ಕಡಲೆ, ಅವರೆಕಾಯಿ ಮತ್ತು ಕಬ್ಬು ಪರಿಷೆ

KannadaprabhaNewsNetwork |  
Published : Jan 16, 2026, 01:15 AM IST
15ಕೆಆರ್ ಎಂಎನ್ 9.ಜೆಪಿಜಿರಾಮನಗರದ ದಕ್ಷಿಣಾಭಿಮುಖ ಪಂಚಮುಖಿ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ 4ನೇ ವರ್ಷದ ಕಡಲೆ, ಅವರೆಕಾಯಿ ಮತ್ತು ಕಬ್ಬು ಪರಿಷೆ ನಡೆಯಿತು. | Kannada Prabha

ಸಾರಾಂಶ

ರಾಮನಗರ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿರುವ ದಕ್ಷಿಣಾಭಿಮುಖ ಪಂಚಮುಖಿ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ 4ನೇ ವರ್ಷದ ಕಡಲೆ, ಅವರೆಕಾಯಿ ಮತ್ತು ಕಬ್ಬು ಪರಿಷೆ ಯಶಸ್ವಿಯಾಗಿ ನೆರವೇರಿತು.

ರಾಮನಗರ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿರುವ ದಕ್ಷಿಣಾಭಿಮುಖ ಪಂಚಮುಖಿ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ 4ನೇ ವರ್ಷದ ಕಡಲೆ, ಅವರೆಕಾಯಿ ಮತ್ತು ಕಬ್ಬು ಪರಿಷೆ ಯಶಸ್ವಿಯಾಗಿ ನೆರವೇರಿತು.

ಶ್ರೀ ಪಂಚಮುಖಿ ಆಂಜನೇಯ ಟ್ರಸ್ಟ್ ವತಿಯಿಂದಲೇ 2.5 ಟನ್ ಕಡಲೆಕಾಯಿ, 2.5 ಟನ್ ಅವರೆಕಾಯಿ ಮತ್ತು 2.5 ಟನ್ ಕಬ್ಬನ್ನು ಬಾಲಾಂಜನೇಯಸ್ವಾಮಿಯನ್ನು ದರ್ಶಿಸಿದ ಸುಮಾರು ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರಿಗೆ ಉಚಿತವಾಗಿ ವಿತರಿಸಲಾಯಿತು.

ಮಾಜಿ ಶಾಸಕರಾದ ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ) ಹಾಗೂ ಶ್ರೀ ಗಣೇಶ್ ಜ್ಯುವೆಲರ್ಸ್ ಮಾಲೀಕ ಲಕ್ಷ್ಮಣ್ ದೇವರ ದರ್ಶನ ಪಡೆದು ಭಕ್ತರಿಗೆ ಕಡಲೆಕಾಯಿ, ಅವರೆ ಕಾಯಿ ಮತ್ತು ಕಬ್ಬನ್ನು ವಿತರಿಸಿದರು.

ಈ ವೇಳೆ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ರೈತರ ದುಡಿಮೆಗೆ ಬೆಲೆ ಸಿಕ್ಕಿ ಒಳ್ಳೆಯದಾಗಬೇಕು. ಭಕ್ತರಿಗೆ ಕಡಲೆ, ಅವರೆಕಾಯಿ ಮತ್ತು ಕಬ್ಬನ್ನು ಉಚಿತವಾಗಿ ವಿತರಿಸುವ ಮೂಲಕ ಟ್ರಸ್ಟಿನ ಪದಾಧಿಕಾರಿಗಳು ಸಂಕ್ರಾಂತಿ ಹಬ್ಬಕ್ಕೆ ಮೆರಗು ತಂದಿದ್ದಾರೆ ಎಂದು ಹೇಳಿದರು.

ಟ್ರಸ್ಟಿನ ಕಾರ್ಯದರ್ಶಿ ಶಿವಪ್ರಕಾಶ್ (ಗೂಳಿಗೌಡ) ಮಾತನಾಡಿ, ದಾನಿಗಳು ಹಾಗೂ ಸ್ವಾಮಿಯ ಭಕ್ತರ ಸಹಕಾರದೊಂದಿಗೆ ಟ್ರಸ್ಟ್ ನವರು ಸೇರಿಕೊಂಡು 4ನೇ ವರ್ಷದ ಪರಿಷೆ ಮಾಡುತ್ತಿದ್ದೇವೆ. ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ಕಡಲೆ, ಅವರೆಕಾಯಿ ಮತ್ತು ಕಬ್ಬನ್ನು ಪ್ರಸಾದದ ರೂಪದಲ್ಲಿ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಪರಿಷೆ ವೇಳೆ ಸರಸ್ವತಿ ಕಲಾ ಮಂದಿರದ ಭಜನಾ ಮಂಡಳಿಯವರು ಭಜನೆ ನಡೆಸಿಕೊಟ್ಟರೆ, ಜಾನಪದ ಕಲಾವಿದ ಪಾರ್ಥ ನೇತೃತ್ವದ ಡೊಳ್ಳು ಕುಣಿತ ತಂಡ ಕಲೆ ಪ್ರದರ್ಶಿಸಿದರು. ಟ್ರಸ್ಟಿನ ಅಧ್ಯಕ್ಷ ನಾರಾಯಣ, ಟ್ರಸ್ಟಿ ಚಂದ್ರು, ವೆಂಕಟೇಶ್, ಸ್ಟಾಲಿನ್, ಕಂಟ್ರಾಕ್ಟರ್ ಚಂದ್ರಣ್ಣ, ಜನಾರ್ದನ್ , ಗಿರೀಶ್ ಮತ್ತಿತರರು ಹಾಜರಿದ್ದರು.

15ಕೆಆರ್ ಎಂಎನ್ 9.ಜೆಪಿಜಿ

ರಾಮನಗರದ ದಕ್ಷಿಣಾಭಿಮುಖ ಪಂಚಮುಖಿ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ 4ನೇ ವರ್ಷದ ಕಡಲೆ, ಅವರೆಕಾಯಿ ಮತ್ತು ಕಬ್ಬು ಪರಿಷೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಯೂಟದಲ್ಲಿ ಶುಚಿತ್ವಕ್ಕೆ ಆದ್ಯತೆ ಇರಲಿ: ಡಾ. ಈಶ್ವರ ಉಳ್ಳಾಗಡ್ಡಿ
ಶಿರಸಂಗಿ ಲಿಂಗರಾಜರ ಜೀವನ ಮಹಾಕಾವ್ಯಕ್ಕಿಂತಲೂ ಮಿಗಿಲು: ಡಾ. ವಿ.ಕೆ. ದ್ಯಾಮನಗೌಡ್ರ