ಗ್ರಾಮೀಣ ಜನರಿಗೆ ವಿಬಿ-ಜಿ ರಾಮ್-ಜಿ ಯೋಜನೆ ಹೊಸ ಭರವಸೆ

KannadaprabhaNewsNetwork |  
Published : Aug 23, 2026, 02:30 AM IST
ಹಳಿಯಾಳ ತಾಲೂಕಿನ ನಾಗಶೆಟ್ಟಿಕೊಪ್ಪ ಗ್ರಾಮದಲ್ಲಿ ವಿಬಿ-ಜಿ ರಾಮ್-ಜಿ ಗ್ರಾಮೀಣ ಕೂಲಿಕಾರರಿಗೆ ಜಾಬ್ ಕಾರ್ಡಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ಗ್ರಾಮೀಣ ಜನರಿಗೆ ವಿಬಿ-ಜಿ ರಾಮ್- ಜಿ ಯೋಜನೆ ಹೊಸ ಭರವಸೆಯಾಗಲಿದೆ. ಕೆಲಸಕ್ಕಾಗಿ ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಹೋಗದೇ ಸ್ವಂತ ಗ್ರಾಮದಲ್ಲಿಯೇ ಉದ್ಯೋಗ ಪಡೆದು ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ.

ನಾಗಶೆಟ್ಟಿಕೊಪ್ಪದಲ್ಲಿ ಕೂಲಿಕಾರರಿಗೆ ಮಾಹಿತಿ, ಜಾಬ್‌ ಕಾರ್ಡ್‌ ವಿತರಣೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಗ್ರಾಮೀಣ ಜನರಿಗೆ ವಿಬಿ-ಜಿ ರಾಮ್- ಜಿ ಯೋಜನೆ ಹೊಸ ಭರವಸೆಯಾಗಲಿದೆ. ಕೆಲಸಕ್ಕಾಗಿ ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಹೋಗದೇ ಸ್ವಂತ ಗ್ರಾಮದಲ್ಲಿಯೇ ಉದ್ಯೋಗ ಪಡೆದು ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಎಂದು ಐಇಸಿ ಸಂಯೋಜಕಿ ಸೌಂದರ್ಯಾ ಕುರಕುರಿ ಹೇಳಿದರು.

ತಾಲೂಕಿನ ನಾಗಶೆಟ್ಟಿಕೊಪ್ಪ ಗ್ರಾಮದ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು ವಿಬಿ-ಜಿ ರಾಮ್-ಜಿ ಕುರಿತು ಕೂಲಿಕಾರರಿಗೆ ಮಾಹಿತಿ ನೀಡಿ, ಜಾಬ್ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು. ಜು. 1ರಿಂದ ಜಾರಿಗೆ ಬಂದಿರುವ ವಿಬಿ-ಜಿ ರಾಮ್-ಜಿ ಯೋಜನೆಯಡಿ ಗ್ರಾಮೀಣ ಅರ್ಹ ಕುಟುಂಬಕ್ಕೆ ವಾರ್ಷಿಕವಾಗಿ ಮಾನವ ದಿನಗಳನ್ನು ಹೆಚ್ಚಿಸಲಾಗಿದ್ದು, ಗಂಡು-ಹೆಣ್ಣಿಗೆ ದಿನಕ್ಕೆ ₹382 ಸಮಾನ ಕೂಲಿ ನೀಡಲಾಗುತ್ತಿದೆ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ದೀರ್ಘ ಬಾಳಿಕೆಯ ಸಮುದಾಯ ಕಾಮಗಾರಿಗಳು ಹಾಗೂ ಜನರ ಆರ್ಥಿಕ ಭದ್ರತೆಗಾಗಿ ವೈಯಕ್ತಿಕ ಸೌಲಭ್ಯಗಳು ಸೇರಿದಂತೆ ಒಟ್ಟು 318 ಬಗೆಯ ಅನುಮೋದಿತ ಕಾಮಗಾರಿಗಳಿದ್ದು, ಸಾರ್ವಜನಿಕರು ಈ ಯೋಜನೆಯ ಲಾಭ ಪಡೆದು ಗ್ರಾಮದ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಬೇಕಾಗಿದೆ ಎಂದರು.

ಆ. 18ರಿಂದ ಸೆ. 18ರ ವರೆಗೆ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಜಾಬ್ ಕಾರ್ಡ್‌ ಮೇಳ ಹಮ್ಮಿಕೊಂಡಿದ್ದು, ಸಕ್ರಿಯ ಕೂಲಿಕಾರರಿಗೆ ಹಾಗೂ ಹೊಸ ಜಾಬ್ ಕಾರ್ಡ್‌ಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ತಾಂತ್ರಿಕ ಸಹಾಯಕರಾದ ಸುಗಂಧ ಧಾಮನೇಕರ, ಬಿಎಫ್‌ಟಿ ರವಿ ಪಿಂಪಳಕರ, ಗ್ರಾಪಂ ಸಿಬ್ಬಂದಿ, ಕಾಯಕಬಂಧು ಹಾಗೂ ಕೂಲಿ ಕಾರ್ಮಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ: ಪೊನ್ನಣ್ಣ
ಸದ್ಗುಣಗಳೇ ಮಾನವನ ಧೀಶಕ್ತಿಯಾಗಲಿ: ದಿನೇಶ ಪೂಜಾರ