ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಅಪರಾಧ: ನ್ಯಾಯಾಧೀಶೆ ಆಯುಷಾಬಿ ಮಜೀದ್

KannadaprabhaNewsNetwork |  
Published : Jun 13, 2024, 12:46 AM IST
ಪೋಟೊ1:  ಕುಕನೂರು ಪಟ್ಟಣದ ಶ್ರೀಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಜಾಥಾಕ್ಕೆ ಕಿರಿಯ ಶ್ರೇಣಿ ನ್ಯಾಯಾಧೀಶೆ ಆಯುಷಾ ಬಿ, ಮಜೀದ್ ಬುಧವಾರ ಚಾಲನೆ ನೀಡಿದರು.ಪೋಟೊ2.3: ಕುಕನೂರು ಪಟ್ಟಣದ ಶ್ರೀಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಕಿರಿಯ ಶ್ರೇಣಿ ನ್ಯಾಯಾಧೀಶೆ ಆಯುಷಾ ಬಿ, ಮಜೀದ್  ಬೋಧಿಸಿದರು. | Kannada Prabha

ಸಾರಾಂಶ

ಬಾಲ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಸ್ವಯಂಕೃತ ಅಪರಾಧವಾಗುತ್ತದೆ.

ಕನ್ನಡಪ್ರಭ ವಾರ್ತೆ ಕುಕನೂರು

ಬಾಲ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಸ್ವಯಂಕೃತ ಅಪರಾಧವಾಗುತ್ತದೆ ಎಂದು ಕುಕನೂರು ಕಿರಿಯ ಶ್ರೇಣಿ ನ್ಯಾಯಾಧೀಶೆ ಆಯುಷಾಬಿ ಮಜೀದ್ ಹೇಳಿದರು.

ಪಟ್ಟಣದ ಶ್ರೀಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೊಂದಿಗೆ ಬುಧವಾರ ನಡೆದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋಧಿಸಿದರು.

ಶಾಲೆಯ ವಿದ್ಯಾರ್ಥಿಗಳು ಬಾಲಕಾರ್ಮಿಕ ವಿರೋಧಿ ಘೋಷಣೆ ಕೂಗುತ್ತಾ ಪಟ್ಟಣದ ವೀರಭದ್ರಪ್ಪ ವೃತ್ತ, ಬಸ್ ನಿಲ್ದಾಣ, ಕನಕದಾಸ ವೃತ್ತದ ಅಂಬೇಡ್ಕರ್ ವೃತ್ತದ ಮೂಲಕ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದರು.

ಗ್ರೇಡ್-೨ ತಹಸೀಲ್ದಾರ್ ಮುರುಳೀಧರ್ ಕುಲಕರ್ಣಿ, ಪಿಎಸ್ಐ ಟಿ. ಗುರುರಾಜ, ಶಿರಸ್ತೇದಾರ ಮಹ್ಮದ್ ಮುಸ್ತಾಫ್, ಶಾಲೆ ಮುಖ್ಯ ಶಿಕ್ಷಕ ಎಸ್.ಜೆ. ಪಾಟೀಲ್, ವಕೀಲರ ಸಂಘದ ಕಾರ್ಯದರ್ಶಿ ಐ.ಬಿ. ಕೋಳೂರು, ಕಾರ್ಮಿಕ ಇಲಾಖೆಯ ಸಿಬ್ಬಂದಿ ವೀರಯ್ಯ ಮೂಲಿಮಠ, ಮಹೇಶ ಬಡಿಗೇರ, ಹುಸೇನಸಾಬ, ಹನುಮಂತಪ್ಪ ಕುರಿ, ವಕೀಲರಾದ ರವಿ ಹುಣಸಿಮರದ, ಎಸ್.ಸಿ. ಗದಗ, ಅಡಿವೆಪ್ಪ ಬೊರಣ್ಣವರ್, ರಮೇಶ ಗಜಕೋಶ, ಸಂಗಮೇಶ ಅಂಗಡಿ, ಜಗದೀಶ ತೊಂಡಿಹಾಳ, ಶಶಿಧರ ಶ್ಯಾಗೊಟಿ, ರಾಘವೇಂದ್ರ ಕುಷ್ಟಗಿಶೆಟ್ಟರ್, ಪಿ.ಆರ್. ಹಿರೇಮಠ, ಎ.ಎಂ. ಪಾಟೀಲ್, ಶಿಕ್ಷಕರಾದ ವಿ.ಬಿ. ಕಟ್ಟಿ, ಎನ್.ಟಿ. ಸಜ್ಜನ್, ಎಸ್.ಎಚ್. ಗುಡ್ಲಾನೂರು, ಡಿ.ಡಿ. ಜೋಗಣ್ಣವರ್, ಆರ್.ಬಿ. ರಾಠೋಡ ಹಾಗೂ ವಿದ್ಯಾರ್ಥಿಗಳು ಇದ್ದರು.

ಬಾಲ ಕಾರ್ಮಿಕತೆ ನಿರ್ಮೂಲನೆಗೆ ಜೈ ಜೋಡಿಸಿ:

ಸಮಾಜದಲ್ಲಿ ಬಾಲ ಕಾರ್ಮಿಕತೆ ನಿರ್ಮೂಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಲ್. ವೀರೇಂದ್ರಕುಮಾರ ಹೇಳಿದರು.ಕನಕಗಿರಿ ಪಟ್ಟಣದ ತಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.ವಿಶ್ವ ಕಾರ್ಮಿಕ ಸಂಸ್ಥೆ 2002ರಿಂದ ಪ್ರತಿ ವರ್ಷ ಜೂ.12ರಂದು ಬಾಲ ಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸುತ್ತಿದೆ. ಇದು ಕೇವಲ ಆಚರಣೆಗೆ ಸೀಮಿತವಾಗದೆ ಸಮಾಜದಲ್ಲಿ ನೆಲೆಯೂರಿರುವ ಬಾಲ ಕಾರ್ಮಿಕತನ ನಿವಾರಣೆಗೆ ನಾವೆಲ್ಲರೂ ಕೈ ಜೋಡಿಸಬೇಕು. ಅಂದಾಗ ಮಾತ್ರ ಸಮಾಜ ಬಾಲ ಕಾರ್ಮಿಕ ಮುಕ್ತವಾಗಲು ಸಾಧ್ಯವಾಗಲಿದೆ ಎಂದರು.ನಂತರ ಎಲ್ಲ ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಸಹಾಯಕ ನಿರ್ದೇಶಕ ಚಂದ್ರಶೇಖರ ಬಿ. ಕಂದಕೂರ, ಪ್ರಥಮ ದರ್ಜೆ ಸಹಾಯಕ‌ ಹನುಮಂತ, ವಿಷಯ ನಿರ್ವಾಹಕರಾದ ಕೊಟ್ರಯ್ಯಸ್ವಾಮಿ, ಪವನಕುಮಾರ, ಯಂಕೋಬ, ಹನುಮವ್ವ, ನರೇಗಾ ಸಿಬ್ಬಂದಿ ಸಂಗಾರೆಡ್ಡಿ, ಮೇಘರಾಜ, ಶಿವಕುಮಾರ, ಮೌನೇಶ, ಶರಣಪ್ಪ, ಮಂಜುನಾಥ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ