- ರಾಜ್ಯದ 500ಕ್ಕೂ ಹೆಚ್ಚು ವಧು-ವರರು ಭಾಗಿ: ಪಂಚಾಕ್ಷರಯ್ಯ ಮಾಹಿತಿ
ನಗರದ ಜಯನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆಯ ಶ್ರೀ ಭಗೀರಥ ವೃತ್ತದ ಎಚ್.ಬಿ. ಇಂದಿರಮ್ಮ ರಾಮಯ್ಯ ಸಭಾಂಗಣದಲ್ಲಿ ಮೇ 12ರಂದು ಛಲವಾದಿ ಸಮಾಜದ ವಧು-ವರರ ಸಮಾವೇಶ ನಡೆಯಲಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಮಾವೇಶದ ಸಂಚಾಲಕ, ನಿವೃತ್ತ ಶಿಕ್ಷಕ ಎಲ್.ಪಂಚಾಕ್ಷರಯ್ಯ, ಅಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಸಮಾವೇಶ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಮಾಜದ ಮುಖಂಡರು, ಹಿರಿಯರು, ವಧು-ವರರು ಕುಟುಂಬ ಸಮೇತ ಭಾಗವಹಿಸುತ್ತಿದ್ದಾರೆ ಎಂದರು.ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ಕಾರ್ಯಾಧ್ಯಕ್ಷ ಟಿ.ಎಸ್.ರಾಮಯ್ಯ, ಪದಾಧಿಕಾರಿಗಳ ಸಹಯೋಗ, ಉಪಸ್ಥಿತಿಯಲ್ಲಿ ಸಮಾವೇಶ ಆಯೋಜಿಸಲಾಗಿದೆ. ನಾಯಕನಹಟ್ಟಿ ಮತ್ತು ಹಿರಿಯೂರು ಛಲವಾದಿ ಬಂಧುಗಳ ಆಶ್ರಯದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹಾಸಭಾ ಜಿಲ್ಲಾ ಅಧ್ಯಕ್ಷ, ನಿವೃತ್ತ ಎಸ್‌ಪಿ ಎನ್.ರುದ್ರಮುನಿ, ಕಾರ್ಯಾಧ್ಯಕ್ಷ ರಾಮಯ್ಯ, ಎಸ್.ಶೇಖರಪ್ಪ, ಎಚ್.ತಿಪ್ಪೇಸ್ವಾಮಿ, ಎ.ಡಿ.ರೇವಣಸಿದ್ದಪ್ಪ ಇತರರು ಇದ್ದರು.
- - - -9ಕೆಡಿವಿಜಿ3:ದಾವಣಗೆರೆಯಲ್ಲಿ ಗುರುವಾರ ಛಲವಾದಿ ಸಮಾಜದ ವಧು-ವರರ ಸಮಾವೇಶದ ಬಗ್ಗೆ ಎಲ್.ಪಂಚಾಕ್ಷರಯ್ಯ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.