ಬಾಲ್ಯವಿವಾಹ ಸಾಮಾಜಿಕ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದೆ

KannadaprabhaNewsNetwork |  
Published : Nov 30, 2026, 03:00 AM IST
29ಎಚ್ಎಸ್ಎನ್9 : ಅಂತರಾಷ್ಟ್ರೀಯ ಬಾಲ್ಯವಿವಾಹ ನಿರ್ಮೂಲನಾ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾತಕ್ಕೆ  ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಹೆಚ್ಚಿನ ಬಾಲ್ಯ ವಿವಾಹವು ತಾಲೂಕು ಹಳ್ಳಿಮೈಸೂರು ಹೋಬಳಿಯಲ್ಲಿ ಕಂಡು ಬರುತ್ತಿವೆ. ಇದನ್ನು ಗಣನೀಯವಾಗಿ ಶೂನ್ಯಗೊಳಿಸಲು ಈ ಬಗ್ಗೆ ಜಾಗೃತಿ ಅವಶ್ಯಕವಾಗಿದೆ. ಎಲ್ಲಾ ಇಲಾಖೆಗಳ ಸಮನ್ವಯತೆಯಲ್ಲಿ ಸಮರೋಪಾದಿಯಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಿದರು ಸಹ ಪೋಷಕರು, ನಾಗರೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದರಿಂದ ಮಕ್ಕಳನ್ನು ಸಂರಕ್ಷಿಸಿ ಅವರ ಹಕ್ಕುಗಳ ಮೂಲಕ ಸುರಕ್ಷಿತ ಬಾಲ್ಯವನ್ನು ಮಕ್ಕಳಿಗೆ ಮರಳಿಸಬೇಕಾಗಿದೆ. ಬಾಲ್ಯ ವಿವಾಹದಿಂದಾಗಿ, ಬಾಲ ಗರ್ಭಿಣಿಯರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಬಾಲ್ಯವಿವಾಹವು ಸಾಮಾಜಿಕ ಪಿಡುಗಾಗಿದ್ದು ದೇಶದ ಸಾಮಾಜಿಕ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಇದರಿಂದ ಮಕ್ಕಳ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಮಕ್ಕಳನ್ನು ರಕ್ಷಿಸಬೇಕಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಜಿ. ಕೆ ಕರೆ ನೀಡಿದರು.ತಾಲೂಕು ಹಳ್ಳಿಮೈಸೂರು ಗ್ರಾಮದ ಕನಕ ಭವನದಲ್ಲಿ ಹಾಸನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪ್ರಚೋದನಾ ಸಂಸ್ಥೆ, ದೆಹಲಿ ಜಸ್ಟ್ ರೈಟ್ಸ್ ಫಾರ್‌ ಚಿಲ್ಡ್ರನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬಾಲ್ಯವಿವಾಹ ನಿರ್ಮೂಲನಾ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಾಸನ ಜಿಲ್ಲೆಯೂ ಬಾಲ್ಯ ವಿವಾಹದ ಅಂಕಿ ಅಂಶಗಳಲ್ಲಿ ೪ ನೇ ಸ್ಥಾನದಲ್ಲಿರುವುದು ಆತಂಕದ ವಿಷಯವಾಗಿದೆ.ಜಿಲ್ಲೆಯಲ್ಲಿ ಹೆಚ್ಚಿನ ಬಾಲ್ಯ ವಿವಾಹವು ತಾಲೂಕು ಹಳ್ಳಿಮೈಸೂರು ಹೋಬಳಿಯಲ್ಲಿ ಕಂಡು ಬರುತ್ತಿವೆ. ಇದನ್ನು ಗಣನೀಯವಾಗಿ ಶೂನ್ಯಗೊಳಿಸಲು ಈ ಬಗ್ಗೆ ಜಾಗೃತಿ ಅವಶ್ಯಕವಾಗಿದೆ. ಎಲ್ಲಾ ಇಲಾಖೆಗಳ ಸಮನ್ವಯತೆಯಲ್ಲಿ ಸಮರೋಪಾದಿಯಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಿದರು ಸಹ ಪೋಷಕರು, ನಾಗರೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದರಿಂದ ಮಕ್ಕಳನ್ನು ಸಂರಕ್ಷಿಸಿ ಅವರ ಹಕ್ಕುಗಳ ಮೂಲಕ ಸುರಕ್ಷಿತ ಬಾಲ್ಯವನ್ನು ಮಕ್ಕಳಿಗೆ ಮರಳಿಸಬೇಕಾಗಿದೆ. ಬಾಲ್ಯ ವಿವಾಹದಿಂದಾಗಿ, ಬಾಲ ಗರ್ಭಿಣಿಯರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳು ಮಾನಸಿಕ, ದೈಹಿಕ, ಸಾಮಾಜಿಕ ಸಮಸ್ಯೆಗಳನ್ನು ಮಕ್ಕಳು ಬಾಲ್ಯದಲ್ಲಿಯೇ ಎದುರಿಸಬೇಕಾಗುತ್ತದೆ. ಬಾಲ್ಯ ವಿವಾಹದಿಂದ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗಂಡು ಮಕ್ಕಳು ಕಾನೂನು ರೀತ್ಯಾ ಶಿಕ್ಷೆಗೆ ಒಳಗಾಗಿ ತಮ್ಮ ಅಮೂಲ್ಯ ಜೀವನವನ್ನು ಕಳೆದು ಕೊಳ್ಳುತ್ತಿದ್ದಾರೆ. ಇದರಿಂದ ನಮ್ಮೆಲ್ಲರ ಹೊಣೆಗಾರಿಕೆ ಹೆಚ್ಚಿದ್ದು ಮಕ್ಕಳ ರಕ್ಷಣೆ ನಮ್ಮ ಆಧ್ಯತೆಯಾಗಿದೆ ಎಂದು ತಿಳಿಸಿದರು. ಕಾನೂನು ಎಷ್ಟೇ ಕಠಿಣವಾಗಿದ್ದರು ಸದ್ದಿಲ್ಲದೆ ಬಾಲ್ಯವಿವಾಹ ಪದ್ಧತಿ ನಡೆಯುತ್ತಿವೆ. ಮಕ್ಕಳ ಪ್ರೇಮ ಪ್ರಕರಣಗಳು ಹೆಚ್ಚುವ ಮೂಲಕ ಹಾಗು ನೈತಿಕತೆಯಿಲ್ಲದ ಸಾಮಾಜಿಕ ಜಾಲತಾಣಗಳು, ಆಧುನಿಕತೆಯ ಸೋಗಿನಲ್ಲಿ ಮಕ್ಕಳ ಭವಿಷ್ಯವನ್ನು ಹಾಳುಗೆಡುವುತ್ತಿವೆ ಎಂದು ಎಚ್ಚರಿಸಿ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ಜಾಲತಾಣಗಳ ಬಳಕೆ ಬಗ್ಗೆ ಜಾಗೃತಿ ಮತ್ತು ತಿಳುವಳಿಕೆ ಬೇಕಿದೆ ಎಂದರು.ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಯೋಗೀಂದ್ರ ಶೆಟ್ಟಿ ಮಾತನಾಡಿ ಸಮಾಜದಲ್ಲಿ ಕಾನೂನು ಬಾಹಿರವಾಗಿ ನಡೆಯುವ ಬಾಲ್ಯವಿವಾಹ, ಅಪ್ರಾಪ್ತ ವಯಸ್ಕರ ಮೇಲೆ ದಬ್ಬಾಳಿಕೆ ಬಗ್ಗೆ ಸರ್ಕಾರ ಸಾಕಷ್ಟು ಕಾನೂನುಗಳನ್ನು ಅನುಷ್ಠಾನಕ್ಕೆ ತಂದಿದ್ದರೂ ಸಹ ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಪೋಕೋ ಘಟನೆಗಳು ಮರುಕಳಿಸುತ್ತಿರುವುದು ವಿಷಾದನೀಯ ಸಂಗತಿ ಎಂದರು. ಸಮಾಜವನ್ನು ಪಿಡುಗಾಗಿ ಕಾಡುತ್ತಿರುವ ಈ ಸಮಸ್ಯೆ ಕುರಿತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ತರಬೇತಿ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಪ್ರಶಂಸಿ, ಈ ರೀತಿಯ ಪಿಡುಗನ್ನು ಸಂಪೂರ್ಣ ತೊಡೆದಾಕಲು ಪ್ರತಿಯೊಬ್ಬ ನಾಗರೀಕರ ಸಹಕಾರ ಜತೆಗೆ ಜವಾಬ್ದಾರಿ ವರ್ತನೆ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ, ಫೆವಾರ್ಡ್‌ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷೆ ಕಲಾವತಿ ಮಧುಸೂದನ, ೧ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಐಶ್ವರ್ಯ ಎಸ್ ಗುಡದಿನ್ನಿ, ಸಮಗ್ರ ಮಕ್ಕಳ ಕಲ್ಯಾಣ ಸಮಿತಿದ ಅಧ್ಯಕ್ಷೆ ಮದುಕುಮಾರಿ ಎಮ್.ಎಸ್., ತಹಸೀಲ್ದಾರ್‌ ವೈ. ಎಂ. ರೇಣು ಕುಮಾರ್‌ ಇತರರು ಮಾತನಾಡಿದರು.ಕಾರ್ಯಕ್ರಮಕ್ಕೂ ಮುನ್ನ ಹಳ್ಳಿಮೈಸೂರಿನ ಖಾಸಗಿ ಹಾಗೂ ಅನುದಾನಿತ ಶಾಲೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕ ಶಿಕ್ಷಕಿಯರು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬಾಲ್ಯವಿವಾಹ ತಡೆ ಕುರಿತು ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ತಾ.ಪಂ. ಇಸಿಒ ಮುನಿರಾಜು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ದಿಲೀಪ್ ಕೆ. ಜೆ., ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ಬಿಇಒ ಸೋಮಲಿಂಗೇಗೌಡ, ವೃತ್ತ ನಿರೀಕ್ಷಕ ಸಂತೋಷ್, ಸಿ.ಸಿ.ಪೌಲೋಸ್, ಸುಜಾತ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾಮಸ್ತಕಾಭಿಷೇಕಕ್ಕೆ ಸಂಘಟಿತ ಸಿದ್ಧತೆ ಅಗತ್ಯ: ಡಾ. ಹೆಗ್ಗಡೆ
ಸಿ ಆ್ಯಂಡ್ ಡಿ , ಸೆಕ್ಷನ್-೪ ಸಮಸ್ಯೆ ಪರಿಹಾರ ಅಗತ್ಯ: ಮಂತರ್‌