ಕನ್ನಡಪ್ರಭ ವಾರ್ತೆ ಬೆಳಗಾವಿ
ಇದೇ ವೇಳೆ,ಅಖಿಲ ಭಾರತ ದ್ವಿತೀಯ ಕವಿಪೀಠ ಮಹಾಸಮ್ಮೇಳನ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದೆ. ಚುಟುಕು ಕವಿ ಅಪ್ಪಾಸಾಹೇಬ ಅಲಿಬಾದಿ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಗುರುಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದರಾದ ಜಗದೀಶ ಶೆಟ್ಟರ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ಆಗಮಿಸುವರು. ಅತಿಥಿಗಳಾಗಿ ಶಾಸಕರಾದ ಆಸೀಫ್ ಸೇಠ್, ಅಭಯ ಪಾಟೀಲ ಮತ್ತು ಚನ್ನರಾಜ ಹಟ್ಟಿಹೊಳಿ ಆಗಮಿಸುವರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಅಧ್ಯಕ್ಷತೆಯನ್ನು ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ಉದ್ಘಾಟಿಸುವರು. ಈ ವೇಳೆ ವಿವಿಧ ಕೃತಿಗಳ ಬಿಡುಗಡೆಯೂ ನಡೆಯಲಿದೆ.ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಅಪ್ಪಾಸಾಹೇಬ ಸರ್ವಾಧ್ಯಕ್ಷ
ಅಪ್ಪಾಸಾಹೇಬ ಅಲಿಬಾದಿ ಅಥಣಿಯವರಾಗಿದ್ದು, ಜಿಲ್ಲೆಯ ಹಿರಿಯ ಕವಿಗಳು. ಈವರೆಗೆ ಸುಮಾರು ೫೦ ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ೨೦ಕ್ಕೂ ಹೆಚ್ಚು ಚುಟುಕು, ಹನಿಗವನ ಮತ್ತು ಆಧುನಿಕ ವಚನ ಸಂಗ್ರಹಗಳಿವೆ. ಅಲಿಬಾದಿಯವರ ಕುರಿತಾಗಿಯೇ ೪ ಕೃತಿಗಳು ರಚನೆಯಾಗಿದ್ದು, ಸುವರ್ಣಮಿಂಚು ಅವರ ೫೦ನೇ ವರ್ಷದ ಅಭಿನಂದನ ಗ್ರಂಥ. ಭಾರತೀಯ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿಯಾಗಿ ನಿವೃತ್ತರಾಗಿರುವ ಅವರು ಸಾಮಾಜಿಕ, ಸಾಂಸ್ಕೃತಿಕ ಸೇವಾ ಕಾರ್ಯಗಳಲ್ಲೂ ನಿರತರಾಗಿದ್ದಾರೆ. ಕೃಷಿಕರು ಹೌದು. ತಮ್ಮ ಮನೆಯಲ್ಲೇ ೧೦ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನೊಳಗೊಂಡ ಸಿದ್ದೇಶ್ವರ ಗ್ರಂಥಭಂಡಾರ ಸ್ಥಾಪಿಸಿದ್ದಾರೆ. ತಮ್ಮ ಸಾಹಿತ್ಯ ಸೇವೆಗಾಗಿ ನಲ್ವತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದು, ಅಲಿಬಾದಿ ಪ್ರತಿಷ್ಠಾನ ಸಹಿತ ಹಲವು ಸಂಘ-ಸಂಸ್ಥೆಗಳ ಸಂಸ್ಥಾಪಕರಾಗಿ, ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗೆ ಲಕ್ಷದ್ವೀಪದಲ್ಲಿ ನಡೆದ ಸಮಾವೇಶದ ಅಧ್ಯಕ್ಷ ಸ್ಥಾನದ ಗೌರವಮತ್ತು ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ಸುವರ್ಣ ಕನ್ನಡಿಗ-೨೦೨೫ರ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.