ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ನಗರದ ಕಂದಗಲ್ಲ ರಸ್ತೆಯಲ್ಲಿರುವ ಬಾಬು ಜಗಜೀವನರಾಂ ಭವನದಲ್ಲಿ ಕರ್ನಾಟಕ ರಾಜ್ಯ ಕಾನೂನು ಸಲಹಾ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸಲಹಾ ಪ್ರಾಧಿಕಾರ ಬಾಗಲಕೋಟೆ ಇವರ ಸಹಯೋಗದಲ್ಲಿ ಜಿಲ್ಲಾ ಆಡಳಿತ ಮತ್ತು ಬಾರ್ ಅಸೋಸಿಯೇಶನ್ ಇಳಕಲ್ಲ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಮತ್ತು ಬೃಹತ್ ಆರೋಗ್ಯ ಉಚಿತ ತಪಾಸಣೆ ಹಾಗೂ ಬಾಲ್ಯ ವಿವಾಹ ಮುಕ್ತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಗ್ರಾಮದ ಜನತೆ ಮುಗ್ದರಾಗಿದ್ದು, ಅವರಿಗೆ ಕಾನೂನು ಹಾಗೂ ಅಕ್ಷರ ಜ್ಞಾನ ಕಡಿಮೆ. ಅಂತಹವರನ್ನು ಬಂಡವಾಳ ಮಾಡಿಕೊಂಡು ಕೆಲವರು ದುಷ್ಟ ವ್ಯಕ್ತಿಗಳು ಕೆಲ ಕಾನೂನು ಬಾಹಿರ ಕೆಲಸ ಮಾಡುತ್ತಾರೆ. ಚಿಕ್ಕಮಕ್ಕಳ ಮದುವೆ ಮಾಡಿಸುವುದು ಕಾನೂನು ಬಾಹಿರ ಮತ್ತು ಮಹಾ ಅಪರಾಧ. ಕಾರಣ ಭಾರತವನ್ನು ಬಾಲ್ಯ ವಿವಾಹ ಮುಕ್ತ ದೇಶವನ್ನಾಗಿ ಮಾಡಲು ಪ್ರತಿಯೊಬ್ಬರು ಪ್ರಪಣ ತೊಡಬೇಕಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯವಶ್ಯ ಎಂದ ಅವರು, ನಿಮ್ಮ ಗ್ರಾಮದಲ್ಲಿ ಬಾಲ್ಯ ವಿವಾಹ ಕಂಡು ಬಂದರೆ ತಕ್ಷಣವೇ ನ್ಯಾಯಲಯದ ಗಮನಕ್ಕೆ ತನ್ನಿ. ಅದನ್ನು ತಡೆದು ಮಗುವಿನ ರಕ್ಷಣೆ ಮಾಡುತ್ತೇವೆ. ಇಂದು ಕೆಲವರಿ ಹಣ ಆಮಿಷಕ್ಕೆ ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡಿಸಲು ಮುಂದಾಗುತ್ತಿರುವುದು ಎಂದು ತಿಳಿದು ಬಂದಿದೆ. ಹಣದ ಆಮಿಷಕ್ಕೆ ಬಲಿಯಾಗಿ ನಿಮ್ಮ ಮಗಳ ಬದುಕನ್ನು ಬಲಿ ಕೊಡಬೇಡಿ ಎಂದು ಮನವಿ ಮಾಡಿದರು.
ಉಚ್ಚ ನ್ಯಾಯಲಯದ ಹಿರಿಯ ನ್ಯಾಯಮೂರ್ತಿಗಳು, ಕರ್ನಾಟಕ ರಾಜ್ಯ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥರಾದ ಅನು ಶಿವರಾಮನ್ ಮಾತನಾಡಿ, ಗ್ರಾಮೀಣ ಬಡ ಜನರಿಗೆ ಉಚಿತ ಕಾನೂನು ನೆರವು ನೀಡುವುದರ ಬಗ್ಗೆ ತಿಳಿಸಿದರು.ರಾಜ್ಯ ಉಚ್ಚ ನ್ಯಾಯಲಯದ ನ್ಯಾಯಮೂರ್ತಿಗಳು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ನ್ಯಾಯಮೂರ್ತಿಗಳಾದಜ್ಯೋತಿ ಎಂ. ಹಾಗೂ ರಾಜ್ಯ ಉಚ್ಚ ನ್ಯಾಯಲಯದ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಮಾತನಾಡಿದರು.
ಇದೇ ವೇಳೆ ಗ್ರಾಮ ಮಟ್ಟದಲ್ಲಿ ಅನ್ಯಾಯವಾದವರಿಗೆ, ನೋಂದವರಿಗೆ ಅಂಗವಿಕಲರಿಗೆ ಅಂಧರಿಗೆ ಜಿಲ್ಲಾಡಳಿತದ ಪರವಾಗಿ ಬೈಸಿಕಲ್, ಲ್ಯಾಪಟಾಪ್, ಪರಿಹಾರ ಧನದ ಚಕ್ ವಿತರಣೆ ಮಾಡಲಾಯಿತು.