ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಇಂದು ಅಕ್ಕಿಆಲೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : May 04, 2025, 01:32 AM IST
ಅಕ್ಕಿಆಲೂರಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆ ಶಾಸಕ ಶ್ರೀನಿವಾಸ ಮಾನೆ ಸಿದ್ಧತೆ ಪರಿಶೀಲಿಸಿದರು. | Kannada Prabha

ಸಾರಾಂಶ

ಅಕ್ಕಿಆಲೂರಿನ ಎಪಿಎಂಸಿ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. 10 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ.

ಹಾನಗಲ್ಲ: ₹650 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಹಲವು ಸಚಿವರು ಮೇ 4ರಂದು ತಾಲೂಕಿನ ಅಕ್ಕಿಆಲೂರಿಗೆ ಬೆಳಗ್ಗೆ 11 ಗಂಟೆಗೆ ಆಗಮಿಸುತ್ತಿರುವ ಹಿನ್ನೆಲೆ ಭರದ ಸಿದ್ಧತೆ ಕೈಗೊಳ್ಳಲಾಗಿದೆ.ಇಲ್ಲಿನ ಎಪಿಎಂಸಿ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. 10 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಆವರಣದ ಎದುರಿನ ಕೃಷಿಭೂಮಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಎನ್‌ಡಿಪಿಯು ಕಾಲೇಜಿನ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬೆಂಗಳೂರಿನ ಎಚ್‌ಎಎಲ್‌ನಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದ ಮೂಲಕ ಆಗಮಿಸಿ, ಬಳಿಕ ಹೆಲಿಕ್ಯಾಪ್ಟರ್ ಮೂಲಕ ನೇರವಾಗಿ ಅಕ್ಕಿಆಲೂರಿಗೆ ಆಗಮಿಸಲಿದ್ದಾರೆ. ಎಲ್ಲೆಡೆ ಫ್ಲೆಕ್ಸ್, ಬಂಟಿಂಗ್ಸ್: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರ ಆಗಮನದ ಹಿನ್ನೆಲೆಯಲ್ಲಿ ಹಾನಗಲ್ಲ ಮತ್ತು ಅಕ್ಕಿಆಲೂರಿನಾದ್ಯಂತ ಪ್ರಮುಖ ರಸ್ತೆ, ವೃತ್ತ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲಾಗಿದೆ. ಅಲ್ಲಲ್ಲಿ ಆಳೆತ್ತರದ ಕಟೌಟ್ ಹಾಕಲಾಗಿದೆ. ಎಲ್ಲೆಡೆ ಸಡಗರ, ಸಂಭ್ರಮ ಮನೆ ಮಾಡಿದೆ.ಎಸ್ಸೆಸ್ಸೆಲ್ಸಿ: ಶಿಗ್ಗಾಂವಿ ತಾಲೂಕಿಗೆ 5ನೇ ಸ್ಥಾನ

ಶಿಗ್ಗಾಂವಿ: ೨೦೨೪- ೨೫ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶವು ತಾಲೂಕು ಜಿಲ್ಲೆಗೆ ಐದನೇ ಸ್ಥಾನವನ್ನು ಪಡೆದಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು ೨೮೩೮ ವಿದ್ಯಾರ್ಥಿಗಳಲ್ಲಿ ೧೯೭೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ತಾಲೂಕಿನ ಫಲಿತಾಂಶ ಶೇ. ೭೦.೦೭ರಷ್ಟಾಗಿದೆ.ತಾಲೂಕಿಗೆ ಪ್ರಥಮ ಸ್ಥಾನವನ್ನು ಗಂಜೀಗಟ್ಟಿ ಎಂಡಿಆರ್‌ಎಸ್ನ ಭೂಮಿಕಾ ಶಂಕ್ರಗೌಡ ನರಸಗೊಂಡ್ರ ೬೧೯ ಅಂಕ(ಶೇ. ೯೯.೦೪) ಹಾಗೂ ಶಿಗ್ಗಾಂವಿಯ ಜೆಎಂಜೆ ಪ್ರೌಢಶಾಲೆಯ ಖಿಜರಾ ರಟ್ಟಿಹಳ್ಳಿ ೬೧೯(ಶೇ. ೯೯.೦೪) ಪಡೆದಿದ್ದಾರೆ.

ದ್ವಿತೀಯ ಸ್ಥಾನವನ್ನು ಹಿರೇಮಣಕಟ್ಟಿ ಸರ್ಕಾರಿ ಪ್ರೌಢಶಾಲೆಯ ನವೀನ ಗಂಗಪ್ಪ ಅಳಗವಾಡಿ ೬೧೩(ಶೇ. ೯೮.೦೮) ಪಡೆದಿದ್ದಾರೆ. ಗಂಜಿಗಟ್ಟಿಯ ಎಂಡಿಆರ್‌ಎಸ್‌ನ ಭಾಗ್ಯಾ ಗದಿಗೆಪ್ಪ ಸೋಮಣ್ಣವರ ೬೧೩(ಶೇ. ೯೮.೦೮) ಪಡೆದಿದ್ದಾರೆ.ತೃತಿಯ ಸ್ಥಾನವನ್ನು ಶಿಗ್ಗಾಂವಿಯ ಚೆನ್ನಪ್ಪ ಕುನ್ನೂರ ಪ್ರೌಢಶಾಲೆಯ ಸಿಂಧು ಮಂಜಪ್ಪ ಮಹರಾಜಪೇಟ ೬೧೨(ಶೇ ೯೭.೯೨) ಹಾಗೂ ಬನ್ನೂರ ಸರ್ಕಾರಿ ಪ್ರೌಢಶಾಲೆಯ ಗಾಯತ್ರಿ ಪೊಲೀಸಗೌಡ್ರ ೬೧೨(ಶೇ. ೯೭.೯೨) ಹೊಸೂರ ಸರ್ಕಾರಿ ಪ್ರೌಢಶಾಲೆಯ ನಾಗರತ್ನಾ ಇಂದೂರ ೬೧೨(ಶೇ. ೯೭.೯೨) ಅಂಕ ಪಡೆದಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...