ಸಿರಿಗೆರೆ:ಮಕ್ಕಳ ಜೀವನದ ಗುಣಮಟ್ಟವನ್ನು ಸುಧಾರಿಸುವ ಸಲುವಾರಿ ರಾಷ್ಟ್ರೀಯ ಸ್ಥಾಸ್ಥ್ಯ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ. ಇದರ ಮೂಲಕ ಸಮುದಾಯದ ಎಲ್ಲಾ ಮಕ್ಕಳ ಸಮಗ್ರ ಆರೈಕೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ತಿಳಿಸಿದರು.
18 ವರ್ಷದ ಮಕ್ಕಳನ್ನು 4 ವಿಭಾಗಗಳನ್ನಾಗಿ ಮಾಡಿ ಅವರ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಕೆಲಸ ಮಾಡಲಾಗುವುದು. ಈ ಸೌಲಭ್ಯವು ಉಚಿತವಾಗಿ ಸಮುದಾಯದ ಎಲ್ಲ ವರ್ಗದ ಜನರಿಗೆ ಸಿಗುತ್ತದೆ. ಇದರಿಂದ ಮಕ್ಕಳ ಆರೋಗ್ಯ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದರು.
ಮಕ್ಕಳ ತಪಾಸಣೆಗೆ ಅನುಕೂಲವಾಗುವಂತೆ, ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ 0ರಿಂದ 6 ವರ್ಷದೊಳಗಿನ ಮಕ್ಕಳನ್ನು ಪರೀಕ್ಷಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಸರ್ಕಾರಕ್ಕೆ ದಾಖಲಾದ ಮಕ್ಕಳನ್ನು ಪರೀಕ್ಷಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳು ಮುಂದಾಗಿವೆ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಜಿಲ್ಲೆಯ ೫೩೦ ಅಂಗನವಾಡಿ ಕೇಂದ್ರಗಳಲ್ಲಿ ೨೫,೯೩೩ ಮಕ್ಕಳು, ೪೩೪ ಶಾಲೆಗಳಲ್ಲಿ ೪೫,೨೭೮ ಮಕ್ಕಳು ಇದ್ದು ಅವರನ್ನು ಆರೋಗ್ಯ ತಪಾಸಣೆಗೆ ವರ್ಷದಲ್ಲಿ ಒಂದು ಬಾರಿಯಾದರು ಒಳಪಡಿಸಬೇಕು ಎಂದರು.
ಡಾ.ಮಹೇಂದ್ರ ಕುಮಾರ್, ಡಾ.ಸುಪ್ರಿತಾ, ಶುಶ್ರೂಷಕಿ ಪೂಜಾ, ಸಮುದಾಯ ಆರೋಗ್ಯಾಧಿಕಾರಿ ಬಿ.ಕೆ.ಸುಧಾ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಆಧಿಕಾರಿ ಮಲ್ಲಮ್ಮ, ಆಶಾ ಕಾರ್ಯಕರ್ತೆಯರಾದ ರಾಜೇಶ್ವರಿ, ಜ್ಯೋತಿಬಾಯಿ, ಅಂಗನವಾಡಿ ಕಾರ್ಯಕರ್ತೆಯರಾದ ನೇತ್ರಾವತಿ ಶಿವಮ್ಮ ಭಾಗವಹಿಸಿದ್ದರು.