ಸಹಕಾರ ರಂಗಕ್ಕೆ ದಿ.ಚಿದಾನಂದ ಕೋರೆ ಕೊಡುಗೆ ಅಪಾರ:ಮಲ್ಲಿಕಾರ್ಜುನ ಕೋರೆ

KannadaprabhaNewsNetwork |  
Published : Nov 07, 2024, 12:32 AM IST
ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ ದಿ. ಚಿದಾನಂದ ಬಸಪ್ರಭು ಕೋರೆ ಅವರಿಗೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು. ತಾತ್ಯಾಸಾಹೇಬ ಕಾಟೆ, ಭರತೇಶ ಬನವಣೆ, ಅಜೀತ ದೇಸಾಯಿ, ಮಹಾವೀರ ಕಾತ್ರಾಳೆ, ಭೀಮಗೌಡ ಪಾಟೀಲ ಇದ್ದರು. | Kannada Prabha

ಸಾರಾಂಶ

ರೈತರು ಬೆಳೆದ ಕಬ್ಬನ್ನು ಕಾರ್ಖಾನೆಗೆ ಕಳಿಸಲು ಪರದಾಡುವ ಪರಿಸ್ಥಿತಿ ಇರುವ 1969ರ ವೇಳೆಯಲ್ಲಿಯೇ ರೈತರು ಆರ್ಥಿಕವಾಗಿ ಸದೃಢರಾಗಲು ಸಕ್ಕರೆ ಕಾರ್ಖಾನೆ ಸ್ಥಾಪಿಸಿದ ಕೀರ್ತಿ ದಿ.ಚಿದಾನಂದ ಕೋರೆ ಅವರಿಗೆ ಸಲ್ಲುತ್ತದೆ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರೈತರು ಬೆಳೆದ ಕಬ್ಬನ್ನು ಕಾರ್ಖಾನೆಗೆ ಕಳಿಸಲು ಪರದಾಡುವ ಪರಿಸ್ಥಿತಿ ಇರುವ 1969ರ ವೇಳೆಯಲ್ಲಿಯೇ ರೈತರು ಆರ್ಥಿಕವಾಗಿ ಸದೃಢರಾಗಲು ಸಕ್ಕರೆ ಕಾರ್ಖಾನೆ ಸ್ಥಾಪಿಸಿದ ಕೀರ್ತಿ ದಿ.ಚಿದಾನಂದ ಕೋರೆ ಅವರಿಗೆ ಸಲ್ಲುತ್ತದೆ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.

ಬುಧವಾರ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷ ದಿ.ಚಿದಾನಂದ ಬಸಪ್ರಭು ಕೋರೆ ಅವರ 43ನೇ ಪುಣ್ಯ ಸ್ಮರಣೆ ನಿಮಿತ್ತ ಕಾರ್ಖಾನೆಯ ಕಚೇರಿ ಆವರಣದಲ್ಲಿರುವ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಕಾರ್ಖಾನೆಯ ರೂವಾರಿ, ಕೆ.ಎಲ್.ಇ. ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನ ಹಾಗೂ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆ ಮಹಾಮಂಡಳ ನಿರ್ದೇಶಕ ಅಮಿತ ಕೋರೆ ಅವರ ನೇತೃತ್ವದಲ್ಲಿ ಕಾರ್ಖಾನೆಯು ಹಂತ ಹಂತವಾಗಿ ವಿಸ್ತರಣೆಗೊಂಡು ಇಂದು 10,000 ಮೆ.ಟನ್ ಕಬ್ಬು ನುರಿಸುವುದರ ಜೊತೆಗೆ 28.7 ಮೆ.ವ್ಯಾಟ್ ಸಹ ವಿದ್ಯುತ್ ಘಟಕ, 200 ಕೆಎಲ್‌ಪಿಡಿ ಎಥನಾಲ್‌, ಡಿಸ್ಟಿಲರಿ ಉಪ ಉತ್ಪಾದನಾ ಘಟಕಗಳನ್ನು ಹೊಂದಿ ಹೆಮ್ಮರವಾಗಿ ಬೆಳೆದಿದೆ ಎಂದು ತಿಳಿಸಿದರು.

ಕಾರ್ಖಾನೆಯು ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದುಕೊಂಡಿದೆ. ರೈತ ಸದಸ್ಯರಿಗೆ, ಕಾರ್ಮಿಕರಿಗೆ, ಬಡವರಿಗೆ ಕಲ್ಪವೃಕ್ಷ ಕಾಮಧೇನುವಾಗಿದೆ. ಅವರ ಕನಸಿನಂತೆ ಈ ಕಾರ್ಖಾನೆಯಿಂದ ರೈತರು ಹಾಗೂ ಕಾರ್ಮಿಕರು ಸುಖ ಜೀವನದೊಂದಿಗೆ ಮಕ್ಕಳ ಉಜ್ವಲ ಭವಿಷ್ಯ ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ಕಾರ್ಖಾನೆಯ ಸದಸ್ಯರು ಹಾಗೂ ರೈತರು ತಮ್ಮ ಕಬ್ಬನ್ನು ತಮ್ಮ ಕಾರ್ಖಾನೆಗೆ ಪೂರೈಸಬೇಕು. ಎಲ್ಲ ಕಾರ್ಮಿಕ, ಸಿಬ್ಬಂದಿ ಜವಾಬ್ದಾರಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಕಡಿಮೆ ಅವಧಿಯಲ್ಲಿ ಹೆಚ್ಚು ಕಬ್ಬು ನುರಿಸುವ ಮೂಲಕ ಹಂಗಾಮು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.

ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಸಂಚಾಲಕರಾದ ಭರತೇಶ ಬನವಣೆ, ಅಜೀತ ದೇಸಾಯಿ, ಮಹಾವೀರ ಕಾತ್ರಾಳೆ, ಭೀಮಗೌಡ ಪಾಟೀಲ, ಅಣ್ಣಾಸಾಬ ಇಂಗಳೆ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಐ.ಎನ್. ಗೊಲಭಾವಿ ಅವರು ದಿವಂಗತರ ಪುತ್ಥಳಿಗೆ ಪೂಜೆ ಸಲ್ಲಿಸಿದರು.ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು, ಸಿಬ್ಬಂದಿ , ಸದಸ್ಯರು ಹಾಗೂ ರೈತರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌