ಪ್ರಮುಖ ಅಂಶಗಳು
- ವರುಣದಲ್ಲಿ ಜಿಟಿಟಿಸಿ, ನಾಲೆಗಳ ಅಭಿವೃದ್ಧಿ
-ಕೆಸ್ತೂರು ಕೊಪ್ಪಲು, ದೇವನೂರು ಏತ ನೀರಾರಿ, ಮರದೂರು ಕೆರೆ ತುಂಬಿಸುವ ಯೋಜನೆ- ಮಹಾರಾಣಿ ಕಾಲೇಜು ಕಟ್ಟಡ, ಹಾಸ್ಟೆಲ್ ನಿರ್ಮಾಣಕ್ಕೆ ನೆರವು
- ಕೆ.ಆರ್. ಆಸ್ಪತ್ರೆ ಆವರಣದಲ್ಲಿ 75 ಕೋಟಿ ರು. ವೆಚ್ಚದ ಒಪಿಡಿ ನಿರ್ಮಾಣ
ಅಂಶಿ ಪ್ರಸನ್ನಕುಮಾರ್
ದಾಖಲೆಯ 15ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನ ಮೇಲೆ ಮಮಕಾರ ತೋರಿಸಿದ್ದು, ಹಲವಾರು ಕೊಡುಗೆಗಳನ್ನು ಪ್ರಕಟಿಸಿದ್ದಾರೆ.
ಹುಣಸೂರು ತಾ. ಮರದೂರು ಕೆರೆ ತುಂಬಿಸುವ ಯೋಜನೆ, ವರುಣ ವಿಧಾನಸಭಾ ಕ್ಷೇತ್ರದ ನಾಲೆಗಳ ಅಭಿವೃದ್ಧಿ ಕೆ.ಆರ್. ನಗರ ತಾಲೂಕು ಕೆಸ್ತೂರು ಕೊಪ್ಪಲು, ನಂಜನಗೂಡು ತಾಲೂಕು ದೇವನೂರು ಏತ ನೀರಾವರಿ ಯೋಜನೆ, ಟಿ. ನರಸೀಪುರ ತಾ. ಮಾಧವಮಂತ್ರಿ ನಾಲಾ ಆಧುನೀಕರಣ ಘೋಷಿಸಿದ್ದಾರೆ.
ಮೈಸೂರಿನಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ನಿರ್ಮಾಣ, ಮೈಸೂರಿನ 40 ಹಾಸಿಗೆ ಸಾಮರ್ಥ್ಯದ ನೆಪ್ರೋ ಯುರಾಜಲಿ ಆಸ್ಪತ್ರೆ 100 ಹಾಸಿಗೆಗಳ ಸಾಮರ್ಥ್ಯಕ್ಕೆ ಉನ್ನತೀಕರಣ, ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವ ಅಂಗವಾಗಿ ಕೆ.ಆರ್. ಆಸ್ಪತ್ರೆ ಆವರಣದಲ್ಲಿ 75 ಕೋಟಿ ರು. ವೆಚ್ಚದಲ್ಲಿ ಹೊರ ರೋಗಿಗಳ ಕಟ್ಟಡ ನಿರ್ಮಿಸಲಾಗುವುದು.
-ಮೈಸೂರು ವಿಭಾಗದಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್, - ಬದನವಾಳಿಲ್ಲಿ ಖಾದಿ ಚಟುವಟಿಕೆಗೆ ಪ್ಕೋತ್ಸಾಹ
ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ತಾರಾಲಯ ಸ್ಥಾಪಿಸಲಾಗುವುದು, ಹುಣಸೂರಿನಲ್ಲಿ ಸ್ವಯಂಚಾಲಿತಾ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.ಮೈಸೂರಿನಲ್ಲಿ ಹ್ಯುಮನ್ ಮಿಲ್ಕ್ ಬ್ಯಾಂಕ್ ಘಟಕ ಸ್ಥಾಪಿಸಲಾಗುವುದು. ಪರಿಸರ ಪ್ರವಾಸೋದ್ಯಮವನ್ನು ಬಂಡೀಪುರ ಮತ್ತು ಕಬಿನಿಯಲ್ಲಿ 25 ಕೋಟಿ ರು. ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್‌ಗಳನ್ನು ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಯ ಮೂಲಕ ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ.