪರಿಚಯಿಸಿದ ಡಾಕ್ಟ್ರಿನ್ ಆಫ್ ಲ್ಯಾಪ್ಸ್ ಅಡಿಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ದತ್ತು ಸ್ವೀಕಾರವನ್ನು ಗುರುತಿಸಲು ನಿರಾಕರಿಸಿತು ಮತ್ತು ಕಿತ್ತೂರನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿತು. ಈ ಕ್ರಮವನ್ನು ರಾಣಿ ಚೆನ್ನಮ್ಮ ಬಲವಾಗಿ ವಿರೋಧಿಸಿದರು. ರಾಜ್ಯದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ನಿರ್ಧರಿಸಿದರು ಎಂದು ಹೇಳಿದರು.

1824ರ ಕಿತ್ತೂರ ಮೊದಲ ದಂಗೆ: ಸಮಾಜದ ಮುಖಂಡ ಎಂ.ಎಸ್. ಪಾಟೀಲ ಮಾತನಾಡಿ, ಕಲೆಕ್ಟರ್ ಸೇಂಟ್ ಜಾನ್ ಠಾಕ್ರೆ ನೇತೃತ್ವದ ಬ್ರಿಟಿಷ್ ಪಡೆಗಳು ಕಿತ್ತೂರಿನ ಮೇಲೆ ದಾಳಿ ಮಾಡಿದವು. ರಾಣಿ ಚೆನ್ನಮ್ಮನ ಸೈನ್ಯವು ತನ್ನ ಮೊದಲ ಯುದ್ಧದಲ್ಲಿಯೇ ಬ್ರಿಟಿಷರನ್ನು ಸೋಲಿಸಿತು. ಈ ಹೋರಾಟದಲ್ಲಿ ಕಲೆಕ್ಟರ್ ಸೇಂಟ್ ಜಾನ್ ಠಾಕ್ರೆ ಹತರಾದರು. ಈ ಗೆಲುವು ರಾಣಿ ಚನ್ನಮ್ಮ ಅವರನ್ನು ದಕ್ಷಿಣ ಭಾರತದ ಎಲ್ಲೆಡೆ ನಾಯಕಿಯನ್ನಾಗಿ ಮಾಡಿತು. ಹೀಗಾಗಿ ಈ ದಿನವನ್ನು ವಿಜಯೋತ್ಸವ ಮಾದರಿಯಲ್ಲಿ ಆಚರಿಸಲಾಗುತ್ತದೆ ಎಂದರು.

ಮುಖಂಡ ಜಯದೇವ ಶಿರೂರ ಮಾತನಾಡಿ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ ದಕ್ಷಿಣ ಭಾರತದ ಮೊದಲ ಮಹಿಳೆ ಎಂಬ ಕೀರ್ತಿ ರಾಣಿ ಚೆನ್ನಮ್ಮ ಅವರಿಗೆ ಸಲ್ಲುತ್ತದೆ ಎಂದರು.

ತಾಲೂಕಾಧ್ಯಕ್ಷ ತಿರಕಪ್ಪ ಮರಬಸಣ್ಣವರ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್‌ ಚಂದ್ರಶೇಖರ ನಾಯ್ಕ, ಬಿಇಒ ಎಸ್.ಜಿ. ಕೋಟಿ, ಶಂಕರಗೌಡ ಪಾಟೀಲ, ಶಿವಯೋಗಿ ಗಡಾದ, ಜ್ಯೋತಿ ಕುದರಿಹಾಳ, ಎಂ.ಸಿ. ಯರಗಲ್ಲ, ಡಿ.ಎಚ್. ಬುಡ್ಡನಗೌಡ್ರ, ಶಿವಯೋಗಿ ಉಕ್ಕುಂದ, ನಾಗನಗೌಡ ಕಲ್ಲಾಪುರ, ವಿಜಯ ಸವಣೂರ, ಮಾಲತೇಶ ಪೂಜಾರ, ದಯಾನಂದ ಉಳ್ಳಾಗಡ್ಡಿ, ರಾಜಶೇಖರ ಹೊಂಬರಡಿ, ಪಿ.ಬಿ. ಶಿಂಗಿ, ವೀರನಗೌಡ ಪಾಟೀಲ, ಶೇಖಣ್ಣ ಗಡಾದ, ಮಂಜುನಾಥ ಅಸುಂಡಿ, ಕಿರಣ ಬಾಳಿಕಾಯಿ, ಚೆನ್ನಬಸಣ್ಣ ಬೂದಿಹಾಳ, ಗಿರಿಜಾ ಪಟ್ಟಣಶೆಟ್ಟಿ, ಶಕುಂತಲಾ ಬೆನ್ನೂರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ