ಚೆಸ್ ಕ್ರೀಡೆ ಮಕ್ಕಳ ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತದೆ

KannadaprabhaNewsNetwork |  
Published : Sep 15, 2024, 01:48 AM IST
ಹಾಸನ ನಗರದ ಸಮೀಪ ಚಿಕ್ಕಕೊಂಡಗುಳ, ರಿಂಗ್ ರಸ್ತೆ ಬಳಿ ಇರುವ ರಾಯಲ್ ಅಪೋಲೊ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಚೆಸ್ ಪಂದ್ಯಾವಳಿಯಲ್ಲಿ ಪ್ರಾಂಶುಪಾಲ ಎಲ್.ಪಿ. ರವಿಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಹಾಸನ ನಗರದ ಸಮೀಪ ಚಿಕ್ಕಕೊಂಡಗುಳ, ರಿಂಗ್ ರಸ್ತೆ ಬಳಿ ಇರುವ ರಾಯಲ್ ಅಪೋಲೊ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಚೆಸ್ ಅಸೋಸಿಯೇಷನ್, ಕದಂಬ ಚೆಸ್ ಅಕಾಡೆಮಿ ಮತ್ತು ರಾಯಲ್ ಅಪೋಲೊ ಶಾಲೆಯ ಸಹಭಾಗಿತ್ವದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 15 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ ಫಿಡೆ ರೇಟೆಡ್ ಎರಡು ದಿನದ ಚೆಸ್ ಪಂದ್ಯಾವಳಿ ನಡೆಯಿತು. ಚೆಸ್ ಕ್ರೀಡೆ ಎಂಬುದನ್ನು ಮಕ್ಕಳಿಂದಲೇ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಸ್ಥೈರ್ಯ ಹಾಗೂ ಅವರ ಮೆದುಳಿನ ಬುದ್ಧಿ ಚುರುಕುಗೊಳ್ಳುತ್ತದೆ ಎಂದು ರಾಯಲ್ ಅಪೋಲೊ ಅಂತಾರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ಎಲ್.ಪಿ. ರವಿಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಚೆಸ್ ಕ್ರೀಡೆ ಎಂಬುದನ್ನು ಮಕ್ಕಳಿಂದಲೇ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಸ್ಥೈರ್ಯ ಹಾಗೂ ಅವರ ಮೆದುಳಿನ ಬುದ್ಧಿ ಚುರುಕುಗೊಳ್ಳುತ್ತದೆ ಎಂದು ರಾಯಲ್ ಅಪೋಲೊ ಅಂತಾರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ಎಲ್.ಪಿ. ರವಿಕುಮಾರ್ ತಿಳಿಸಿದರು.

ನಗರದ ಸಮೀಪ ಚಿಕ್ಕಕೊಂಡಗುಳ, ರಿಂಗ್ ರಸ್ತೆ ಬಳಿ ಇರುವ ರಾಯಲ್ ಅಪೋಲೊ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಚೆಸ್ ಅಸೋಸಿಯೇಷನ್, ಕದಂಬ ಚೆಸ್ ಅಕಾಡೆಮಿ ಮತ್ತು ರಾಯಲ್ ಅಪೋಲೊ ಶಾಲೆಯ ಸಹಭಾಗಿತ್ವದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 15 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ ಫಿಡೆ ರೇಟೆಡ್ ಎರಡು ದಿನದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚೆಸ್ ಎಂಬುದು ಜೀವನದ ಭರವಸೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಮಕ್ಕಳಲ್ಲಿ ವೈಜ್ಞಾನಿಕ ಆಲೋಚನೆಯನ್ನು ಬೆಳೆಸಲು ಅನುಕೂಲವಾಗಲಿದೆ. ಚೆಸ್ ಆಟೋಟಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿರುವುದರಿಂದ ಅವರ ಬುದ್ಧಿ ಚುರುಕುಗೊಳ್ಳುತ್ತದೆ. ಓದುವುದರಷ್ಟೇ ಆಟವಾಡುವುದು ಮುಖ್ಯವಾಗಿರುತ್ತದೆ ಎಂದರು.

ಯಾವುದೇ ಕ್ರೀಡೆ ಆಗಿರಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತೀ ಮುಖ್ಯವಾಗಿದೆ. ರಾಜ್ಯ ಮಟ್ಟದ ಕ್ರೀಡೆಯನ್ನು ನಗರದಲ್ಲಿ ಎರಡನೇ ಬಾರಿ ಏರ್ಪಡಿಸಿರುವುದು ಚೇಸ್ ಆಟಗಾರರಿಗೆ ಇದೊಂದು ಸುಸಂದರ್ಭವಾಗಿದೆ ಎಂದು ಇದೇ ವೇಳೆ ಚೆಸ್ ಆಟಗಾರರಿಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಜನ ಮಕ್ಕಳು ಚೆಸ್ ಆಟಗಾರರು ತಮ್ಮ ಪ್ರತಿಭೆಯನ್ನು ಏಕಾಗ್ರತೆಯಿಂದ ಪ್ರದರ್ಶಿಸಿದರು. ಬಂದ ಕ್ರೀಡಾಪಟುಗಳಿಗೆ ಯಾವುದೆ ಸಮಸ್ಯೆ ಆಗದಂತೆ ಮೊದಲೆ ನಿಗಾವಹಿಸಿ ಯಶಸ್ವಿಗೊಳಿಸಿದರು.ಇದೇ ವೇಳೆ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಅರವಿಂದ ಶಾಸ್ತ್ರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ರಶ್ಮಿ ಕಿರಣ್, ಉಪಾಧ್ಯಕ್ಷ ಎಂ.ಎನ್. ಹರೀಶ್ ಕುಮಾರ್‌, ಕದಂಬ ಚೆಸ್ ಅಕಾಡೆಮಿ ಸ್ಥಾಪಕರಾದ ಎಂ.ಟಿ. ತ್ಯಾಗರಾಜು, ಜಿಲ್ಲಾ ಚೆಸ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ರಾಧ ಜಗದೀಶ್, ಚನ್ನಪಟ್ಟಣ ಶಾಖೆಯತರಬೇತುದಾರರಾದ ಕಾವ್ಯ ಚಂದನ್, ಹೇಮಾವತಿ ನಗರ ಶಾಖೆಯ ತರಬೇತುದಾರರಾದ: ನಯನ ಸತೀಷ್ ಇತರರು ಭಾಗವಹಿಸಿದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ