ಚೆಕ್ ಬೌನ್ಸ್ ಕೇಸ್: ₹11 ಲಕ್ಷ ನೀಡಲು ಆದೇಶ

KannadaprabhaNewsNetwork |  
Published : Jul 25, 2025, 01:12 AM IST
ಚೆಕ್ ಬೌನ್ಸ್ | Kannada Prabha

ಸಾರಾಂಶ

ಮುಧೋಳ ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಜಯಪುರ ತಾಲೂಕು ಕಣಬೂರ ಗ್ರಾಮದ ಯಾಸೀನ್‌ ಚಮ್ಮನಸಾಬ ಮುಲ್ಲಾಗೆ ಹೆಚ್ಚುವರಿ ಹಿರಿಯ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಜಯಪುರ ತಾಲೂಕು ಕಣಬೂರ ಗ್ರಾಮದ ಯಾಸೀನ್‌ ಚಮ್ಮನಸಾಬ ಮುಲ್ಲಾಗೆ ಹೆಚ್ಚುವರಿ ಹಿರಿಯ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮುಧೋಳ ತಾಲೂಕಿನ ಮುಧೋಳ ಶಹರದ ಕಿರಣ ಕಲ್ಲಪ್ಪ ಶಿರಗಾಂವಿ ಅವರ ಬಳಿ ಯಾಸೀನ್‌ ಚಮ್ಮನಸಾಬ ಮುಲ್ಲಾ ಎಂಬಾತ ಗ್ಯಾಂಗ್ ಕಳಿಸಿಕೊಡುವುದಾಗಿ ಹೇಳಿ ಮುಂಗಡ ₹8 ಲಕ್ಷ ಪಡೆದುಕೊಂಡಿದ್ದ. ಆದರೆ ಗ್ಯಾಂಗ್‌ ಕಳಿಸದ ಕಾರಣ ಹಣ ಮರಳಿಸಲು ಚೆಕ್ ನೀಡಿದ್ದರು. ಖಾತೆಯಲ್ಲಿ ಹಣ ಇಲ್ಲದೆ ಚೆಕ್‌ ಬೌನ್ಸ್ ಆದ ಹಿನ್ನೆಲೆ ಕಿರಣ ಶಿರಗಾಂವಿ ಅವರು ದೂರು ದಾಖಲಿಸಿದ್ದರು. ಈ ಕುರಿತು ನ್ಯಾಯಾಧೀಶರಾದ ವಿವೇಕ ಗ್ರಾಮೋಪಾಧ್ಯ ಅವರು ವಿಚಾರಣೆ ನಡೆಸಿ, ಸಮರ್ಪಕ ಸಾಕ್ಷ್ಯಾಧಾರ ದೊರಕದ ಕಾರಣ ಮತ್ತು ಹಣ ಮರಳಿ ನೀಡದಿರುವ ಬಗ್ಗೆ ಪಿರ್ಯಾದಿದಾರರು ರುಜುವಾತುಪಡಿಸಿದ್ದಾರೆ. ಕಾರಣ ಆರೋಪಿ ₹8 ಲಕ್ಷ ಬದಲಿಗೆ ₹11 ಲಕ್ಷ ನೀಡುವಂತೆ ಮತ್ತು ₹5 ಸಾವಿರ ದಂಡ ತುಂಬುವಂತೆ ಹಾಗೂ ಇದಕ್ಕೆ ತಪ್ಪಿದ್ದಲ್ಲಿ 3 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಯಾಸೀನ್‌ ಚಮ್ಮನಸಾಬ ಮುಲ್ಲಾ ಬಾಗಲಕೋಟೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ. ಈ ಮೇಲ್ಮನವಿ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ ಶಿರೋಳ ಅವರು ಮೇಲ್ಮನವಿ ತಿರಸ್ಕರಿಸಿ ಆಧೀನ ನ್ಯಾಯಾಲಯದ ಆದೇಶ ಎತ್ತಿ ಹಿಡಿದು, ಆರೋಪಿ ಯಾಸೀನ್‌ ಚಮ್ಮನಸಾಬ ಮುಲ್ಲಾ ಪಿರ್ಯಾದುದಾರ ಕಿರಣ ಶಿರಗಾಂವಿಗೆ ₹11 ಲಕ್ಷ ಕೊಡುವಂತೆ, ಇದಕ್ಕೆ ತಪ್ಪಿದ್ದಲ್ಲಿ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ, ಆದೇಶಸಿದ್ದಾರೆ.ಪಿರ್ಯಾದಿದಾರನ ಪರ ವಕೀಲರಾದ ಎಲ್.ಎನ್.ಸುನಗದ ವಾದ ಮಂಡಿಸಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ