ಮುಖ್ಯಮಂತ್ರಿಗಳೇ ನೀವು ಸರ್ವಾಧಿಕಾರಿ ಅಲ್ಲ: ಸಿ.ಟಿ.ರವಿ

KannadaprabhaNewsNetwork |  
Published : Jun 25, 2026, 01:15 AM IST
ಸಿ.ಟಿ.ರವಿ | Kannada Prabha

ಸಾರಾಂಶ

ಚಿಕ್ಕಮಗಳೂರುಬಿಡದಿ ಟೌನ್‌ ಶಿಪ್‌ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರದು ಸರ್ವಾಧಿಕಾರಿ ಧೋರಣೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಸಿ.ಟಿ.ರವಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಿಡದಿ ಟೌನ್‌ ಶಿಪ್‌ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರದು ಸರ್ವಾಧಿಕಾರಿ ಧೋರಣೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಸಿ.ಟಿ.ರವಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಬಿಡದಿ ಟೌನ್‌ ಶಿಪ್‌ ವಿಚಾರದಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ಯಾಕೆ ಹೀಗೆ ವರ್ತಿಸು ತ್ತಿದ್ದಾರೆ. ಮಾಡಿಯೇ ಸಿದ್ಧ ಅನ್ನೋದು ಸರ್ವಾಧಿಕಾರಿ ಮನಸ್ಥಿತಿ ತೋರಿಸುತ್ತದೆ. ಡಿ.ಕೆ. ಶಿವಕುಮಾರ್‌ ನೀವು ಸರ್ವಾಧಿ ಕಾರಿಯಲ್ಲ. ನೀವೊಬ್ಬ ಮುಖ್ಯಮಂತ್ರಿ, ಸರ್ವಾಧಿಕಾರಿತೆ ವರ್ತನೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದಿದ್ದಾರೆ.

ರೈತರನ್ನು ಎದುರು ಹಾಕಿಕೊಂಡರೆ ಯಾವ ಸರ್ಕಾರ ಉಳಿಯುತ್ತದೆ? ಇದುವರೆಗೆ ರೈತರ ವಿರೋಧಿಸಿ, ಅವರನ್ನು ಎದುರು ಹಾಕಿ ಕೊಂಡಂತಹ ಯಾವ ಸರ್ಕಾರವೂ ಹೆಚ್ಚು ಕಾಲ ಉಳಿದಿಲ್ಲ. ಅಂತಹ ಸರ್ಕಾರದ ಆಯುಸ್ಸು ಕಡಿಮೆ ಎಂದಿದ್ದಾರೆ.

ರೈತ ಹೋರಾಟಕ್ಕೆ ರಾಜಕೀಯ ಬೆಂಬಲ ನೀಡುತ್ತಿದ್ದೇವೆ. ಇದು ರಾಜಕೀಯ ಹೋರಾಟವಾಗಿ ಪರಿವರ್ತನೆಯಾದರೆ ಆಗ ಮೂಲ ಹೋರಾಟಗಾರರು ಮತ್ತು ಮೂಲ ಸಮಸ್ಯೆ ಬದಿಗೆ ಸರಿಯುವಂತಾಗಬಹುದು. ಆ ರೀತಿ ಆಗಬಾರದೆಂದು ರೈತರ ಹೋರಾಟಕ್ಕೆ ರಾಜಕೀಯ ಬೆಂಬಲ ನೀಡುತ್ತಿದ್ದೇವೆ ಎಂದರು.

ನಾವು ಯಾರೂ ಅಭಿವೃದ್ಧಿ ವಿರೋಧಿಗಳಲ್ಲ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಒಪ್ಪಿಗೆ ನೀಡಿದರೆ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ತರಲಿ. ಅವರ ಒಪ್ಪಿಗೆ ಇಲ್ಲದೆ, ವಿರೋಧದ ನಡುವೆ ಅಧಿಕಾರ ದುರ್ಬಳಕೆ ಮಾಡಿ ಟೌನ್‌ಶಿಪ್ ಮಾಡಲು ಹೊರಟರೆ ಅದು ಪ್ರಜಾಪ್ರಭುತ್ವ ಹಾಗೂ ರೈತ ವಿರೋಧಿ ನಡೆ ಎಂದು ಹೇಳಿದರು.ಬಿಜೆಪಿ, ಜೆಡಿಎಸ್‌ಗಳ ಜತೆಗೆ, ಹಲವಾರು ಪಕ್ಷ ಮತ್ತು ವಿವಿಧ ಸಂಘಟನೆಗಳು ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿವೆ. ಕಾಂಗ್ರೆಸ್ ಪಕ್ಷದಲ್ಲೇ ಬಹಳ ಜನ ನಮಗಿದು ಯಾಕೆ ಬೇಕಿತ್ತು ಎನ್ನುತ್ತಿದ್ದಾರೆ. ನಮ್ಮ ಭಾಗದ ರೈತರು ಶಾಂತಿಯುತ ಸತ್ಯಾಗ್ರಹ ಮಾಡುತ್ತಿದ್ದಾರೆಯೇ ಹೊರತು, ನಕ್ಸಲ್ ಮಾದರಿಯಲ್ಲಿ ಬಾಂಬ್, ಎಕೆ 47 ಇಟ್ಟುಕೊಂಡು ಹೋರಾಟ ಮಾಡುತ್ತಿಲ್ಲ ಎಂದು ಹೇಳಿದರು.(ಸಿ.ಟಿ.ರವಿ ಫೋಟೋ ಬಳಸುವುದು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಬಿ.ಸುರೇಶ ಗೌಡ ವಿರುದ್ಧ ಮಾನ ಹಾನಿಕರ ಪೋಸ್ಟ್‌
ಪ್ರೌಢಶಾಲೆಗೆ ಪಿಯು ಉಪನ್ಯಾಸಕರ ನಿಯೋಜನೆಗೆ ತೀವ್ರ ವಿರೋಧ