ಬಿಂಡಹಳ್ಳಿ ಸೊಸೈಟಿ ಅಧ್ಯಕ್ಷರಾಗಿ ಚಿಕ್ಕತಮ್ಮಯ್ಯ ಆಯ್ಕೆ

KannadaprabhaNewsNetwork |  
Published : Mar 13, 2026, 01:45 AM IST
12ಕೆಎಂಎನ್ ಡಿ23 | Kannada Prabha

ಸಾರಾಂಶ

ಹಿಂದಿನ ಅಧ್ಯಕ್ಷ ಬಿ.ಡಿ.ದೊಡ್ಡೆಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದು ಚಿಕ್ಕತಮ್ಮಯ್ಯ ಹೊರತು ಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಪಾಂಡವಪುರ:

ತಾಲೂಕಿನ ಬಿಂಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಚಿಕ್ಕತಮ್ಮಯ್ಯ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಬಿ.ಡಿ.ದೊಡ್ಡೆಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದು ಚಿಕ್ಕತಮ್ಮಯ್ಯ ಹೊರತು ಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಸಂಘದ ಕಾರ್ಯದರ್ಶಿ ರವಿಕುಮಾರ್ ಘೋಷಿಸಿದರು.

ನೂತನ ಅಧ್ಯಕ್ಷ ಚಿಕ್ಕತಮ್ಮಯ್ಯ ನಿರ್ದೇಶಕರು, ಮುಖಂಡರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಂಘಕ್ಕೆ ಎಲ್ಲಾ ನಿರ್ದೇಶಕರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಹಾಗೂ ಎಲ್ಲಾ ನಿರ್ದೇಶಕರು, ಪಕ್ಷದ ಮುಖಂಡರಿಗೆ ಧನ್ಯವಾದ ಆರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆಗೂಡಿ ಸಂಘದ ಅಭಿವೃದ್ದಿಗೆ ಪೂರಕವಾಗಿ ಶ್ರಮಿಸುತ್ತೇನೆ ಎಂದರು.

ಈ ವೇಳೆ ಉಪಾಧ್ಯಕ್ಷೆ ಪಂಕಜಮ್ಮ, ನಿರ್ದೇಶಕರಾದ ಜಗದೀಶ್, ರಾಮೇಗೌಡ, ದೇವೇಗೌಡ, ಚಲುವೇಗೌಡ, ಜಯರಾಮು, ವಾಸು, ರತ್ನಮ್ಮ, ಶಿವಲಿಂಗಯ್ಯ, ಚುನಾವಣಾಧಿಕಾರಿ ರವಿಕುಮಾರ್, ತಾಪಂ ಮಾಜಿ ಅಧ್ಯಕ್ಷ ಬಿ.ಡಿ.ಹುಚ್ಚೆಗೌಡ, ಮಾಜಿ ಸದಸ್ಯ ಬಿ.ಪಿ.ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷ ಡಿಂಕಶೆಟ್ಟಹಳ್ಳಿ ಗಂಗಧರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಹಾಲಿ ನಿರ್ದೇಶಕರಾದ ಮಲ್ಲಿಗೆರೆ ಎಂ.ಸಿ.ಯಶವಂತ್‌ಕುಮಾರ್, ಗಿರಿಯಾಹಳ್ಳಿ ವಾಸು, ಯಾ.ಕರಿಗೌಡ, ಡಿಂಕಾ ಪುಟ್ಟರಾಜು, ಶಿವೇಗೌಡ, ಜಗದೀಶ್, ಡಿ.ಇ.ಲೋಕೇಶ್, ರಂಗೇಗೌಡ, ಸೋಮೇಗೌಡ ಸೇರಿದಂತೆ ಹಲವರು ಇದ್ದರು. ವಿಜೃಂಭಣೆಯಿಂದ ನಡೆದ ವಡ್ಡಿತಿಟ್ಟಿನ ಶ್ರೀ ಕಾಳಮ್ಮ ದೇವಿ ಕೊಂಡೋತ್ಸವ

ಮಂಡ್ಯ:ತಾಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ನಾಲ್ಕು ವರ್ಷಗಳ ನಂತರ ಗ್ರಾಮ ದೇವತೆ ವಡ್ಡಿತಿಟ್ಟಿನ ಶ್ರೀ ಕಾಳಮ್ಮ ದೇವಿ ಹಬ್ಬ ವಿಜೃಂಭಣೆಯಿಂದ ಜರುಗಿತು.

ಹಬ್ಬದ ಹಿನ್ನೆಲೆಯಲ್ಲಿ ಕಳೆದ ಮಂಗಳವಾರಶ್ರೀ ಹಳ್ಳಿಕೇಶ್ವರ ದೇವಾಲಯದ ಬಳಿಯ ರಂಗದ ಬಯಲಿನಲ್ಲಿ ಕಂಬ ನೆಟ್ಟು ಪೂಜೆ ಆರಂಭಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ಬಂಡಿಉತ್ಸವ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು. ಪಟಾಕಿ ಸದ್ದು, ಯುವಜನರ ನೃತ್ಯ, ತಮಟೆ, ನಗಾರಿ ಸಾಥ್ ನೀಡಿದ್ದವು. ಬುಧವಾರ ಮುಂಜಾನೆ5 ಗಂಟೆಗೆ ದೇವಿಯ ಮೆರವಣಿಗೆಯ ಪೂಜೆಗೆ ಅಲಂಕಾರ, ನೀರು ತರುವುದು ನಡೆಯಿತು. ನಂತರ ಆರು ಗಂಟೆ ವೇಳೆಗೆ ಸಹಸ್ರಾರು ಭಕ್ತರ ಜಯಘೋಷದ ನಡುವೆ ಪೂಜಾರಿ ಜಯರಾಮು ಕೊಂಡೋತ್ಸವ ಹಾಯ್ದರು.ಈ ವೇಳೆಗೆ ಮಂಡ್ಯದ ಆನೆಕೆರೆ ಬೀದಿಯ ಮಾರಮ್ಮ ದೇವಿ, ಚಿಕ್ಕಮಂಡ್ಯದ ಮಾರದಮ್ಮ ದೇವಿ ಹಾಗೂ ಗೋಪಾಲಪುರದ ಮಾರಮ್ಮ ದೇವಿ, ಕಾಳಮ್ಮ ದೇವಿ ಪೂಜಾ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನ ಐದು ದೇವರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು. ಸಂಜೆ ತಂಬಿಟ್ಟಿನ ಆರತಿಯೊಂಡಿಗೆ ಕಾಳಮ್ಮನ ಹಬ್ಬ ತೆರೆಕಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರಾಶ್ರಿತರಿಗೆ ವಾತ್ಸಲ್ಯ ತುಂಬುವ ಕೆಲಸವಾಗಬೇಕು: ಮಲ್ಲಿಕಾರ್ಜುನ್
ಹಾವಿನಮಾರನಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ಧ ಪ್ರತಿಭಟನೆ