ಕನ್ನಡಪ್ರಭ ವಾರ್ತೆ ಬೀಳಗಿ
ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ರು ರೈತರ ಟ್ರ್ಯಾಕ್ಟರ್ ವಶ ಪಡಿಸಿಕೊಂಡು ಅನ್ನದಾತನ ಮೇಲೆ ಲಾಠಿ ಪ್ರಹಾರ ಮಾಡಿರುವುದು ಖಂಡನೀಯ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದ ರೈತರು ತಾತ ಮುತ್ತಜರ ಕಾಲದಿಂದ ಉಳಿಮೆ ಮಾಡಿಕೊಂಡು ಬಂದಿರುವ ಸರ್ವೇ ನಂ.13/1,13/3 ಮತ್ತು 20 ಜಮೀನನ್ನು ವಕ್ಫ್ ತನ್ನದೆಂದು ಪಹಣಿ ಪತ್ರಿಕೆ ನಮೂದು ಮಾಡಿಕೊಂಡಿದೆ. ರೈತರು ಜಮೀನಿನಲ್ಲಿ ಕೃಷಿ ಮಾಡಲು ಹೋದಾಗ ಅನ್ಯ ಕೋಮಿನವರು ಜಾಮಿಯಾ ಮಸೀದಿ ಆಸ್ತಿ ಎಂದು ಬಿತ್ತನೆಗೆ ತಕರಾರು ಮಾಡಿದರಿಂದ ರೈತರು ನಾವು ನಮ್ಮ ತಿಳುವಳಿಕೆ ಪ್ರಕಾರ 60-70 ವರ್ಷಗಳಿಂದ ನಾವೇ ಉಳುಮೆ ಮಾಡುತ್ತಿದ್ದು ನಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು ನಮ್ಮ ಭೂಮಿ ನಮ್ಮ ಹಕ್ಕು ವಕ್ಫ್‌ದವರು ಅಕ್ರಮವಾಗಿ ಪಹಣಿ ಪತ್ರಿಕೆಯಲ್ಲಿ ನಮೂದು ಮಾಡಿದ್ದಾರೆಂದು ವಾದಿಸಿದಕ್ಕೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ರು ರೈತರ ಟ್ರ್ಯಾಕ್ಟರ್ ವಶ ಪಡಿಸಿಕೊಂಡು ಅನ್ನದಾತನ ಮೇಲೆ ಲಾಠಿ ಪ್ರಹಾರ ಮಾಡಿರುವುದಕ್ಕೆ ಹಿರೇಮಠ ಕಿಡಿಕಾರಿದ್ದಾರೆ.
ಪಟ್ಟಣದ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯನವರು ರೈತರ ಪಹಣಿ ಪತ್ರಿಕೆಯಲ್ಲಿರುವ ಹೆಸರನ್ನು ತೆಗೆದು ಹಾಕಲು ಕಂದಾಯ ಇಲಾಖೆಗೆ ಸೂಚನೆ ನೀಡಿದ್ದು ರೈತರಿಗೆ ಅನ್ಯಾಯವಾಗಲು ಬೀಡುವುದಿಲ್ಲ ಎಂದು ಹೇಳಿದ್ದರು. ಅವರು ಹೇಳಿದ ಕೆಲವೇ ದಿನಗಳಲ್ಲಿ ರೈತರ ಮೇಲೆ ಪೊಲೀಸ್ ಲಾಠಿ ಪ್ರಹಾರ ಮಾಡಿದನ್ನು ನೋಡಿದರೆ ರಾಜ್ಯದ ರೈತರು ಆತಂಕ ಪಡುವಂತ ಸ್ಥೀತಿ ನಿರ್ಮಾಣವಾಗಿದೆ ಎಂದರು.ಸಚಿವ ಜಮೀರ್ ಅಹಮ್ಮದ ರಾಜ್ಯಾದಂತ ವಕ್ಫ್ ಅದಾಲತ್ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳುನ್ನು ದುರುಪಯೋಗ ಪಡಿಸಿಕೊಂಡು ರೈತರ ಪಹಣಿ ಪತ್ರಿಕೆಗಳಲ್ಲಿ ಮಠಮಾನ್ಯ ಮಂದಿರಗಳ ಉತಾರೆಗಳಲ್ಲಿ ವಕ್ಫ್ ನಮೂದಿಸಲು ಸೂಚಿಸಿದರಿಂದ ರೈತರನ್ನು ಬೀದಿಗೆ ತಳುವಂತಾಗಿದೆ ಎಂದರು.
ವಕ್ಫ್ ಮಂಡಳಿ ರಾಷ್ಟ್ರದ ಡಾ.ಬಿ.ಆರ್ ಅಂಬೇಡ್ಕರವರ ಸಂವಿಧಾನದಡಿಯಲ್ಲಿ ಬರದೇ ಪ್ರತ್ಯೇಕ ಸಂಸ್ಥೆಯಾಗಿದ್ದು ರೈತರು ಪಹಣಿ ಪತ್ರಿಕೆಗಳಲ್ಲಿ ವಕ್ಫ್ ನಮೂದಾಗಿಲ್ಲವೆಂದು ಸುಮ್ಮನೆ ಇದ್ದಿದ್ದು, ಸಬ್ ರಿಜಿಸ್ಟಾರ ಕಚೇರಿಯಲ್ಲಿ ವಕ್ಫ್ ಮಂಡಳಿಯವರು ತಡೆಯಾಜ್ಞೆ ಇಟ್ಟಿದ್ದು ರೈತರು ಪರಿಶೀಲನೆ ಮಾಡಬೇಕೆಂದರು.ರಾಜ್ಯದ ರೈತರು ಜಾಗೃತರಾಗಬೇಕು. ಇಲ್ಲದಿದ್ದರೆ ತಿಮ್ಮಸಂದ್ರದ ರೈತರಿಗೆ ಆದ ಘಟನೆ ರಾಜ್ಯದ ಎಲ್ಲ ಕಡೆ ಜರುಗುವಂತ ದಿನಗಳು ದೂರವಿಲ್ಲ. ರೈತರಿಗೆ ಅನ್ಯಾಯವಾಗುವುದನ್ನು ಭಾರತೀಯ ಕಿಸಾನ್ ಸಂಘ ಸಹಿಸುವದಿಲ್ಲ. ಜಮೀರ್ ಅಹಮ್ಮದ ಸಂಪುಟದಿಂದ ವಜಾಗೊಳಿಸಿ ರಾಜ್ಯದ ರೈತರಿಗೆ ನ್ಯಾಯ ಒದಗಿಸಬೇಕು. ವಕ್ಫ್ ಕಾನೂನು ರದ್ದುಗೊಳಿಸಲು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಒತ್ತಾಯಿಸಬೇಕು ಎಂದು ಆಗ್ರಹ ಪಡಿಸಿದರು.
ಈ ಸಂದರ್ಭದಲ್ಲಿ ಕಬ್ನು ಬೆಳೆಗಾರರ ಜಲ್ಲಾ ಪ್ರಮುಖ ಸುಬ್ಬರಾಯಗೌಡ ಪಾಟೀಲ, ತಾಲೂಕು ಮುಖಂಡ ಸಂಗಪ್ಪ ಅಗಸರ ಇದ್ದರು.