ಸಿಲಿಂಡರ್‌ ಬುಕ್ಕಿಂಗ್‌ಗೆ ಅನಗತ್ಯ ಗೊಂದಲ ಬೇಡ

KannadaprabhaNewsNetwork |  
Published : Mar 13, 2026, 01:30 AM IST
ವಿಜೆಪಿ ೧೨ವಿಜಯಪುರದ ಸಂಗಮ್ ಗ್ಯಾಸ್ ಏಜೆನ್ಸಿಯ ಬಳಿ ಗ್ಯಾಸ್‌ಗಾಗಿ ನೆರೆದ ಜನಜಂಗುಳಿ | Kannada Prabha

ಸಾರಾಂಶ

ವಿಜಯಪುರ: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಎಲ್‌ಪಿಜಿ ಗ್ಯಾಸ್ ಬುಕ್ಕಿಂಗ್‌ನಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡು ಗ್ರಾಹಕರಲ್ಲೂ ತೀವ್ರ ಆತಂಕ ಮೂಡಿಸಿದೆ. ಇಲ್ಲಿನ ಸಂಗಮ್ ಗ್ಯಾಸ್ ಏಜೆನ್ಸಿ ಬಳಿ ನೂರಾರು ಗ್ರಾಹಕರು ಬುಕ್ಕಿಂಗ್ ಆಗದ ಕಾರಣ ಪರದಾಡಿದರು

ವಿಜಯಪುರ: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಎಲ್‌ಪಿಜಿ ಗ್ಯಾಸ್ ಬುಕ್ಕಿಂಗ್‌ನಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡು ಗ್ರಾಹಕರಲ್ಲೂ ತೀವ್ರ ಆತಂಕ ಮೂಡಿಸಿದೆ. ಇಲ್ಲಿನ ಸಂಗಮ್ ಗ್ಯಾಸ್ ಏಜೆನ್ಸಿ ಬಳಿ ನೂರಾರು ಗ್ರಾಹಕರು ಬುಕ್ಕಿಂಗ್ ಆಗದ ಕಾರಣ ಪರದಾಡಿದರು.

ತಾಂತ್ರಿಕ ಸಂಕಷ್ಟ: ಬುಕ್ಕಿಂಗ್ ವಿಳಂಬ: ಆನ್‌ಲೈನ್ ಮೂಲಕ ಸಿಲಿಂಡರ್ ಕಾಯ್ದಿರಿಸಲು ಪ್ರಯತ್ನಿಸುತ್ತಿರುವ ಗ್ರಾಹಕರಿಗೆ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಏಜೆನ್ಸಿ ಮಟ್ಟದಲ್ಲೂ ಬುಕ್ಕಿಂಗ್ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿಲ್ಲ. ನಮ್ಮ ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿದೆ, ಆನ್ಲೈನ್‌ನಲ್ಲಿ ಬುಕ್ ಆಗುತ್ತಿಲ್ಲ. ಈಗ ಅಡುಗೆ ಮಾಡುವುದು ಹೇಗೆ? ಎಂದು ೭ನೇ ವಾರ್ಡ್‌ನ ನಿವಾಸಿ ರಾಮು ತಮ್ಮ ಅಳಲು ತೋಡಿಕೊಂಡರು.

ವ್ಯವಸ್ಥಾಪಕರ ಸ್ಪಷ್ಟನೆ: ಗೊಂದಲದ ಕುರಿತು ಸಂಗಮ್ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ನಟರಾಜ್, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಎಚ್‌ಪಿ ಕಂಪನಿಯ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳಾಗಿರುವ ಸಾಧ್ಯತೆ ಇದೆ. ವರ್ಷದಲ್ಲಿ ೭-೮ ಸಿಲಿಂಡರ್ ಬಳಸಿದವರ ಬುಕ್ಕಿಂಗ್ ಸುಲಭವಾಗಿ ಆಗುತ್ತಿದೆ. ಆದರೆ ಕಡಿಮೆ ಬಳಕೆದಾರರದ್ದು ತಾಂತ್ರಿಕವಾಗಿ ವಿಳಂಬವಾಗುತ್ತಿದೆ ಎಂದು ವಿವರಿಸಿದರು.

ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ಕೊರತೆಯಿಲ್ಲ. ಈಗಾಗಲೇ ಬುಕ್ಕಿಂಗ್ ಆಗಿರುವವರಿಗೆ ಒಂದೆರಡು ದಿನಗಳ ಅಂತರದಲ್ಲಿ ಮನೆ ಬಾಗಿಲಿಗೆ ಗ್ಯಾಸ್ ತಲುಪಿಸಲಾಗುತ್ತಿದೆ. ಸಾರ್ವಜನಿಕರು ಪ್ಯಾನಿಕ್ ಆಗಿ ಏಕಕಾಲಕ್ಕೆ ಅತಿ ಹೆಚ್ಚು ಬುಕ್ಕಿಂಗ್ ಮಾಡಲು ಮುಂದಾಗುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ ಎಂದರು.

ವಾಣಿಜ್ಯ ಸಿಲಿಂಡರ್ ಕೊರತೆ?: ಪ್ರಸ್ತುತ ಗೃಹ ಬಳಕೆ ಸಿಲಿಂಡರ್‌ಗಳ ವಿತರಣೆ ನಡೆಯುತ್ತಿದ್ದರೂ, ವಾಣಿಜ್ಯ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಬುಕ್ಕಿಂಗ್ ಆದವರಿಗೆ ಗ್ಯಾಸ್ ಯಾವಾಗ ಸಿಗುತ್ತದೆ ಎಂಬ ಗೊಂದಲ ಒಂದೆಡೆಯಾದರೆ, ಬುಕ್ಕಿಂಗ್ ಆಗದವರ ಪರದಾಟ ಮತ್ತೊಂದೆಡೆ. ಒಟ್ಟಾರೆ ಪಟ್ಟಣದಲ್ಲಿ ಗ್ಯಾಸ್ ವಿತರಣಾ ವ್ಯವಸ್ಥೆ ನಿಲುಗಡೆಯಾಗದೆ ಎಂದಿನಂತೆ ನಡೆಯುತ್ತಿದೆ.ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೊಳಗಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಜನಜಂಗುಳಿ ಮಾಡಬಾರದು ಮತ್ತು ಅಧಿಕೃತ ಆಪ್ ಅಥವಾ ಎಸ್‌ಎಂಎಸ್ ಮೂಲಕ ಬುಕ್ಕಿಂಗ್‌ ಪ್ರಯತ್ನ ಮುಂದುವರಿಸಬೇಕೆಂದು ವಿಜಯಪುರ ಸಂಗಮ್ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ನಟರಾಜ್ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಸಾಹಿತ್ಯದ ಮೂಲಕ ಜಗತ್ತಿಗೆ ಕೊಡುಗೆ ನೀಡಿದ ಜೈನಧರ್ಮ: ಪ್ರೊ. ಶಾಂತಿನಾಥ ದಿಬ್ಬದ