ರಾಮೇಶ್ವರ ದೇಗುಲ ಅಭಿವೃದ್ಧಿಗೆ ಚೇತನ್‌ ಆಗ್ರಹ

KannadaprabhaNewsNetwork |  
Published : Jul 23, 2025, 12:30 AM IST
ತರೀಕೆರೆ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ಸೇವಾ ಸಮಿತಿ ಪರವಾಗಿಶಾಸಕ ಜಿ.ಹೆಚ್.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಕೆ | Kannada Prabha

ಸಾರಾಂಶ

ಪಟ್ಟಣದ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ದೇಗುಲ ಅಭಿವೃದ್ಧಿ ಪಡೆಸಲು ದೇಗುಲ ಸೇವಾ ಸಮಿತಿ ಅಧ್ಯಕ್ಷ ಚೇತನ್‌ ಅವರ ನೇತೃತ್ವದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತರೀಕೆರೆ

ಪಟ್ಟಣದ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ದೇಗುಲ ಅಭಿವೃದ್ಧಿ ಪಡೆಸಲು ದೇಗುಲ ಸೇವಾ ಸಮಿತಿ ಅಧ್ಯಕ್ಷ ಚೇತನ್‌ ಅವರ ನೇತೃತ್ವದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತರೀಕೆರೆ ಇತಿಹಾಸದಲ್ಲಿ ಚಿಕ್ಕೆರೆ ಏರಿಯ ಪಕ್ಕದಲ್ಲಿರುವ ಶ್ರೀ ಪ್ರಸನ್ನ ರಾಮೇಶ್ವರಸ್ವಾಮಿ ದೇವಸ್ಥಾನವು ಮತ್ತು ಇದರ ಆವರಣದಲ್ಲಿರುವ ಸುಬ್ಬರಾಯನ ಕೊಳ, ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಮತ್ತು ನಾಗಬನ ದೇವರ ಇತಿಹಾಸ ಪ್ರಸಿದ್ದವಾಗಿದೆ, ಹತ್ತಾರು ವರ್ಷಗಳ ನಂತರ ಇದ್ದ ಹಳೆಯ ದೇವಸ್ಥಾನ ಪುನರ್‌ ನಿರ್ಮಾಣವಾಗಿದ್ದು, ತರೀಕೆರೆ ಜನರ ಶ್ರದ್ದಾಕೇಂದ್ರವಾಗಿದೆ. ಇಲ್ಲಿ ಶಿವರಾತ್ರಿ ವಿಶೇಷ ಪೂಜೆಗಳು, ಭಜನೆ, ಅನ್ನಸಂತರ್ಪಣೆ ಇವುಗಳು ಮತ್ತು ನಿತ್ಯ ಪೂಜೆಗಳು ಸಾಂಗವಾಗಿ ನಡೆಯುತ್ತಿವೆ ಎಂದು ಅಧ್ಯಕ್ಷ ಚೇತನ್‌ ಹೇಳಿದರು.

ಈ ಕ್ಷೇತ್ರದಲ್ಲಿ ಸಾರ್ವಜನಿಕರಿಗಾಗಿ ಈ ಕೆಳಕಂಡ ಅವಶ್ಯಕತೆ ಇರುವ ಅಭಿವೃದ್ದಿ ಕಾರ್ಯಗಳು ಆಗಬೇಕಾಗಿದ್ದು, ತಮ್ಮ ಸಹಕಾರದಿಂದ ನಡೆಯಬೇಕಾಗಿರುತ್ತದೆ, ಪ್ರತಿ ಸೋಮವಾರ ಸಾರ್ವಜನಿಕರಿಗಾಗಿ ಅನ್ನಸಂತರ್ಪಣೆಯ ವ್ಯವಸ್ಥೆ ಆಗಬೇಕಾಗಿರುತ್ತದೆ, ದೇವಸ್ಥಾನದ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಬೋರ್‌ವೆಲ್ ಮೋಟರ್ ಸಹಿತ ಅವಶ್ಯಕತೆ ಇರುತ್ತದೆ, ಕಲ್ಯಾಣಿಯ ಹಿಂಬಾಗದ ಜಾಗದಲ್ಲಿ ಅಡಿಗೆ ಮನೆ ಮತ್ತು ದಾಸ್ತಾನು ಕೊಠಡಿ ಅವಶ್ಯಕತೆ ಇರುತ್ತದೆ, ದೇವಸ್ಥಾನದ ಪ್ರವೇಶದ್ವಾರಕ್ಕೆ ಒಂದು ಸ್ವಾಗತ ಮಂಟಪ (ಸ್ವಾಗತ ಕಮಾನ್) ಅವಶ್ಯಕತೆ ಇರುತ್ತದೆ, ಹಾಲಿ ಇರುವ ಕಲ್ಯಾಣಿಯ ಮುಂಭಾಗದಲ್ಲಿ ಪಂಚಮುಖಿ ಈಶ್ವರನ ಪ್ರತಿಮೆ ಅವಶ್ಯಕತೆ ಇರುತ್ತದೆ, ಇದಲ್ಲದೆ ಭಕ್ತರು ದೇವಾಲಯ ಆವರಣದಲ್ಲಿ ಭಕ್ತಿಯಿಂದ ಕುಳಿತುಕೊಳ್ಳುವಂತಹ ವಾತಾವರಣವನ್ನು ನಿರ್ಮಿಸುವ ಅವಶ್ಯಕತೆ ಇರುತ್ತದೆ. ಇವುಗಳನ್ನು ಶೀಘ್ರ ಈಡೇರಿಸಬೇಕೆಂದು ಹೇಳಿದರು.

ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ಸೇವಾ ಸಮಿತಿಯ ಉದೇಶ್, ಸಮಿತಿ ಪದಾದಿಕಾರಿಗಳು, ಸದಸ್ಯರು, ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್, ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ಧರ್ಮರಾಜ್, ತಾಲೂಕು ಕಿಸಾನ್ ಸೆಲ್ ಅಧ್ಯಕ್ಷರು ಗಿರೀಶ್, ಮಂಜುನಾಥ್, ದೇವೇಂದ್ರ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ