ಮಂಗಳೂರು: ಮಂಗಳೂರಿನ ಮಿನಿ ಪುರಭವನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಮುಕ್ತ ಫಿಡೆ ರೇಟೆಡ್ ಚೆಸ್ ಟೂರ್ನಿಯ ನಾಲ್ಕನೇ ದಿನ ಶುಕ್ರವಾರ ಏಳನೇ ಸುತ್ತಿನಲ್ಲಿ ಆಗಸ್ಟಿನ್, ಲೋಕೇಶ್, ಬಾಲಸುಬ್ರಹ್ಮಣ್ಯಂ ಇವರು ಆರೂವರೆ ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಟಾಪ್ ಬೋರ್ಡ್‌ನಲ್ಲಿ ಇಂದ್ರಜಿತ್ ಮಹಿಂದ್ರೇಕರ್ ಅವರನ್ನು ಸೋಲಿಸಿ ಆಗಸ್ಟಿನ್ ಮುನ್ನಡೆ ಪಡೆದರು. ಎರಡನೇ ಬೋರ್ಡ್‌ನಲ್ಲಿ ಆಡಿದ ಲೋಕೇಶ್ ಅವರು ಆದಿತ್ಯ ಸಾವಲ್ಕರ್ ಅವರನ್ನು ಮಣಿಸಿದರು. ಅಂತಾರಾಷ್ಟ್ರೀಯ ಮಾಸ್ಟರ್ ಬಾಲಸುಬ್ರಹ್ಮಣ್ಯಂ ಅವರು ಅನಿಲ್ ಕುಮಾರ್ ಅವರನ್ನು ಸೋಲಿಸಿ ಮುನ್ನಡೆ ಕಾಯ್ದುಕೊಂಡರು.