ಕನ್ನಡಪ್ರಭ ವಾರ್ತೆ, ಹನೂರು
ಮಲೆ ಮಹದೇಶ್ವರ ಬೆಟ್ಟದಲ್ಲಿ ಛಟ್ಟಿ ಅಮಾವಾಸ್ಯೆ ಪ್ರಯುಕ್ತ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.ತಾಲೂಕಿನ ಪವಾಡ ಪುರುಷ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಪ್ರಯುಕ್ತ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಾದೇಶ್ವರನಿಗೆ ಪಂಚಾಮೃತ ಅಭಿಷೇಕ ನೈವೇದ್ಯ ಅಭಿಷೇಕ ಬಿಲ್ವಾರ್ಚನೆ ಧೂಪದ ಅಭಿಷೇಕ ಹಾಗೂ ಮಹಾ ಮಂಗಳಾರತಿ ನಡೆಯಿತು.
ಉತ್ಸವಗಳಾದ ರಾತ್ರಿ ಚಿನ್ನದ ತೇರು ಹಾಗೂ ಬೆಳ್ಳಿ ರಥೋತ್ಸವ ಮತ್ತು ಹುಲಿ ವಾಹನ ಉತ್ಸವ ಮಲೆ ಮಹದೇಶ್ವರನ ಉತ್ಸವ ರುದ್ರಾಕ್ಷಿ ಮಂಟಪೋತ್ಸವ ಮಾದಪ್ಪನ ಭಕ್ತಾದಿಗಳ ಸಂಭ್ರಮ ಸಡಗರದೊಂದಿಗೆ ಜೈಕಾರಗಳೊಂದಿಗೆ ನಡೆಯಿತು.ಮಾದಪ್ಪನ ದರ್ಶನ ಪಡೆದ ಭಕ್ತಗಣ:ಅಮಾವಾಸ್ಯೆ ಪೂಜೆಗೆ ಬಂದ ಭಕ್ತಾದಿಗಳು ಅಂತರಗಂಗೆಯಲ್ಲಿ ಮಿಂದೆದ್ದು ಹರಕೆ ಹೊತ್ತ ಭಕ್ತಾದಿಗಳಿಂದ ದೂಪದ ಸೇವೆ ಉರುಳು ಸೇವೆ ಪಂಜಿನ ಸೇವೆ ಹಾಗೂ ವಿಶೇಷ ಉತ್ಸವ ಪೂಜೆ ಸಲ್ಲಿಸುವ ಮೂಲಕ ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರುಶನ ಪಡೆದು ಉಘೇ ಮಾದಪ್ಪ ಉಫೇ ಮಾದಪ್ಪ ಎಂದು ಜೈಕಾರಗಳು ಮುಗಿಲು ಮುಟ್ಟಿತ್ತು.
ರಾಶಿ ರಾಶಿ ತರಕಾರಿ ಅನ್ನದಾಸೋಹ:ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ದಾಸೋಹ ಭವನದಲ್ಲಿ ವಿಶೇಷ ದಾಸೋಹ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಭಕ್ತರಿಗಾಗಿ ಸಿರಿ ಧಾನ್ಯಗಳಿಂದ ಬಿಸಿಬೇಳೆ ಬಾತ್ ಮತ್ತು ಬಾತ್ ಪೊಂಗಲ್ ದೇವಾಲಯಕ್ಕೆ ಬರುವ ಭಕ್ತಾದಿಗಳು ವ್ಯವಸ್ಥಿತವಾಗಿ ಉಪಹಾರವನ್ನು ಕಲ್ಪಿಸಲಾಗಿತ್ತು ರಾಶಿ ರಾಶಿ ತರಕಾರಿಗಳನ್ನು ತಂದು ದಾಸೋಹ ಭವನದಲ್ಲಿ ನೀಡುವ ಮೂಲಕ ಭಕ್ತರು ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸುವ ಮೂಲಕ ಅಮಾವಾಸ್ಯೆ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನ ದರ್ಶನ ಪಡೆದ ಭಕ್ತರು ಪುನೀತರಾದರು.
ರಾಜಗೋಪುರದ ಮುಂಭಾಗ ಮಾದೇಶ್ವರನ ಕಥೆ ಪ್ರಸಂಗ:ಮಲೆ ಮಾದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಪೂಜೆಗೆ ಬಂದ ಭಕ್ತಾದಿಗಳಿಗೆ ರಾಜಗೋಪುರದ ಮುಂಭಾಗ ಕಂಸಾಳೆ ಪದಗಳ ಮೂಲಕ ಮಾದೇಶ್ವರನ ಕಥಾ ಪ್ರಸಂಗವನ್ನು ಹೇಳುವ ಮೂಲಕ ಮಾದೇಶವನ್ನು ಇತಿಹಾಸ ಪ್ರಸಿದ್ಧಿಯನ್ನು ಭಕ್ತ ಗಣಕ್ಕೆ ತಿಳಿಸುವ ಮೂಲಕ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು
ಜಗಮಗಿಸುತ್ತಿರುವ ವಿದ್ಯುತ್ ದೀಪ ಅಲಂಕಾರ:ಮಲೆ ಮಾದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಪ್ರಯುಕ್ತ ರಾಜ ಗೋಪುರ ಮುಖ್ಯ ದ್ವಾರ ದಾಸೋಹ ಭವನಕ್ಕೆ ತೆರಳುವ ರಸ್ತೆ ಮತ್ತು ಗೋಪುರದ ರಸ್ತೆಯ ಮುಂಭಾಗ ಕೊಳ ಸೇರಿದಂತೆ ಇನ್ನಿತರ ಕ್ಷೇತ್ರ ವ್ಯಾಪ್ತಿಯ ಸ್ಥಳದಲ್ಲಿ ವಿದ್ಯುತ್ ದೀಪಾಲಂಕಾರ ಭಕ್ತರನ್ನು ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಲಾಗಿತ್ತು .
ಬಿಗಿ ಪೊಲೀಸ್ ಬಂದೋಬಸ್ತ್:ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆದ ಅಮಾವಾಸ್ಯೆ ಪೂಜೆ ವೇಳೆಯಲ್ಲಿ ಯಾವುದೇ ಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೋಲಿಸ್ ಇಲಾಖೆ ದೇವಾಲಯದ ಮುಂಭಾಗ ಬಸ್ ನಿಲ್ದಾಣ ಸಾಲೂರು ಮಠಕ್ಕೆ ತೆರಳುವ ರಸ್ತೆಯಲ್ಲಿ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಮೂಲಕ ಕಟ್ಟೆಚ್ಚರ ವಹಿಸಿದ್ದರು.