ದಕ್ಷಿಣ ಆಫ್ರಿಕಾದ ಜಲಕ್ಷಾಮಕ್ಕೆ ಚಿಕ್ಕಮಗಳೂರಿನ ರೈನಿ ತಂತ್ರಜ್ಞಾನದ ಆಸರೆ!

KannadaprabhaNewsNetwork |  
Published : Nov 16, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಸೂಪರ್ ಎಲ್‌ನಿನೊ ಪರಿಣಾಮದಿಂದ ಮಳೆ ಕೊರತೆ ಹಾಗೂ ತೀವ್ರ ಜಲಕ್ಷಾಮ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದ ಜನರ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅಲ್ಲಿನ ಉದ್ಯಮಿ ದಂಪತಿ ಚಿಕ್ಕಮಗಳೂರಿನ ರೈನಿ ರಿಸರ್ಚ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಘಟಕಕ್ಕೆ ಭೇಟಿ ನೀಡಿ, ಮಳೆ ನೀರು ಕೊಯ್ಲು ಮತ್ತು ಶುದ್ಧೀಕರಣ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸೂಪರ್ ಎಲ್‌ನಿನೊ ಪರಿಣಾಮದಿಂದ ಮಳೆ ಕೊರತೆ ಹಾಗೂ ತೀವ್ರ ಜಲಕ್ಷಾಮ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದ ಜನರ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅಲ್ಲಿನ ಉದ್ಯಮಿ ದಂಪತಿ ಚಿಕ್ಕಮಗಳೂರಿನ ರೈನಿ ರಿಸರ್ಚ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಘಟಕಕ್ಕೆ ಭೇಟಿ ನೀಡಿ, ಮಳೆ ನೀರು ಕೊಯ್ಲು ಮತ್ತು ಶುದ್ಧೀಕರಣ ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಿದ್ದಾರೆ.ದಕ್ಷಿಣ ಆಫ್ರಿಕಾದ ಉದ್ಯಮಿಗಳಾದ ರುಡಾಲ್ಫ್ ಆಂಡ್ರಿಯಾಸ್ ಕೋಗರ್ ಹಾಗೂ ಶನೆಲ್ ಕೋಗರ್ ಅವರು ತಮ್ಮ ದೇಶದಲ್ಲಿ ತೀವ್ರಗೊಳ್ಳುತ್ತಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ತಂತ್ರಜ್ಞಾನದತ್ತ ಮುಖ ಮಾಡಿದ್ದಾರೆ. ಚಿಕ್ಕಮಗಳೂರಿನ ಸಮೀಪದ ರೈನಿ ಸಂಸ್ಥೆಯ ಮಳೆ ನೀರು ಶುದ್ಧೀಕರಣ ತಂತ್ರಜ್ಞಾನದ ಕುರಿತು ಮಾಹಿತಿ ಪಡೆದು ಅದರ ಕಾರ್ಯವೈಖರಿಯನ್ನು ನೇರವಾಗಿ ಪರಿಶೀಲಿಸಲು ಸತತ 20ರಿಂದ 22 ಗಂಟೆಗಳ ಪ್ರಯಾಣ ಮಾಡಿ ಆಗಮಿಸಿರುವುದು ವಿಶೇಷ.ಈ ಸಂದರ್ಭದಲ್ಲಿ ಮಾತನಾಡಿದ ಶನೆಲ್ ಕೋಗರ್, ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವುದರಿಂದ ವೈಯಕ್ತಿಕ ವಾಗಿ ನೀರಿನ ಸ್ವಾವಲಂಬನೆ ಸಾಧಿಸುವುದಷ್ಟೇ ಅಲ್ಲದೆ, ದೇಶದ ಆರ್ಥಿಕ ಬೆಳವಣಿಗೆಗೂ ನೆರವಾಗಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲಿನ ನೀರಿನ ಸಮಸ್ಯೆಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ. ಹೀಗಾಗಿ, ಭಾರತದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ರೈನಿ ಸಂಸ್ಥೆ ತಂತ್ರಜ್ಞಾನ ಯಾವುದೇ ಬದಲಾವಣೆ ಮಾಡದೆ ದಕ್ಷಿಣ ಆಫ್ರಿಕಾದಲ್ಲಿಯೂ ಅಳವಡಿಸಬಹುದು ಎಂಬ ವಿಶ್ವಾಸವಿದೆ. ಇದರಿಂದ ಕೈಗಾರಿಕೆಗಳ ಬೆಳವಣಿಗೆ, ಕೃಷಿ ಚಟುವಟಿಕೆ ಹಾಗೂ ಜನರ ದೈನಂದಿನ ನೀರಿನ ಅಗತ್ಯ ಪೂರೈಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಯಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆ ನೀರು ಕೊಯ್ಲು ಅನಿವಾರ್ಯವಾಗಲಿದೆ. ಮಳೆ ನೀರನ್ನು ಸಂಗ್ರಹಿಸಿ ಶುದ್ಧೀಕರಿಸುವ ಹಲವು ತಂತ್ರಜ್ಞಾನಗಳಿದ್ದರೂ, ರೈನಿ ಸಂಸ್ಥೆ ವಾಟರ್ ಫಿಲ್ಟರ್‌ ಉತ್ತಮ ಗುಣಮಟ್ಟದ ಶುದ್ಧ ನೀರನ್ನು ಒದಗಿಸುವ ಸಾಮರ್ಥ್ಯ ಹೊಂದಿರುವುದು ತಮ್ಮ ಗಮನ ಸೆಳೆದಿದೆ. ಈ ಕಾರಣದಿಂದ ಸಂಸ್ಥೆ ತಂತ್ರಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಮೂಡಿದೆ ಎಂದು ತಿಳಿಸಿದರು.ಸಂಸ್ಥೆ ಉತ್ಪಾದನಾ ಘಟಕವನ್ನು ಸಂಪೂರ್ಣವಾಗಿ ವೀಕ್ಷಿಸಿದ ಉದ್ಯಮಿ ದಂಪತಿ, ಅಲ್ಲಿನ ತಂತ್ರಜ್ಞಾನದ ಗುಣಮಟ್ಟ, ಉತ್ಪಾದನಾ ವ್ಯವಸ್ಥೆ ಹಾಗೂ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ತಂತ್ರಜ್ಞಾನವನ್ನು ದಕ್ಷಿಣ ಆಫ್ರಿಕಾದಲ್ಲಿ ಅಳವಡಿಸುವುದರಿಂದ ಅಲ್ಲಿನ ನಿವಾಸಿಗಳು ಹಾಗೂ ಸಮುದಾಯಗಳ ಜೀವನಮಟ್ಟ ಸುಧಾರಿಸುವ ಜತೆಗೆ, ನೀರಿನ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಹೂಡಿಕೆ ಹಾಗೂ ತಂತ್ರಜ್ಞಾನ ಅಳವಡಿಕೆಯ ಸಾಧ್ಯತೆಗಳ ಕುರಿತು ಮುಂದಿನ ದಿನಗಳಲ್ಲಿ ಸಮಗ್ರ ಚರ್ಚೆ ನಡೆಸಲಾಗುವುದು ಎಂದರು.ದಕ್ಷಿಣ ಆಫ್ರಿಕಾದ ಪ್ರತಿನಿಧಿ ರುಡಾಲ್ಫ್ ಕೋಗರ್ ಮಾತನಾಡಿ ರೈನಿ ಸಂಸ್ಥೆ ಭೇಟಿ ಅತ್ಯಂತ ಉತ್ತಮ ಅನುಭವ ನೀಡಿದೆ. ಇಲ್ಲಿನ ತಂತ್ರಜ್ಞಾನ ಅತ್ಯಾಧುನಿಕ. ಅದರ ಗುಣಮಟ್ಟ ಮತ್ತು ಕಾರ್ಯನಿರ್ವಹಣಾ ವಿಧಾನ ಮೆಚ್ಚುಗೆಗೆ ಪಾತ್ರವಾಗಿದೆ. ಸಂಸ್ಥೆ ತಂಡಕ್ಕೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ. ಈ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಆಸಕ್ತಿ ಹೊಂದಿದ್ದು, ತಾಯ್ನಾಡಿಗೆ ಮರಳಿದ ಕೂಡಲೇ ಮುಂದಿನ ಹಂತದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರೈನಿ ರಿಸರ್ಚ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮೈಕೆಲ್ ಬ್ಯಾಪ್ಟಿಸ್ಟ್ ಹಾಗೂ ನಿರ್ದೇಶಕರಾದ ಮನೋಜ್ ಬ್ಯಾಪ್ಟಿಸ್ಟ್ , ವರುಣ್ ಬ್ಯಾಪ್ಟಿಸ್ಟ್ ದಕ್ಷಿಣ ಆಫ್ರಿಕಾದ ಉದ್ಯಮಿ ದಂಪತಿಗೆ ಸಂಸ್ಥೆಯ ತಂತ್ರ ಜ್ಞಾನ, ಉತ್ಪಾದನಾ ಪ್ರಕ್ರಿಯೆ ಹಾಗೂ ಮಳೆ ನೀರು ಶುದ್ಧೀಕರಣ ವ್ಯವಸ್ಥೆಯ ಕುರಿತು ವಿವರವಾದ ಮಾಹಿತಿ ನೀಡಿದರು.....ಕೋಟ್ –.....“ವಿಶ್ವದಾದ್ಯಂತ ತೀವ್ರ ಬರ ಪರಿಸ್ಥಿತಿ ಎದುರಾಗುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ತಂತ್ರ ಜ್ಞಾನವನ್ನು ದಕ್ಷಿಣ ಆಫ್ರಿಕಾಕ್ಕೆ ಕೊಂಡೊಯ್ಯುತ್ತಿರುವುದು ಹೆಮ್ಮೆಯ ಸಂಗತಿ. ಈ ಹಿಂದೆ ಚಿಕ್ಕಮಗಳೂರಿಗೆ ಪ್ರವಾಸಿಗರು ಮಾತ್ರ ಬರುತ್ತಿದ್ದರು. ಆದರೆ, ಇದೀಗ ಇಲ್ಲಿನ ತಂತ್ರಜ್ಞಾನ ಪರಿಚಯಿಸಿಕೊಳ್ಳಲು ವಿದೇಶಿ ಉದ್ಯಮಿಗಳು ಆಗಮಿಸುತ್ತಿರುವುದು ಸಂತಸದ ವಿಚಾರ. ಚಿಕ್ಕಮಗಳೂರಿನ ತಂತ್ರಜ್ಞಾನಕ್ಕೆ ಜಾಗತಿಕ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ.”— ಮೈಕೆಲ್ ಬ್ಯಾಪ್ಟಿಸ್ಟ್, ವ್ಯವಸ್ಥಾಪಕ ನಿರ್ದೇಶಕ, ರೈನಿ ರಿಸರ್ಚ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆ.-- ಕೋಟ್ –...“ರೈನಿ ಫಿಲ್ಟರ್‌ನ ವಿಶಿಷ್ಟ ತಂತ್ರಜ್ಞಾನ ದಕ್ಷಿಣ ಆಫ್ರಿಕಾದ ಉದ್ಯಮಿ ದಂಪತಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ರೈನಿ ಫಿಲ್ಟರ್‌ಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಅಧಿಕೃತವಾಗಿ ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳ ಲಾಗಿದೆ. ಇದೇ ವರ್ಷ ಕೆನಡಾ ಮತ್ತು ಆಸ್ಟ್ರೇಲಿಯಾದ ಕಂಪನಿಗಳೊಂದಿಗೂ ಒಪ್ಪಂದ ಮಾಡಿಕೊಂಡು ಫಿಲ್ಟರ್‌ಗಳನ್ನು ರಫ್ತು ಮಾಡಲಾಗುತ್ತಿದೆ. ಈ ಮೂಲಕ ಚಿಕ್ಕಮಗಳೂರಿನಲ್ಲಿ ತಯಾರಾಗುವ ರೈನಿ ಫಿಲ್ಟರ್‌ಗಳು ವಿಶ್ವದ 23 ದೇಶಗಳಿಗೆ ರಫ್ತಾ ಗುತ್ತಿದ್ದು, ಸ್ಥಳೀಯ ಉದ್ಯಮವೊಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ.”— ಮನೋಜ್ ಬ್ಯಾಪ್ಟಿಸ್ಟ್, ನಿರ್ದೇಶಕರು, ರೈನಿ ರಿಸರ್ಚ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ