ಸೋಮರಡ್ಡಿ ಅಳವಂಡಿ ಕೊಪ್ಪಳ
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಶಾಲೆ ಹಾಗೂ ಹಾಸ್ಟೆಲ್‌ನಲ್ಲಿ ಬಾಲ ಗರ್ಭಿಣಿ ಪ್ರಕರಣ ಪತ್ತೆಯಾಗಿ ತಲೆತಗ್ಗಿಸುವಂತೆ ಅಂಶ ಬೆಳಕಿಗೆ ಬಂದಿತ್ತು. ಕೊಪ್ಪಳ ಜಿಲ್ಲೆಯ ಹಾಸ್ಟೆಲ್ ಒಂದರಲ್ಲಿ ಬಾಲಗರ್ಭಿಣಿ ಶೌಚದಲ್ಲಿ ಗರ್ಭಪಾತ ಮಾಡಿಕೊಂಡು ಕೂಸನ್ನು ಶೌಚಾಲಯದಲ್ಲಿ ಎಸೆದಿರುವ ಕುರಿತು ವರದಿಯಾಗಿದ್ದು, ಹಾಸ್ಟೆಲ್ ಗಳಲ್ಲಿ ಮಕ್ಕಳು ಸುರಕ್ಷಿತವೇ ಎನ್ನುವ ಆತಂಕ ಎದುರಾಗಿದೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 2024-25 ರಲ್ಲಿ 1403 ಪ್ರಕರಣ ಬೆಳಕಿಗೆ ಬಂದಿದ್ದರೆ, 2025- 26 ರಲ್ಲಿ 1183 ಪ್ರಕರಣ ಪತ್ತೆಯಾಗಿದ್ದವು, ಆದರೆ 2026- 27ನೇ ಸಾಲಿನಲ್ಲಿ ನಾಲ್ಕು ತಿಂಗಳಲ್ಲಿ 197 ಪ್ರಕರಣ ಪತ್ತೆ ಆಗಿದೆ.ಬಾಲ್ಯ ವಿವಾಹ ತಡೆಗಟ್ಟಲು ಎಷ್ಟೇ ಪ್ರಯತ್ನ ನಡೆದರೂ ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಸಹ ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯವಾಗಿಲ್ಲ, ಅದಕ್ಕಿಂತ ಅಪಾಯಕಾರಿ ಎಂದರೆ ಬಾಲ ಗರ್ಭಿಣಿ ಪ್ರಕರಣ ರಾಜ್ಯದ ಅಂಕಿ ಸಂಖ್ಯೆಗಳಿಗೆ ಹೋಲಿಸಿದರೆ ಅರ್ಧದಷ್ಟು ಪ್ರಕರಣಗಳು ಕೇವಲ ಕಲ್ಯಾಣ ಕರ್ನಾಟಕದಲ್ಲೇ ದಾಖಲಾಗುತ್ತಿವೆ. ಅದರಲ್ಲೂ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಅತ್ಯಧಿಕ ಪ್ರಕರಣಗಳು ಪತ್ತೆಯಾಗುತ್ತವೆ.
ಸಾಕಷ್ಟು ಜಾಗೃತಿ ಮೂಡಿಸಿದರೂ ಬಾಲಗರ್ಭಿಣಿ ಹೆಚ್ಚಾಗುತ್ತಲೇ ಇವೆ. ಪ್ರಕರಣ ಪತ್ತೆಯಾದರೂ ಅಧಿಕಾರಿಗಳ ನಿರ್ಲಕ್ಷ್ಯ, ಪಾಲಕರಲ್ಲಿರುವ ಅರಿವಿನ ಕೊರತೆಯೇ ಕಾರಣ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗ ಮಾಜಿ ಸದಸ್ಯ ಶೇಖರಗೌಡ ತಿಳಿಸಿದ್ದಾರೆ.
ಬಳ್ಳಾರಿ185 205 41
ಕಲಬುರಗಿ 81 43 08
ರಾಯಚೂರು 686 663 100
ವಿಜಯನಗರ 365 146 11