ಸಾಹಿತ್ಯದ ಮೂಲಕ ಜಗತ್ತಿಗೆ ಕೊಡುಗೆ ನೀಡಿದ ಜೈನಧರ್ಮ: ಪ್ರೊ. ಶಾಂತಿನಾಥ ದಿಬ್ಬದ

KannadaprabhaNewsNetwork |  
Published : Mar 13, 2026, 01:30 AM IST
ದಿ.12-ಅರ್.ಪಿ.ಟಿ.1ಪಿ: ರಿಪ್ಪನ್‍ಪೇಟೆ ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಆಯೋಜಿಸಲಾದ ಬೆಳ್ಳಿ ರಥೋತ್ಸವ ಹಾಗೂ ಸಿದ್ದಾಂತ ಕೀರ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಶೋಧಕ, ವಿಶ್ರಾಂತ ಕುಲಸಚಿವರಾಗಿರುವ ಪ್ರೊ. ಶಾಂತಿನಾಥ ದಿಬ್ಬದರವರಿಗೆ ಪ್ರಶಸ್ತಿ ಹೊಂಬುಜ ಜೈನ ಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಪ್ರಧಾನ ಮಾಡಿ ಗೌರವಿಸಿ ಅಶೀರ್ವದಿಸಿದರು | Kannada Prabha

ಸಾರಾಂಶ

ಜೈನ ಧರ್ಮವು ಜೈನ ಸಾಹಿತ್ಯದ ಕೊಡುಗೆಯ ಮೂಲಕ ಅಮೂಲ್ಯ ವೃತ್ತಾಂತಗಳನ್ನು ಜಗತ್ತಿಗೆ ನೀಡಿದೆ. ಆದಿಕವಿ ಪಂಪನ ಕೃತಿಗಳು ಪ್ರಸಕ್ತ ವಿದ್ಯಮಾನದಲ್ಲಿಯೂ ಪ್ರಸ್ತುತವೆನಿಸಿದೆ. ಸ್ಯಾದ್ಯಾಯದಿಂದ ಜೀವ ಜಗತ್ತಿನ ಪ್ರಕೃತಿಯ ರಕ್ಷಣೆಯೊಂದಿಗೆ ಮಾನವಕಲ್ಯಾಣ ಸಂದೇಶವನ್ನು ಅರಿಯಬಹುದು ಎಂದು ಸಂಶೋಧಕ, ವಿಶ್ರಾಂತ ಕುಲಸಚಿವರಾಗಿರುವ ಪ್ರೊ. ಶಾಂತಿನಾಥ ದಿಬ್ಬದರವರು ಹೇಳಿದರು.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ(ಹೊಂಬುಜ)

ಜೈನ ಧರ್ಮವು ಜೈನ ಸಾಹಿತ್ಯದ ಕೊಡುಗೆಯ ಮೂಲಕ ಅಮೂಲ್ಯ ವೃತ್ತಾಂತಗಳನ್ನು ಜಗತ್ತಿಗೆ ನೀಡಿದೆ. ಆದಿಕವಿ ಪಂಪನ ಕೃತಿಗಳು ಪ್ರಸಕ್ತ ವಿದ್ಯಮಾನದಲ್ಲಿಯೂ ಪ್ರಸ್ತುತವೆನಿಸಿದೆ. ಸ್ಯಾದ್ಯಾಯದಿಂದ ಜೀವ ಜಗತ್ತಿನ ಪ್ರಕೃತಿಯ ರಕ್ಷಣೆಯೊಂದಿಗೆ ಮಾನವಕಲ್ಯಾಣ ಸಂದೇಶವನ್ನು ಅರಿಯಬಹುದು ಎಂದು ಸಂಶೋಧಕ, ವಿಶ್ರಾಂತ ಕುಲಸಚಿವರಾಗಿರುವ ಪ್ರೊ. ಶಾಂತಿನಾಥ ದಿಬ್ಬದರವರು ಹೇಳಿದರು.

ರಿಪ್ಪನ್‍ಪೇಟೆ ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಆಯೋಜಿಸಲಾದ ಬೆಳ್ಳಿ ರಥೋತ್ಸವ ಹಾಗೂ ಸಿದ್ದಾಂತ ಕೀರ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪಂಪ ರಚಿತ ಆದಿಪುರಾಣದ ವಿವಿಧ ಸನ್ನಿವೇಶಗಳನ್ನು ಅವಲೋಕಿಸಿ,“ಸಾಹಿತ್ಯ ಪ್ರಭೆ ಬೆಳಗಿಸಲು ಹೊಂಬುಜ ಶ್ರೀಕ್ಷೇತ್ರವು ಸಾಹಿತ್ಯಾರಾಧನೆಯ ಮಹತ್ವವನ್ನು ಸಾರುತ್ತಿರುವುದು” ಅಭಿನಂದನಾರ್ಹವಾದುದೆಂದರು.

ಸಮಾರಂಭದ ದಿವ್ಯಸಾನ್ನಿಧ್ಯವನ್ನು ಜಗದ್ಗುರು ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿ ವಹಿಸಿ ಅಶೀರ್ವಚನ ನೀಡಿ ಯುವ ಪೀಳಿಗೆಯು ಹಳೆಗನ್ನಡ ಸಾಹಿತ್ಯಾಭಿರುಚಿ ರೂಢಿಸಿಕೊಂಡು ಜೀವನದಲ್ಲಿ ಆದರ್ಶರಾಗುವಂತೆ ಆಶಿಸಿದರು. ಪ್ರೊ. ಶಾಂತಿನಾಥ ದಿಬ್ಬದರವರು ಜೈನ ಸಾಹಿತ್ಯದ ಐಹಿತ್ಯ, ಸಾರವನ್ನು ಸರಳವಾಗಿ ಪ್ರಚುರಪಡಿಸಿರುವುದು. ಅನೇಕ ಅವಲೋಕಿನ-ಸಂಶೋಧನ ಕೃತಿಗಳನ್ನು ಪ್ರಕಟಿಸಿರುವುದು ಸಾಹಿತ್ಯಾಭಿಮಾನಿಗಳಿಗೆ ಪ್ರೇರಣೆ ನೀಡುವುದಾಗಿದೆಯೆಂದು ತಿಳಿಸಿದರು.

ಪ್ರೊ. ಶಾಂತಿನಾಥ ದಿಬ್ಬದವರ ಪತ್ನಿ ರತ್ನ ಶಾಂತಿನಾಥ ದಿಬ್ಬದರವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಪ್ರೊ. ದಿಬ್ಬದರವರನ್ನು ಅಭಿನಂದಿಸಿದರು.

ಶ್ರೀಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಸ್ವಾಗತಿಸಿ, ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಯಶೋಧರ ಇಂದ್ರ ಪ್ರಶಸ್ತಿ ಪತ್ರ ವಾಚನ ಮಾಡಿದರು. ಎಚ್.ಬಿ. ಸಂತೋಷಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ರಥೋತ್ಸವ ದಾನಿವರ್ಗದವರನ್ನು ಶ್ರೀಗಳವರು ಅಭಿನಂದಿಸಿ, ಆಶೀರ್ವದಿಸಿದರು.

ಬೆಳ್ಳಿ ರಥ-ಪುಷ್ಪರಥ ಉತ್ಸವ

ರಿಪ್ಪನ್‍ಪೇಟೆ(ಹೊಂಬುಜ): ಜಿನಾಗಮೋಕ್ತ ವಿಧಿ-ವಿಧಾನಗಳೊಂದಿಗೆ ವಾರ್ಷಿಕ ರಥಯಾತ್ರಾ ಮಹೋತ್ಸವ ತೃತೀಯ ದಿನದಂದು ನಿತ್ಯವಿಧಿ ಸಹಿತ ಜಲಾಗ್ನಿ ಹೋಮ, ಶ್ರೀ ಶಾಂತಿಚಕ್ರಾರಾಧನೆ, ಶ್ರೀ ಬಲಿ ಉತ್ಸವವು ಪೂರ್ವಾಹ್ನ ನೆರವೇರಿತು. ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಧಾರ್ಮಿಕ ಆರಾಧನೆಗಳು ನೆರವೇರಿದವು. ಸೇವಾಕರ್ತರಾದ ಸರೋಕ್, ಸರಿತಾ ಬಗಡಾ, ನವೀನ್ ಬಗಡಾ, ಸೇಲಂ, ರಾಜೇಂದ್ರ ಸುಮನ್‍ ಛಾಬ್ರಾ ಪ್ರತೀಕ್, ನಕುಲ್‍ಗೌಹಾಟಿ ಅಸ್ಸಾಂರವರನ್ನು ಪೂಜ್ಯ ಶ್ರೀಗಳವರು ಆಶೀರ್ವದಿಸಿದರು. ರಾತ್ರಿ ಪುಷ್ಪರಥೋತ್ಸವ, ಬೆಳ್ಳಿ ರಥೋತ್ಸವಗಳು ಸಾಲಂಕೃತ ಶೋಭಾಯಾತ್ರೆಯಲ್ಲಿ ಸಾಂಪ್ರದಾಯಿಕವಾಗಿ ವಿಹಾರಗೈಯಿತು. ವಾದ್ಯಗೋಷ್ಠ, ಚಂಡೆವಾದನ, ಡೊಳ್ಳು ಕುಣಿತದೊಂದಿಗೆ ಗಜರಾಣಿ ಐಶ್ವರ್ಯ, ಅಶ್ವಗಳಾದ ಮಾನವಿ, ಪವನ್, ಭಕ್ತರೊಂದಿಗೆ ರಾಜಬೀದಿಯಲ್ಲಿ ಮೆರಗು ನೀಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಸಿಲಿಂಡರ್‌ ಬುಕ್ಕಿಂಗ್‌ಗೆ ಅನಗತ್ಯ ಗೊಂದಲ ಬೇಡ