ತುಮುಲ್‌ನಿಂದ ಹೈನುಗಾರರಿಗೆ 13.60 ಲಕ್ಷ ರು. ಚೆಕ್ ವಿತರಣೆ

KannadaprabhaNewsNetwork |  
Published : May 08, 2026, 01:30 AM IST
7 ಟಿವಿಕೆ 1 – ತುರುವೇಕೆರೆಯ ನಂದಿನಿ ಕ್ಷೀರ ಭವನದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. | Kannada Prabha

ಸಾರಾಂಶ

ತಾಲೂಕಿನ ಹಲವಾರು ಹೈನುಗಾರರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಹಲವು ಯೋಜನೆಗಳ ಅಡಿಯಲ್ಲಿ ಸುಮಾರು 13.60 ಲಕ್ಷ ರುಗಳ ಚೆಕ್ ನ್ನು ಕೆಎಂಎಫ್ ನ ಜಿಲ್ಲಾ ನಿರ್ದೇಶಕರಾದ ಸಿ.ವಿ.ಮಹಲಿಂಗಯ್ಯ ವಿತರಣೆ ಮಾಡಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಹಲವಾರು ಹೈನುಗಾರರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಹಲವು ಯೋಜನೆಗಳ ಅಡಿಯಲ್ಲಿ ಸುಮಾರು 13.60 ಲಕ್ಷ ರುಗಳ ಚೆಕ್ ನ್ನು ಕೆಎಂಎಫ್ ನ ಜಿಲ್ಲಾ ನಿರ್ದೇಶಕರಾದ ಸಿ.ವಿ.ಮಹಲಿಂಗಯ್ಯ ವಿತರಣೆ ಮಾಡಿದರು.

ಇಲ್ಲಿಯ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಮಾರಂಭದಲ್ಲಿ ಅವರು ಚೆಕ್ ಗಳನ್ನು ವಿತರಣೆ ಮಾಡಿದರು. ರಾಸುಗಳ ವಿಮಾ ಯೋಜನೆಯಡಿ ಮೃತಪಟ್ಟ 14 ರಾಸುಗಳ ಮಾಲೀಕರಿಗೆ ಸುಮಾರು 80 ಸಾವಿರ ರುಗಳು, ಇಬ್ಬರು ಹೈನುಗಾರರು ಮೃತಪಟ್ಟ ಹಿನ್ನೆಲೆಯಲ್ಲಿ ತಲಾ 50 ಸಾವಿರದಂತೆ ಒಂದು ಲಕ್ಷ ರುಗಳು, ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಓರ್ವ ವಿದ್ಯಾರ್ಥಿಗೆ 10 ಸಾವಿರ ರುಗಳು, ಬೆಂಕಿಕೆರೆಯ ಕಟ್ಟಡ ನಿರ್ಮಾಣದ ಅನುದಾನ 4.50 ಲಕ್ಷ ರುಗಳ ಚೆಕ್ ನ್ನು ಅವರು ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಸಿ.ವಿ.ಮಹಲಿಂಗಯ್ಯ, ರೈತಾಪಿಗಳಿಗೆ ನಂದಿನಿ ಸಂಸ್ಥೆ ನೆರವಾದಷ್ಟು ಬೇರೆ ಯಾವ ಸಂಸ್ಥೆಗಳೂ ರೈತರ ನೆರವಿಗೆ ಬಂದಿಲ್ಲ. ನಮ್ಮಲ್ಲಿ ರೈತರ ನೆರವಿಗೆ ಬರಲು ನೂರಾರು ಯೋಜನೆಗಳು ಇವೆ. ಅಲ್ಲದೇ ಪ್ರತಿ ತಿಂಗಳೂ ತಪ್ಪದೇ ಹಾಲಿನ ಹಣ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ತಮ್ಮ ಮಕ್ಕಳ ವಿದ್ಯಾಭ್ಯಾಸ, ರಾಸುಗಳ ವಿಮೆ, ಹೈನುಗಾರರಿಗೆ ವಿಮೆ ಸೇರಿದಂತೆ ವಿವಿಧ ಯೋಜನೆಗಳು ಇರುವುದರಿಂದ ರಾಜ್ಯ ಅಂತರ ರಾಜ್ಯದಲ್ಲೂ ನಂದಿನಿ ಸಂಸ್ಥೆಯ ಮೇಲೆ ರೈತರಿಗೆ ನಂಬಿಕೆ ಇದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಮುಖ್ಯಸ್ಥ ಮಂಜುನಾಥ್, ವಿಸ್ತರಣಾಧಿಕಾರಿಗಳಾದ ದಿವಾಕರ್, ಕಿರಣ್, ಸುನಿಲ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಗ್ಗೂಡಿಸುವ ಕೆಲಸ ಮಾಡುವ ಗ್ರಾಮ ಅರಣ್ಯ ಸಮಿತಿಗಳು: ಎಂ.ಪಿ.ಆದರ್ಶ
ಬಸ್ಸಲ್ಲಿ ‘ವಾಂತಿ’ ನಾಟಕವಾಡಿ ಚಿನ್ನಾಭರಣ ದೋಚುವ ಕುಪ್ಪಂ ಗ್ಯಾಂಗ್ ಅರೆಸ್ಟ್